AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಬ್ಬನ್ ಪಾರ್ಕ್​ಗೆ ಭೇಟಿ ನೀಡುವವರಿಗೆ ಹೊಸ ನಿಯಮ: ಆನ್​ಲೈನ್ ಅಭಿಯಾನಕ್ಕೆ ಬೆಂಗಳೂರಿಗರ ಭಾರಿ ಬೆಂಬಲ

ಕಬ್ಬನ್ ಪಾರ್ಕ್​ ಭೇಟಿ ನೀಡುವವರಿಗೆ ಹೊಸ ನಿಯಮಗಳನ್ನು ವಿಧಿಸಲಾಗಿದ್ದು ಇದನ್ನು ವಿರೋಧಿಸಿ ಬೆಂಗಳೂರಿನಲ್ಲಿ ಆನ್‌ಲೈನ್ ಅರ್ಜಿಯೊಂದು ಹರಿದಾಡುತ್ತಿದ್ದು ಸಹಿ ಸಂಗ್ರಹಿಸಲಾಗುತ್ತಿದೆ.

ಕಬ್ಬನ್ ಪಾರ್ಕ್​ಗೆ ಭೇಟಿ ನೀಡುವವರಿಗೆ ಹೊಸ ನಿಯಮ: ಆನ್​ಲೈನ್ ಅಭಿಯಾನಕ್ಕೆ ಬೆಂಗಳೂರಿಗರ ಭಾರಿ ಬೆಂಬಲ
ಕಬ್ಬನ್ ಪಾರ್ಕ್
ಆಯೇಷಾ ಬಾನು
| Edited By: |

Updated on:Apr 17, 2023 | 4:05 PM

Share

ಬೆಂಗಳೂರು: ವಾರಾಂತ್ಯಗಳಲ್ಲಿ, ಸಂಜೆ ವೇಳೆ ಪರಿಸರದ ಆನಂದ ಸವಿಯಲು ಕಬ್ಬನ್ ಪಾರ್ಕ್​ಗೆ ಹೋಗುತ್ತಿದ್ದ ಮಂದಿಗೆ ಕೆಲವು ನಿಯಮಗಳನ್ನು ಹೇರಲಾಗಿದೆ(Cubbon Park New Rules) . ಕಬ್ಬನ್ ಪಾರ್ಕ್​ಗೆ ಭೇಟಿ ನೀಡುವವರು ಪಾರ್ಕ್​ನಲ್ಲಿ ತಿಂಡಿ ತಿನ್ನುವಂತಿಲ್ಲ. ಪ್ರೇಮಿಗಳು ಅಶ್ಲೀಲವಾಗಿ ವರ್ತಿಸುವಂತಿಲ್ಲ. ಮರ ಏರುವುದು, ಪರಿಸರವನ್ನು ಹಾಳು ಮಾಡುವಂತಿಲ್ಲ ಎಂದು ಹೊಸ ನಿಯಮ ತರಲಾಗಿದೆ. ಸದ್ಯ ಈಗ ಈ ಹೊಸ ನಿಯಮಗಳನ್ನು ವಿರೋಧಿಸಿ ಬೆಂಗಳೂರಿನಲ್ಲಿ ಆನ್‌ಲೈನ್ ಅರ್ಜಿಯೊಂದು ಹರಿದಾಡುತ್ತಿದ್ದು ಸಹಿ ಸಂಗ್ರಹಿಸಲಾಗುತ್ತಿದೆ. ಹೊಸ ನಿಯಮಗಳ ವಿರುದ್ಧ ಅಭಿಯಾನವೊಂದನ್ನು ಹಮ್ಮಿಕೊಳ್ಳಲಾಗಿದ್ದು ಸೋಮವಾರ, 11 ಗಂಟೆ ಒಳಗೆ 1,290 ಕ್ಕೂ ಹೆಚ್ಚು ಜನರು ಈ ಅಭಿಯಾನದ ಅರ್ಜಿಗೆ ಸಹಿ ಹಾಕಿದ್ದಾರೆ.

ಲಾಭರಹಿತ ಸಂಸ್ಥೆ (NGO) Jhatkaa.org ವಬ್​ ಸೈಟ್​​ ನಲ್ಲಿ ಈ ಬಗ್ಗೆ ಸಲ್ಲಿಸಿರುವ ಆನ್‌ಲೈನ್ ಅರ್ಜಿಯಲ್ಲಿ, ಕಾನೂನು ನಿಯಮಗಳು ಸುರಕ್ಷತೆಯ ಸೋಗಿನಲ್ಲಿ ನೈತಿಕ ಪೊಲೀಸಿಂಗ್​ಗೆ ದಾರಿ ಮಾಡಿಕೊಡುವಂತಿದೆ ಈ ಹೊಸ ನಿಯಮಗಳು ಎಂದು ಉಲ್ಲೇಖಿಸಲಾಗಿದೆ.

