Karnataka Assembly Elections 2023: ಮೇ 10 ಮತದಾನ ದಿನ ಬೆಂಗಳೂರಿನ ಗಾರ್ಮೆಂಟ್ಸ್ ನೌಕರರಿಗೆ ಸಂಬಳ ಸಹಿತ ರಜೆ ಘೋಷಣೆ
ಮೇ 10ರಂದು ರಾಜ್ಯ ವಿಧಾನ ಸಭಾ ಚುನಾವಣೆ ನಡೆಯಲಿದ್ದು ಈ ದಿನ ಗಾರ್ಮೆಂಟ್ಸ್ ನೌಕರರಿಗೆ, ಕಾರ್ಮಿಕರಿಗೆಲ್ಲ ಸಂಬಳ ಸಹಿತ ರಜೆ ಘೋಷಿಸಲಾಗಿದೆ.
ಬೆಂಗಳೂರು: ಎಲೆಕ್ಷನ್ ಅಂದ್ರೆ ಪ್ರಜಾಪ್ರಭುತ್ವದ ಹಬ್ಬ(Karnataka Assembly Elections 2023). ಇಂತಹ ಹಬ್ಬದ ದಿನ ಮೂರು ಲಕ್ಷ ಕಾರ್ಮಿಕರು ಮತದಾನದಿಂದ ವಂಚಿತರಾಗ್ತಿದ್ರು. ಈಗ ಅವ್ರಿಗೆಲ್ಲ ಖುಷಿ ಸುದ್ದಿ ನೀಡಲಾಗುತ್ತಿದ್ದು ಎಲೆಕ್ಷನ್ ದಿನ ಗಾರ್ಮೆಂಟ್ಸ್ ನೌಕರರಿಗೆ, ಕಾರ್ಮಿಕರಿಗೆಲ್ಲ(Garments Employees) ಸಂಬಳ ಸಹಿತ ರಜೆ ನೀಡಲು ನಿರ್ಧರಿಸಲಾಗಿದೆ. ಇದೇ ಮೇ 10ರಂದು ರಾಜ್ಯ ವಿಧಾನ ಸಭಾ ಚುನಾವಣೆ ನಡೆಯಲಿದ್ದು ಈ ದಿನ ಕಾರ್ಮಿಕರಿಗೆ ರಜೆ ಘೋಷಿಸಲಾಗಿದೆ.
ಬೆಂಗಳೂರಿನಲ್ಲಿ ವೋಟಿಂಗ್ ಕಡಿಮೆ ಆಗುತ್ತೆ. ಐಟಿ ಬಿಟಿ ಮಂದಿ ವೋಟ್ ಮಾಡ್ದೆ ಟ್ರಿಪ್ ಹೋಗ್ತಾರೆ. ಗಾರ್ಮೆಂಟ್ಸ್ ಹಾಗೂ ಕಾರ್ಖಾನೆಗಳಲ್ಲಿ ಕೆಲಸ ಮಾಡೋರಿಗೆ ಭಯ. ವೋಟ್ಗಾಗಿ ಡ್ಯೂಟಿ ಮಿಸ್ ಮಾಡಿದ್ರೆ ಸಂಬಳ ಕಟ್ ಮಾಡ್ತಾರೆ ಅಂತ ವೋಟ್ ಮಾಡ್ದೆ ಕೆಲ್ಸಕ್ಕೆ ಹಾಜರಾಗ್ತಿದ್ದಾರೆ. ಹೀಗಾಗಿ ಮತದಾನದ ದಿನ ಎಲ್ಲ್ಲ ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ, ಗಾರ್ಮೆಂಟ್ಸ್ ನೌಕರರಿಗೆ ಸಂಬಳ ಸಹಿತ ರಜೆ ಘೋಷಿಸಲಾಗಿದೆ. ಆದರೆ, ಮತದಾನ ಮಾಡದವರಿಗೆ ಸಂಬಳ ಸಹಿತ ರಜೆ ಪಡೆಯುವ ಹಕ್ಕು ಇಲ್ಲ.
