Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramadan Food: ಫ್ರೇಜರ್ ಟೌನ್ ರಂಜಾನ್ ಆಹಾರ ಮೇಳಕ್ಕೆ ನಿವಾಸಿಗಳಿಂದ ಭಾರೀ ವಿರೋಧ

ರಂಜಾನ್ ತಿಂಗಳಲ್ಲಿ ಫ್ರೇಜರ್ ಟೌನ್​ನಲ್ಲಿ ಆಯೋಜಿಸಲ್ಪಡುವ ರಂಜಾನ್ ಆಹಾರ ಮೇಳಕ್ಕೆ ಅಲ್ಲಿನ ನಿವಾಸಿಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ.

Ramadan Food: ಫ್ರೇಜರ್ ಟೌನ್ ರಂಜಾನ್ ಆಹಾರ ಮೇಳಕ್ಕೆ ನಿವಾಸಿಗಳಿಂದ ಭಾರೀ ವಿರೋಧ
ರಂಜಾನ್ ಆಹಾರ ಮೇಳ
Follow us
ಆಯೇಷಾ ಬಾನು
|

Updated on:Apr 18, 2023 | 7:40 AM

ಬೆಂಗಳೂರು: ಮುಸ್ಲಿಮರ ಪವಿತ್ರ ರಂಜಾನ್ ಹಬ್ಬದ ಸಮಯದಲ್ಲಿ ಬೆಂಗಳೂರಿನ ಹಲವು ಕಡೆ ಸಂಜೆಯಾಗುತ್ತಿದ್ದಂತೆ ಆಹಾರ ಮೇಳಗಳನ್ನು ಆಯೋಜಿಸಲಾಗುತ್ತೆ. ಇದರಲ್ಲಿ ಫ್ರೇಜರ್ ಟೌನ್‌ ಪ್ರಮುಖ ಸ್ಥಳ. ಫ್ರೇಜರ್ ಟೌನ್‌ನಲ್ಲಿ ನಡೆಯುವ ರಂಜಾನ್ ಆಹಾರ ಮೇಳವು ರಂಜಾನ್​ನ ಪ್ರಮುಖ ಕಾರ್ಯಕ್ರಮ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಭಕ್ಷ್ಯಗಳನ್ನು ಆನಂದಿಸುತ್ತಾರೆ. ಈ ಮೇಳದ ಸಮಯದಲ್ಲಿ ಬರುವ ಸಾವಿರಾರು ಆಹಾರ ಪ್ರಿಯರಿಂದ ಇಲ್ಲಿ ಕಾಲ್ತುಳಿವಾಗುತ್ತಿದೆಯಂತೆ. ಹಾಗೂ ಇಲ್ಲಿನ ನಿವಾಸಿಗಳಿಗೆ ಸಮಸ್ಯೆಯಾಗುತ್ತಿದೆಯಂತೆ. ಹೀಗಾಗಿ ಈ ವರ್ಷ ಆಹಾರ ಮೇಳ ಆಯೋಜಿಸಲ್ಪಡುವ ಸ್ಥಳದ ಅಕ್ಕಪಕ್ಕದ ನಿವಾಸಿಗಳು ಮೇಳಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿಗೆ ಪತ್ರ ಬರೆದಿದ್ದಾರೆ.

ಫ್ರೇಜರ್ ಟೌನ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ಎಫ್‌ಟಿಆರ್‌ಡಬ್ಲ್ಯೂಎ)ವು ರಂಜಾನ್ ಆಹಾರ ಮೇಳದಿಂದ ಈ ಪ್ರದೇಶದಲ್ಲಿ ಭಾರಿ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ರಸ್ತೆಯಲ್ಲಿ ಕಸ ಮತ್ತು ತ್ಯಾಜ್ಯದ ರಾಶಿಗಳು ಕಂಡುಬರುತ್ತಿವೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ಪತ್ರ ಬರೆದಿದೆ.