ಈ ರೀತಿಯ ನಿಯಮಗಳನ್ನು ಮಾಡುವ ಬದಲಿಗೆ, ಕಬ್ಬನ್ ಪಾರ್ಕ್‌ನಲ್ಲಿ ಹೆಚ್ಚಿನ ಡೆಸ್ಟ್ ಬಿನ್​ಗಳನ್ನು ಇಡಿ. ಮತ್ತು ಸರಿಯಾದ ಸೂಚನೆಗಳನ್ನು ನೀಡಿ. ಇದರಿಂದ ಕಬ್ಬನ್ ಪಾರ್ಕ್​ಗೆ ಬರುವವರು ತಮ್ಮ ಆಹಾರ ತ್ಯಾಜ್ಯವನ್ನು ಪ್ರತ್ಯೇಕವಾದ ಡೆಸ್ಟ್ ಬಿನ್​ಗಳಲ್ಲಿ ಎಸೆಯುವಂತಾಗುತ್ತೆ. ಆಗ ಕಬ್ಬನ್ ಪಾರ್ಕ್ ತನ್ನ ಅಂದವನ್ನು ಕಳೆದುಕೊಳ್ಳುವುದಿಲ್ಲ. ಕಬ್ಬನ್ ಪಾರ್ಕ್ ಬೆಂಗಳೂರಿನ ಐಕಾನಿಕ್ ಸ್ಥಳಗಳಲ್ಲಿ ಒಂದಾಗಿದೆ. ನಗರ ಜೀವನದ ಜಂಜಾಟದ ನಡುವೆ ನೆಮ್ಮದಿಯ, ಸುಂದರ ವಾತಾವರಣವನ್ನು ಸೃಷ್ಟಿಸುವ ಈ ತಾಣಕ್ಕೆ ಎಲ್ಲಾ ವಯಸ್ಸಿನ ಜನರು ಬಂದು ಸೇರುತ್ತಾರೆ. ಒಂದಷ್ಟು ಸಮಯ ಕಳೆದು ಮನಸ್ಸು ನಿರಾಳ ಮಾಡಿಕೊಳ್ಳುತ್ತಾರೆ. ಇದು 300 ಎಕರೆಯ ಹಸಿರು ಸ್ವರ್ಗವಾಗಿದ್ದು, ದಶಕಗಳಿಂದ ಬೆಂಗಳೂರಿನ ಅತ್ಯಂತ ಜನಪ್ರಿಯ ಹಾಗೂ ಅತಿ ಹೆಚ್ಚು ಜನ ಭೇಟಿ ನೀಡುವ ಸ್ಥಳವಾಗಿದೆ ಎಂದು Jhatkaa.org ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: Cubbon Park New Rules: ಕಬ್ಬನ್ ಪಾರ್ಕ್​ಗೆ ಹೋಗುವ ಪ್ರೇಮಿಗಳೇ ಎಚ್ಚರ! ಈಗ ಬಂದಿದೆ ಹೊಸ ನಿಯಮ

ಆಹಾರ ಸೇವನೆ, ಆಟ ಆಡುವುದು, ಫೋಟೋಗಳನ್ನು ತೆಗೆಯುವುದು, ಪ್ರೇಮಿಗಳು ಪರಸ್ಪರ ಹತ್ತಿರ ಕೂತು ಅಸಭ್ಯವಾಗಿ ವರ್ತಿಸುವುದು ಸೇರಿದಂತೆ ಇತರೆ ಸಮಸ್ಯೆಗಳು ಕಬ್ಬನ್ ಪಾರ್ಕ್​ನಲ್ಲಿ ಹೆಚ್ಚಾಗುತ್ತಿದ್ದು ಜನರು ಇದರಿಂದ ಮುಜುಗರಕ್ಕೆ ಇಡಾಗುತ್ತಿದ್ದಾರೆ ಎಂದು ಕೆಲವು ವರದಿಗಳು ಬಂದ ಕಾರಣ ಈ ನಿಯಮಗಳನ್ನು ಜಾರಿ ಮಾಡಿ ಇಲ್ಲಿನ ಸೆಕ್ಯೂರಿಟಿ ಗಾರ್ಡ್​ಗಳೇ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನು ಈ ಹೊಸ ನಿರ್ಬಂಧಗಳಿಗೆ ಬೆಂಗಳೂರಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಈ ನಿಯಮಗಳನ್ನು ವಿರೋಧಿಸಿದ್ದು ಮತ್ತೊಂದಷ್ಟು ಮಂದಿ ಬೆಂಬಲಿಸಿದ್ದಾರೆ.

ಕಬ್ಬನ್ ಪಾರ್ಕ್​ನ್ನು ಸಂಪೂರ್ಣವಾಗಿ ವಿನಾಶದಿಂದ ರಕ್ಷಿಸಲು ಆಹಾರ ನಿಷೇಧ ಎಂಬ ನಿಯಮವು ಅತ್ಯಂತ ಅಗತ್ಯದ್ದಾಗಿದೆ. ಅನೇಕ ಮಂದಿ ಆಹಾರವನ್ನು ಪ್ಯಾಕ್ ಮಾಡಿಕೊಂಡು ಬಂದು ಪಾರ್ಕ್​ನಲ್ಲಿ ತಿನ್ನುತ್ತಾರೆ. ಇದರಿಂದ ಉದ್ಯಾನವನ ಸಂಪೂರ್ಣ ಕಸದ ತೊಟ್ಟಿಯಂತಾಗಿರುತ್ತದೆ. ಪಾರ್ಕ್​ನ ಸ್ವಚ್ಛತೆ ಎಲ್ಲರಿಗೂ ಸೇರಿದ್ದು ಎಂದು ಇಲ್ಲಿಗೆ ಭೇಟಿ ನೀಡುವ ಮಹಿಳೆಯೊಬ್ಬರಿ ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 4:00 pm, Mon, 17 April 23

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?