ಇದನ್ನೂ ಓದಿ: ಮಂಡ್ಯಕ್ಕೆ ಸತೀಶ್ ನೀನಾಸಂ ಚುನಾವಣಾ ರಾಯಭಾರಿ, ಮತದಾನ ತಪ್ಪಿಸಬೇಡಿ ಎಂದ ನಟ
ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ಶೇ.50ಕ್ಕಿಂತಲೂ ಕಡಿಮೆ ಆಗುತ್ತೆ. ಹೀಗಾಗೇ ಇದನ್ನ ತಪ್ಪಿಸಲು ವಾರದ ಮಧ್ಯೆ ಮತದಾನದ ದಿನಾಂಕ ಪ್ರಕಟಿಸಿದ್ದಾರೆ. ಆದ್ರೆ, ಗಾರ್ಮೆಂಟ್ಸ್ ಸಿಬ್ಬಂದಿ ಮತ್ತು ಕಾರ್ಮಿಕರು ಮತದಾನಕ್ಕೆ ಗೈರಾಗುವ ಆತಂಕ ಎದುರಾಗಿದೆ. ಹೀಗಾಗಿ, ಈ ಬಾರಿ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ, ಪ್ರತಿ ಐಟಿ ಬಿಟಿ ಹಾಗೂ ಗಾರ್ಮೆಂಟ್ಸ್ಗೆ ಭೇಟಿ ನೀಡಿ ವೋಟ್ ಮಾಡಲು ಮನವಿ ಮಾಡ್ತಿದ್ದಾರೆ. ಈ ವೇಳೆ ಗಾರ್ಮೆಂಟ್ಸ್ ಸಿಬ್ಬಂದಿ ಮತಹಾಕಲು ಊರಿಗೆ ಹೋದ್ರೆ, ಸಂಬಳ ಕಡಿತವಾಗುವ ಆತಂಕವನ್ನ ವ್ಯಕ್ತಿಪಡಿಸಿದ್ರು. ಇದ್ರಿಂದಾಗಿ ಗಾರ್ಮೆಂಟ್ಸ್ ಕಂಪನಿಗಳಿಗೆ ಸಂಬಳ ಸಹಿತ ರಜೆ ನೀಡುವಂತೆ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ 3 ಲಕ್ಷ ಗಾರ್ಮೆಂಟ್ಸ್ ನೌಕರರಿದ್ದು, ಕಾರ್ಖಾನೆಗಳಲ್ಲಿ ದುಡಿಯುವ 1 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಇವ್ರೆಲ್ಲ ವೋಟ್ ಮಾಡಲು ಈಗ ಅವಕಾಶ ಸಿಕ್ಕಿದ್ದು, ಎಲೆಕ್ಷನ್ಗೆ ರಜೆ ನೀಡಿದ್ರೆ, ವೋಟ್ ಮಾಡ್ದೆ ಇದ್ದವರಿಗೆ ಸಂಬಳ ನೀಡಲ್ವಂತೆ. ಸದ್ಯ ಕಾರ್ಮಿಕ ಇಲಾಖೆ ಕೂಡಾ ಎಲ್ಲಾ ಕಂಪನಿಗಳಿಗೂ ಸೂಚನೆ ನೀಡಿದ್ದು. ವೋಟ್ ಮಾಡಲು ಹೋಗುವ ನೌಕರರಿಗೆ ಸಂಬಳ ಸಹಿತ ರಜೆ ನೀಡಲು ಸೂಚನೆ ನೀಡ್ತಾಯಿದೆಯಂತೆ.
ವರದಿ: ಮುತ್ತಪ್ಪ ಲಮಾಣಿ, ಟಿವಿ9 ಬೆಂಗಳೂರು
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:14 am, Tue, 18 April 23