“ರಂಜಾನ್ ಆಹಾರ ಮೇಳಕ್ಕೆ ಯಾವುದೇ ಧಾರ್ಮಿಕ ಪ್ರಾಮುಖ್ಯತೆ ಇಲ್ಲ. ಮತ್ತು ಯಾವುದೇ ನಿವಾಸಿಗಳು ಅಥವಾ ಮಸೀದಿಗೆ ಸಂಬಂಧಿಸಿದ ಮುಖಂಡರು ಈ ಕಾರ್ಯಕ್ರಮದ ಪರವಾಗಿಲ್ಲ. ನಾವು ಈ ಮೇಳ ಅಥವಾ ಶಾಪಿಂಗ್‌ನಲ್ಲಿ ಭಾಗವಹಿಸುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ನಾವು ಇಲ್ಲಿನ ನಿವಾಸಿಗಳು, ಅಂಗಡಿ ಮಾಲೀಕರು ಮತ್ತು ರಂಜಾನ್ ಸಮಯದಲ್ಲಿ ಪ್ರಾರ್ಥನೆ ಮಾಡುವ ಜನರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ನಿವಾಸಿಗಳ ಸಂಘ ಪತ್ರದಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: Ganga-Jamuni Tehzeeb: ಉತ್ತರ ಪ್ರದೇಶದ ಅಜಂಗಢ್ ಗ್ರಾಮದಲ್ಲಿ ರಂಜಾನ್ ತಿಂಗಳು ಮುಸಲ್ಮಾನರನ್ನು ಬೆಳಗಿನ ಸೆಹ್ರಿಗೆ ಎಬ್ಬಿಸೋದು ಒಬ್ಬ ಹಿಂದೂ!

ಇನ್ನು ಈ ಆಹಾರ ಮೇಳದಲ್ಲಿ ಬಹುತೇಕ ಹೊರಗಿನವರಿಂದ ಬೀದಿಯಲ್ಲಿ ಅಂಗಡಿಗಳನ್ನು ತೆರೆದಿದ್ದು, ಇಲ್ಲಿಗೆ ತಿನ್ನಲು ಬರುವವರೂ ಸಹ ಹೊರಗಿನವರೇ ಆಗಿದ್ದಾರೆ. ನಾವು ನಮ್ಮ ಏರಿಯಾದ ಪ್ರಶಾಂತತೆಯನ್ನು ಕಳೆದುಕೊಂಡಿದ್ದೇವೆ ಮತ್ತು ಇದನ್ನು ತಕ್ಷಣವೇ ನಿಲ್ಲಿಸಲು ವಿನಂತಿಸುತ್ತೇವೆ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ವಿಡಿಯೋ ಹಂಚಿಕೊಂಡ ಪಿಸಿ ಮೋಹನ್

ರಸ್ತೆಯಲ್ಲಿ ತ್ಯಾಜ್ಯ ಎಸೆದಿರುವುದು, ರಸ್ತೆಗಳು ಕಸದಿಂದ ತುಂಬಿದ ದೃಶ್ಯದ ವಿಡಿಯೋವನ್ನು ಬಿಜೆಪಿ ಸಂಸದ ಪಿಸಿ ಮೋಹನ್ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮತ್ತು ಅನೇಕ ಮಂದಿ ರಂಜಾನ್ ಆಹಾರ ಮೇಳವನ್ನು ನಿಲ್ಲಿಸುವಂತೆ ಕಮೆಂಟ್ ಮಾಡಿ ಒತ್ತಾಯಿಸಿದ್ದಾರೆ.

ಮತ್ತೊಂದೆಡೆ ರಂಜಾನ್ ಸಮಯದಲ್ಲಿ ಆಹಾರ ಮೇಳಗಳನ್ನು ಮಾಡುವ ಆಯೋಜನರು ಮಾತನಾಡಿದ್ದು, ಈ ಕಾರ್ಯಕ್ರಮವನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಮುಂಬರುವ ಚುನಾವಣೆಯಿಂದ ಈ ವರ್ಷ ಈ ಮೇಳಕ್ಕೆ ರಾಜಕೀಯ ಬಣ್ಣ ಹಚ್ಚಲಾಗಿದೆ. ರಂಜಾನ್ ಮೇಳ ಅನೇಕರಿಗೆ ಆಹಾರ ನೀಡುತ್ತೆ. ವಿವಿಧ ರೀತಿಯ, ವಿಶೇಷ ಖಾದ್ಯಗಳನ್ನು ಸವಿಯುವ ಅವಕಾಶ ಸಿಗುತ್ತೆ ಎಂದರು. ಫ್ರೇಜರ್ ಟೌನ್ ರಂಜಾನ್ ಮೇಳವು ವೈವಿಧ್ಯಮಯ ಮಾಂಸಾಹಾರಿ ಭಕ್ಷ್ಯಗಳಿಗೆ, ವಿಶೇಷವಾಗಿ ಮಧ್ಯಪ್ರಾಚ್ಯ ಪಾಕಪದ್ಧತಿಗಳಿಗೆ ಹೆಸರುವಾಸಿಯಾಗಿದೆ.

ಬೆಂಗಳೂರಿಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:40 am, Tue, 18 April 23

ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