ಚಿಕ್ಕಬಳ್ಳಾಪುರದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ; ಅತ್ಯಾಚಾರ ಎಸಗಿ ಕೊಂದಿರುವ ಶಂಕೆ

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದೊಡ್ಡತೇಕಹಳ್ಳಿ ಗ್ರಾಮದ ಹೊರ ಹೊಲದ ಹುಣಸೆ ಮರದ ಬಳಿ ವಿವಾಹಿತ ಮಹಿಳೆ ಶವ ಪತ್ತೆಯಾಗಿದೆ. ಕೈ ಕಾಲುಗಳನ್ನು ನರಿ, ನಾಯಿಗಳು ತಿಂದು ಹಾಕಿವೆ. ಕೊಳೆತ ಸ್ಥಿತಿಯಲ್ಲಿರುವ ಮಹಿಳೆಯ ಶವ ಯಾರದ್ದು? ಇಲ್ಲಿಗೆ ಏಕೆ ಬಂದಿದ್ದರು? ಎನ್ನುವುದು ಯಾರಿಗೂ ಗೊತ್ತಿಲ್ಲ.

ಚಿಕ್ಕಬಳ್ಳಾಪುರದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ; ಅತ್ಯಾಚಾರ ಎಸಗಿ ಕೊಂದಿರುವ ಶಂಕೆ
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು

Updated on: Apr 26, 2021 | 2:48 PM

ಚಿಕ್ಕಬಳ್ಳಾಪುರ: ಹುಣಸೆ ಮರವೊಂದರ ಕೆಳಗೆ ವಿವಾಹಿತ ಮಹಿಳೆಯೊರ್ವಳ ಶವ ಪತ್ತೆಯಾಗಿದ್ದು, ಶವದ ಬಳಿ ಸಾವಿರ ರೂಪಾಯಿ ಇರುವ ಪರ್ಸ್, ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಮಹಿಳೆಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆಯಾ ಅಥವಾ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಎನ್ನುವ ಅನುಮಾನ ಮೂಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದೊಡ್ಡತೇಕಹಳ್ಳಿ ಗ್ರಾಮದ ಹೊರ ಹೊಲದ ಹುಣಸೆ ಮರದ ಬಳಿ ವಿವಾಹಿತ ಮಹಿಳೆ ಶವ ಪತ್ತೆಯಾಗಿದೆ. ಕೈ ಕಾಲುಗಳನ್ನು ನರಿ, ನಾಯಿಗಳು ತಿಂದು ಹಾಕಿವೆ. ಕೊಳೆತ ಸ್ಥಿತಿಯಲ್ಲಿರುವ ಮಹಿಳೆಯ ಶವ ಯಾರದ್ದು? ಇಲ್ಲಿಗೆ ಏಕೆ ಬಂದಿದ್ದರು? ಎನ್ನುವುದು ಯಾರಿಗೂ ಗೊತ್ತಿಲ್ಲ. ಪಕ್ಕದ ಜಮೀನಿನ ರೈತರೊಬ್ಬರು ನಾಯಿಗಳು ಶವ ಎಳೆದಾಡುವುದನ್ನು ನೋಡಿ ಶವ ಬಿದ್ದಿರುವ ಜಮೀನಿನ ಮಾಲೀಕನಿಗೆ ಮಾಹಿತಿ ನೀಡಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ದಿಬ್ಬೂರಹಳ್ಳಿ ಪೊಲೀಸರು ಸ್ಥಳ ತನಿಖೆ ನಡೆಸಿದ್ದು, ಮಹಿಳೆ ವಾರದ ಹಿಂದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಹುಣಸೆ ಮರಕ್ಕೆ ವೇಲ್​ನಿಂದ ಬಿಗಿದ ಸ್ಥಿತಿಯಲ್ಲಿ ಬಟ್ಟೆ ತೂಗಾಡುತ್ತಿದೆ. ಶವ ನೆಲಕ್ಕೆ ಬಿದ್ದಾಗ ನಾಯಿಗಳು ಎಲೆದಾಡಿರಬಹುದೆಂದು ಹೇಳಲಾಗುತ್ತಿದೆ. ತನಿಖೆ ನಡೆಸುತ್ತಿರುವ ಪೊಲೀಸರು ಶವದ ಗುರುತು ಹಿಡಿಯಲು ಮುಂದಾಗಿದ್ದಾರೆ.

ಅಪರಿಚಿತ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ದೊರೆತಿದ್ದು, ಹತ್ತು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅತ್ಯಾಚಾರ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ಸ್ಥಳದಲ್ಲೆ ಸಿಕ್ಕ ಸಾಕ್ಷ್ಯಾಧಾರಗಳನ್ನು ಹಿಡಿದು ತನಿಖೆ ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ

18ರಿಂದ 45 ವರ್ಷದವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ಉಚಿತ; ಸಿಎಂ ಯಡಿಯೂರಪ್ಪ ಘೋಷಣೆ

ಕೊರೊನಾ ಅಟ್ಟಹಾಸ: ತುಮಕೂರಿನಲ್ಲಿ 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿ ಸಾವು

(Unknown woman dead body found in Chikkaballapur)