Karnataka Assembly Polls 2023: ಬೆಂಗಳೂರು ನಗರದಿಂದ 45 ರೌಡಿ ರೌಡಿಶೀಟರ್ಗಳನ್ನ ಗಡಿಪಾರು ಮಾಡಲು ನಿರ್ಧಾರ
ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವು ದಿನಗಳು ಬಾಕಿ ಉಳಿದಿದ್ದು, ಅದರಂತೆ ಚುನಾವಣೆ ಸಮಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಬೆಂಗಳೂರು ನಗರದಿಂದ 45 ರೌಡಿ ರೌಡಿಶೀಟರ್ಗಳನ್ನ ಗಡಿಪಾರು ಮಾಡಲು ನಿರ್ಧಾರ ಮಾಡಲಾಗಿದೆ.
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Election)ಗೆ ಇನ್ನೇನು ಕೆಲವು ದಿನಗಳು ಬಾಕಿ ಉಳಿದಿದ್ದು, ಅದರಂತೆ ಚುನಾವಣೆ ಸಮಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಈಗಾಗಲೇ ಸೂಕ್ತ ಕ್ರಮಕೈಗೊಳ್ಳಲಾಗಿದೆ. ಈ ಹಿನ್ನೆಲೆ ನಗರದ ಸುಮಾರು 45 ಪ್ರಮುಖ ರೌಡಿಗಳನ್ನು ಗಡಿಪಾರು ಮಾಡಲು ನಿರ್ಧರಿಸಲಾಗಿದ್ದು, ಈಗಾಗಲೇ 12 ರೌಡಿಗಳನ್ನ ಗಡಿಪಾರು ಮಾಡಲು ಆಯಾ ವಿಭಾಗದ ಡಿಸಿಪಿಗಳು ಆದೇಶ ಹೊರಡಿಸಿದ್ದಾರೆ. ಉಳಿದಂತೆ 33 ರೌಡಿಗಳ ಗಡಿಪಾರಿಗೆ ಸಿದ್ದತೆ ನಡಿತಾಯಿದ್ದು, ಕೌನ್ಸಿಲಿಂಗ್ ಆಗುತ್ತಿದೆಯಂತೆ. ಇನ್ನೊಂದು ವಾರದ ಒಳಗೆ ನಗರ ಪೊಲೀಸರು ಗಡಿಪಾರು ಮಾಡಲಿದ್ದಾರೆ.
ಹಾಗಾದ್ರೆ ಯಾವ ಯಾವ ಡಿವಿಷನ್ನಲ್ಲಿ ಎಷ್ಟೇಷ್ಟು ರೌಡಿಗಳ ಗಡಿಪಾರು!
ಪೂರ್ವ ವಿಭಾಗ 12, ಪಶ್ಚಿಮ ವಿಭಾಗ 6, ಆಗ್ನೇಯ ವಿಭಾಗ 5, ಕೇಂದ್ರ ವಿಭಾಗ 4, ಈಶಾನ್ಯ ವಿಭಾಗ 4, ವೈಟ್ ಫೀಲ್ಡ್ ವಿಭಾಗ 5, ಉತ್ತರ ವಿಭಾಗ 5, ದಕ್ಷಿಣ ವಿಭಾಗ 4 ರೌಡಿಗಳನ್ನ ಗಡಿಪಾರು ಮಾಡಲಿದ್ದಾರೆ.
ಇದನ್ನೂ ಓದಿ:Karnataka Assembly Polls 2023: ದಾವಣಗೆರೆ ಜಿಲ್ಲೆಯಿಂದ 13 ರೌಡಿಶೀಟರ್ಗಳ ಗಡಿಪಾರು
ಸದ್ಯ ಗಡಿಪಾರು ಆಗಿರುವ ಕುಖ್ಯಾತ ರೌಡಿಗಳು
1)ವಿಲ್ಸನ್ ಗಾರ್ಡನ್ ನಾಗ ( ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ) ಇತನ ಮೇಲೆ ಒಟ್ಟು 22 ಕೇಸ್ಗಳು ಇವೆ. ಏಳು ಕೊಲೆ ಪ್ರಕರಣಗಳಲ್ಲಿ ವಿಲ್ಸನ್ ಗಾರ್ಡನ್ ನಾಗ ಎ1 ಆರೋಪಿ ಆಗಿದ್ದಾನೆ. 2) ಕಾಡುಬೀಸನಹಳ್ಳಿ ರೋಹಿತ್ ( ಮಾರತ್ ಹಳ್ಳಿ ರೌಡಿಶೀಟರ್) ರೋಹಿತ್ ಮೇಲೆ 14 ಕೇಸ್ಗಳು ಇದ್ದು, ಸುಮಾರು 6 ಕ್ಕೂ ಹೆಚ್ಚು ಕೊಲೆ ಯತ್ನ ಕೇಸ್ಗಳು ಹಾಗೂ 5 ಕಳ್ಳತನ ಹಾಗೂ ಸುಲಿಗೆ ಕೇಸ್ಗಳು ಇದೆ. 3) ಕ್ಯಾಟ್ ಮಂಜ ( ಸಂಪಿಗೆಹಳ್ಳಿ ರೌಡಿಶೀಟರ್) ಈತನ ಮೇಲೆ 16ಕ್ಕೂ ಹೆಚ್ಚು ಕೊಲೆ, ಕೊಲೆಯತ್ನ, ದರೋಡೆ ಕೇಸ್ಗಳಿವೆ. 4) ಮುನಿಕೃಷ್ಣ ( ಅಮೃತಹಳ್ಳಿ ರೌಡಿಶೀಟರ್) ಮುನಿಕೃಷ್ಣ ಮೇಲೆ 3 ಕೊಲೆ ಹಾಗೂ 4 ಕೊಲೆಯತ್ನ ಕೇಸ್ಗಳು ದಾಖಲಾಗಿವೆ. ಸದ್ಯ ಗಡಿಪಾರು ಆದೇಶದ ಹಿನ್ನಲೆ ನಗರ ಬಿಟ್ಟಿದ್ದಾನೆ.
5) ಮಂಜುನಾಥ್ ಅಲಿಯಾಸ್ ಮೋಲ(ಅಮೃತಹಳ್ಳಿ ಠಾಣೆಯ ರೌಡಿಶೀಟರ್) ಇತನ ಮೇಲೆ 2 ಕೊಲೆ ಹಾಗೂ 5 ಕೊಲೆಯತ್ನ ಕೇಸ್ ಸೇರಿ 15 ಕೇಸ್ ಗಳು ಇದೆ, ಕಳೆದ ಮೇ ತಿಂಗಳಲ್ಲಿ ಇತನನ್ನ ಗಡಿಪಾರು ಮಾಡಲಾಗಿತ್ತು. ಆದ್ರೆ ಗಡಿಪಾರು ಆದೇಶ ಉಲ್ಲಂಘನೆ ಮಾಡಿ ಮತ್ತೆ ಕ್ರೈಂ ನಲ್ಲಿ ಭಾಗಿಯಾಗಿದ್ದ, ಈ ಕಾರಣಕ್ಕೆ ಗೂಂಡಾ ಆಕ್ಟ್ ಹಾಕಲು ಪೊಲೀಸರು ಸಿದ್ದತೆ ನಡೆಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