ಆಡುತ್ತಿದ್ದಾಗ ಕಬ್ಬಿಣದ ಪೈಪ್​ ಒಳಗೆ ಸಿಲುಕಿದ ಒಂದೂವರೆ ವರ್ಷದ ಮಗುವಿನ ಕೈ!

ಮಕ್ಕಳು ಆಟವಾಡುವಾಗ ಪೋಷಕರು ಅವರ ಮೇಲೆ ಒಂದು ಕಣ್ಣಿಟ್ಟಿರು. ಇಲ್ಲವಾದರೆ ಮಕ್ಕಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ, ಬೆಂಗಳೂರಿನಲ್ಲಿ ಆಡುತ್ತಿದ್ದ ಸಣ್ಣ ಮಗುವಿನ ಕೈ ಕಬ್ಬಿಣದ ಪೈಪ್ ಒಳಗೆ ಸಿಕ್ಕಿಹಾಕಿಕೊಂಡಿರುವುದು.

ಆಡುತ್ತಿದ್ದಾಗ ಕಬ್ಬಿಣದ ಪೈಪ್​ ಒಳಗೆ ಸಿಲುಕಿದ ಒಂದೂವರೆ ವರ್ಷದ ಮಗುವಿನ ಕೈ!
ಕಬ್ಬಿಣ ಪೈಪ್ ಒಳಗೆ ಸಿಲುಕಿದ ಮಗುವಿನ ಕೈ ಹೊರತೆಗೆಯುತ್ತಿರುವುದು
Follow us
Rakesh Nayak Manchi
|

Updated on:Apr 17, 2023 | 10:36 PM

ಬೆಂಗಳೂರು: ಮಕ್ಕಳು ಆಟವಾಡುವಾಗ ಪೋಷಕರು ಅವರ ಮೇಲೆ ಒಂದು ಕಣ್ಣಿಟ್ಟಿರು. ಇಲ್ಲವಾದರೆ ಮಕ್ಕಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ, ಬೆಂಗಳೂರಿನಲ್ಲಿ (Bengaluru) ಆಡುತ್ತಿದ್ದ ಸಣ್ಣ ಮಗುವಿನ ಕೈ ಕಬ್ಬಿಣದ ಪೈಪ್ ಒಳಗೆ ಸಿಕ್ಕಿಹಾಕಿಕೊಂಡಿರುವುದು. ಹೌದು, ಡೈರಿ ಕಾಲೋನಿಯ ಶಿವನ ದೇವಸ್ಥಾನದಲ್ಲಿ ಆಡುಗೋಡಿ ನಿವಾಸಿ ಲೋಕೇಶ್ ಎಂಬುವರ ಮಗು ಸಚ್ಚು ಆಟವಾಡುತ್ತಿತ್ತು. ಹೇಳಿಕೇಳಿ ಸಣ್ಣ ಮಗು, ಪಾಪ ಅದಕ್ಕೇನು ಗೊತ್ತು? ಆಟವಾಡುತ್ತಾ ಕಬ್ಬಿಣದ ಪೈಪ್ ಒಳಗೆ ಕೈ ಹಾಕಿದ್ದು, ಅಲ್ಲೇ ಬಾಕಿಯಾಗಿ ಪರದಾಡುವಂತಾಗಿದೆ.

ಇಂದು ಸಂಜೆ ಲೋಕೇಶ್ ದಂಪತಿ ತನ್ನ ಒಂದೂವರೆ ವರ್ಷದ ಮಗು ಸಚ್ಚುವಿನೊಂದಿಗೆ ದೇವಸ್ಥಾನಕ್ಕೆ ಹೋಗಿದ್ದರು. ಈ ವೇಳೆ ಮಗುವನ್ನ ದೇವಸ್ಥಾನದ ಆವರಣದಲ್ಲಿ ಆಟವಾಡಲು ಬಿಟ್ಟಿದ್ದರು. ಹೀಗೆ ಆಡುತ್ತಿದ್ದ ಸಚ್ಚು ಕಂಬ ನೆಡಲು ಅಳವಡಿಸಿದ್ದ ಕಬ್ಬಿಣದ ಪೈಪ್​ನೊಳಗೆ ಕೈ ಇಟ್ಟಿದೆ. ಮಗುವಿನ ಕೈಯಲ್ಲಿ ಬೆಳ್ಳಿ ಕಡಗ ಇದ್ದಿದ್ದರಿಂದ ಪೈಪ್​ನೊಳಗೆ ಸಿಲುಕಿಕೊಂಡಿದೆ. ಸುಮಾರು ಒಂದೂವರೆ ಅಡಿ ಉದ್ದದ ಪೈಪ್​ನೊಳಗೆ ಸಿಲುಕಿದೆ.

ಇದನ್ನೂ ಓದಿ: ಕೆಟ್ಟು ನಿಂತ ಆಟೋದಲ್ಲಿ ಕಂತೆ ಕಂತೆ ನೋಟು; ಯಾವ ಪಕ್ಷಕ್ಕೆ ಸೇರಿದ್ದು? ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ

ಇನ್ನು, ಮಗುವಿನ ಕೈ ಕಬ್ಬಿಣದ ಪೈಪ್ ಒಳಗೆ ಸಿಲುಕಿದ್ದನ್ನು ನೋಡಿದ ಸ್ಥಳದಲ್ಲಿದ್ದ ಟ್ರಾಫಿಕ್ ಕಾನ್​ಸ್ಟೇಬಲ್ ಹನುಮಂತ್ ಅವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದೆ. ಅದರಂತೆ ಮಣ್ಣನ್ನು ಅಗೆದು ಕಬ್ಬಿಣದ ಪೈಪ್ ಕಟ್ ಮಾಡಿ ಮಗುವಿನ ಕೈ ಹೊರತೆಗೆಯಲಾಯಿತು. ಸುಮಾರು ಎರೆಡು ಗಂಟೆಗಳ ಕಾಲ ಹರಸಾಹಸ ಪಟ್ಟು ಮಗುವಿನ ಕೈ ಹೊರತೆಗೆಯುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:36 pm, Mon, 17 April 23