Ramadan: ಈದ್ಗಾ ಮೈದಾನದಲ್ಲಿ ಮುಸ್ಲಿಮರ ನಡುವೆ ನೂಕಾಟ ತಳ್ಳಾಟ; ನೆಲಕ್ಕೆ ಬಿದ್ದ ಆರ್​ವಿ ದೇಶಪಾಂಡೆ

ಹಳಿಯಾಳ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬಕ್ಕೆ ಶುಭಕೋರಲು ಬಂದ ಕಾಂಗ್ರೆಸ್​ನ ಆರ್​ವಿ ದೇಶಪಾಂಡೆ ಭಾಷಣಕ್ಕೆ ಮಸೀದಿ ಸಮಿತಿ ಸದಸ್ಯರು ಅಡ್ಡಿ ಪಡಿಸಿದ್ದಾರೆ. ಈ ಹಿನ್ನೆಲೆ ಮುಸ್ಲಿಂ ಅಭಿಮಾನಿಗಳು ಮತ್ತು ಸಮಿತಿ ಸದಸ್ಯರ ನಡುವೆ ನೂಕಾಟ ತಳ್ಳಾಟ ನಡೆಯಿತು.

Ramadan: ಈದ್ಗಾ ಮೈದಾನದಲ್ಲಿ ಮುಸ್ಲಿಮರ ನಡುವೆ ನೂಕಾಟ ತಳ್ಳಾಟ; ನೆಲಕ್ಕೆ ಬಿದ್ದ ಆರ್​ವಿ ದೇಶಪಾಂಡೆ
ಹಳಿಯಾಳ ಈದ್ಗಾ ಮೈದಾನದಲ್ಲಿ ಜಗಳ (ಎಡಚಿತ್ರ) ಮತ್ತು ಆರ್​ವಿ ದೇಶಪಾಂಡೆ (ಬಲಚಿತ್ರ)

Updated on: Apr 22, 2023 | 3:33 PM

ಕಾರವಾರ: ರಂಜಾನ್ ಹಬ್ಬದ (Ramadan Festival) ಪ್ರಯುಕ್ತ ಮುಸ್ಲಿಂ ಸಮುದಾಯದವರಿಗೆ ಶುಭಕೋರಲೆಂದು ಬಂದ ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸಚಿವ ಆರ್​ವಿ ದೇಶಪಾಂಡೆ (RV Deshpande) ಭಾಷಣಕ್ಕೆ ಮಸೀದಿ ಸಮಿತಿ ಸದಸ್ಯರು ಅಡ್ಡಿಪಡಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಈದ್ಗಾ ಮೈದಾನದಲ್ಲಿ (Idgah Maidan) ನಡೆದಿದೆ. ಈ ವೇಳೆ ಆಕ್ರೋಶಗೊಂಡ ದೇಶಪಾಂಡೆ ಮುಸ್ಲಿಂ ಅಭಿಮಾನಿಗಳು ಮಸೀದಿ ಸಮಿತಿ ಸದಸ್ಯರ ವಿರುದ್ಧ ತಿರುಗಿಬಿದ್ದು ವಾಗ್ವಾದಕ್ಕಿ ಇಳಿದರು. ಸುಮಾರು ಒಂದು ಗಂಟೆಗಳ ಕಾಲ ದೇಶಪಾಂಡೆ ಫ್ಯಾನ್ಸ್ ಮತ್ತು ಸಮಿತಿ ಸದಸ್ಯರ ನಡುವೆ ನೂಕಾಟ ತಳ್ಳಾಟ ಮುಂದುವರಿಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಮಧ್ಯಪ್ರವೇಶಿಸಿದ ಪೊಲೀಸರು ಮತ್ತು ಕೆಎಸ್​ಆರ್​ಪಿ ಸಿಬ್ಬಂದಿ ಕೊನೆಗೂ ಪರಿಸ್ಥಿತಿ ಹತೋಟಿಗೆ ತಂದರು.

ರಂಜಾನ್ ಹಬ್ಬದ ಪ್ರಯುಕ್ತ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರು ಜಮಾಯಿಸಿದ್ದರು. ಈ ವೇಳೆ ಶುಭಾಶಯ ಕೋರಲು ಮೈದಾನಕ್ಕೆ ಆರ್​ವಿ ದೇಶಪಾಂಡೆ ಆಗಮಿಸಿದ್ದಾರೆ. ಅದರಂತೆ ಶುಭಾಶಯ ತಿಳಿಸಲು ಅಜರುದ್ದೀನ್ ಬಸ್ರಿಕಟ್ಟೆ ಎಂಬವರು ದೇಶಪಾಂಡೆಗೆ ಮೈಕ್ ನೀಡಿದ್ದಾರೆ. ಈ ವೇಳೆ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು ಚುನಾವಣಾ ಭಾಷಣ ಮಾಡುತ್ತಾರೆಂದು ಮಸೀದಿ ಸಮಿತಿ ಸದಸ್ಯರು ಮೈಕ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ.

ಇದನ್ನೂ ಓದಿ: Ramadan Food: ಫ್ರೇಜರ್ ಟೌನ್ ರಂಜಾನ್ ಆಹಾರ ಮೇಳಕ್ಕೆ ನಿವಾಸಿಗಳಿಂದ ಭಾರೀ ವಿರೋಧ

ಸಮಿತಿ ಸದಸ್ಯರ ನಡೆಯಿಂದ ಕೆರಳಿದ ಆರ್.ವಿ.ದೇಶಪಾಂಡೆ ಪರ ಮುಸ್ಲಿಂ ಅಭಿಮಾನಿಗಳು ಸಮಿತಿ ಸದಸ್ಯರೊಂದಿಗೆ ಮಾತಿಗೆ ಇಳಿದಿದ್ದಾರೆ. ಪ್ರತೀ ವರ್ಷ ಶುಭಾಶಯ ಕೋರುತ್ತಿದ್ದ ಆರ್.ವಿ.ದೇಶ್‌ಪಾಂಡೆಗೆ ಈ ಬಾರಿ ಅಡ್ಡಿಪಡಿಸಿದ್ದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು. ಹೀಗೆ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಸುಮಾರು 1 ಗಂಟೆ ಕಾಲ ನಡೆದ ತಳ್ಳಾಟ ನೂಕಾಟ ನಡೆಯಿತು. ಘಟನೆ ವೇಳೆ ದೇಶಪಾಂಡೆ ಅವರು ನೆಲಕ್ಕೆ ಬಿದ್ದರೂ ಎನ್ನಲಾಗುತ್ತಿದೆ. ಕೊನೆಗೆ ಹಳಿಯಾಳ ಪೊಲೀಸರು ಮತ್ತು KSRP ಸಿಬ್ಬಂದಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಈ ಘಟನೆ ನಂತರ ಜೆಡಿಎಸ್ ಅಭ್ಯರ್ಥಿ ಘೋಟ್ನೇಕರ್ ಮೈದಾನಕ್ಕೆ ಭೇಟಿ ನೀಡಿ ರಂಜಾನ್ ಹಬ್ಬದ ಶುಭಾಶಯ ಕೋರಿ ತೆರಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:23 pm, Sat, 22 April 23