Ganga-Jamuni Tehzeeb: ಉತ್ತರ ಪ್ರದೇಶದ ಅಜಂಗಢ್ ಗ್ರಾಮದಲ್ಲಿ ರಂಜಾನ್ ತಿಂಗಳು ಮುಸಲ್ಮಾನರನ್ನು ಬೆಳಗಿನ ಸೆಹ್ರಿಗೆ ಎಬ್ಬಿಸೋದು ಒಬ್ಬ ಹಿಂದೂ!
ಗ್ರಾಮದ ಮುಸ್ಲಿಂ ಜನರಿಗೆ ಗುಲಾಬ್ ಬೆಳಗಿನ ಜಾವ ಬಂದು ಲಾಠಿಯಿಂದ ಬಾಗಿಲ ಮೇಲೆ ಕುಟ್ಟಿ ಎಬ್ಬಿಸುವುದು ಸಂತೋಷ ನೀಡುತ್ತದೆ. ಅವರು ಬೇಗ ಬೇಗ ಎದ್ದು ಸೆಹ್ರಿ ತಯಾರಿ ಮಾಡಿಕೊಂಡು ಊಟ ಮಾಡಿಬಿಡುತ್ತಾರೆ.
ಆಜಂಗಢ್ (ಉತ್ತರಪ್ರದೇಶದ): ಗಂಗಾ-ಜಮುನಿ ತೆಹ್ಜೀಬ್ ಗೆ (ಹಿಂದೂ-ಮುಸ್ಲಿಂ ಸಮುದಾಯಗಳ ನಡುವಿ ಸೌಹಾರ್ತತೆ ಭ್ರಾತೃತ್ವ) ಮತ್ತೊಂದು ಉದಾಹರಣೆ ಉತ್ತರಪ್ರದೇಶದ ಆಜಂಗಢ್ ನಲ್ಲಿ ಸಿಕ್ಕಿದೆ. ಪವಿತ್ರ ರಂಜಾನ್ ತಿಂಗಳಲ್ಲಿ (holy month of Ramzan) 30 ದಿನಗಳ ಕಾಲ ಉಪವಾಸ ಆಚರಿಸುವ ಮುಸಲ್ಮಾನರು ಬೆಳಗ್ಗೆ ಸೂರ್ಯೋದಯಕ್ಕೆ (before sunrise) ಮೊದಲು ಊಟ ಮಾಡಿ ನೀರಿ ಕುಡಿದುಬಿಡುತ್ತಾರೆ. ಅಮೇಲೆ ದಿನವಿಡೀ ಅವರು ಒಂದೇ ಒಂದು ಹನಿ ನೀರು ಬಾಯಿಗೆ ಹಾಕಲ್ಲ. ಬೆಳಗಿನ ಊಟವನ್ನು ಸೆಹ್ರಿ (Sehri) ಎಂದು ಕರೆದರೆ ಸೂರ್ಯಾಸ್ತ ನಂತರದ ಊಟವನ್ನು ಇಫ್ತಾರ್ ಎನ್ನುತ್ತಾರೆ. ಅಜಂಗಡ್ ನಲ್ಲಿ ಸೆಹ್ರಿಗಾಗಿ ಬೆಳಗಿನ ಜಾವ ಮುಸಲ್ಮಾರನ್ನು ಎಬ್ಬಿಸುವ ಕೆಲಸ ಗುಲಾಬ್ ಯಾದವ್ (Gulab Yadav) ಹೆಸರಿನ ಈ ಹಿಂದೂ ವ್ಯಕ್ತಿ ಮಾಡುತ್ತಾರೆ. ಈ ಪರಂಪರೆಯನ್ನು ಗುಲಾಬ್ ಅವರ ತಂದೆ 1975ರಲ್ಲಿ ಆರಂಭಿಸಿದ್ದರಂತೆ.
‘ಮೊದಲು ರಂಜಾನ್ ತಿಂಗಳಲ್ಲಿ ಗುಲಾಬ್ ಅವರ ತಂದೆ ಮತ್ತು ತಾತ ನಮ್ಮನ್ನು ಎಬ್ಬಿಸುತ್ತಿದ್ದರು. ಅವರ ತಂದೆ ಕಾಲವಶವಾದ ಬಳಿಕ ಗುಲಾಬ್ ಅಣ್ಣ ವಿಕ್ರಮ್ ಯಾದವ್ ಈ ಕಾಯಕವನ್ನು ಕೈಗೆತ್ತಿಕೊಂಡರು. ಆದರೆ ಅವರಿಗೀಗ ವಯಸ್ಸಾಗಿ ನಡೆದಾಡುವ ತ್ರಾಣ ಇಲ್ಲವಾಗಿರುವುದರಿಂದ ಅವರ ಚಿಕ್ಕ ಸಹೋದರ ಗುಲಾಬ್ ಅದನ್ನು ಮಾಡುತ್ತಿದ್ದಾರೆ,’ ಎಂದು ಗ್ರಾಮದ ಒಬ್ಬ ನಿವಾಸಿ ಹೇಳುತ್ತಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಮಗ ಅಸಾದ್ ಅಹ್ಮದ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿಲ್ಲ ಅತೀಕ್ ಅಹ್ಮದ್
ಗ್ರಾಮದ ಮುಸ್ಲಿಂ ಜನರಿಗೆ ಗುಲಾಬ್ ಬೆಳಗಿನ ಜಾವ ಬಂದು ಲಾಠಿಯಿಂದ ಬಾಗಿಲ ಮೇಲೆ ಕುಟ್ಟಿ ಎಬ್ಬಿಸುವುದು ಸಂತೋಷ ನೀಡುತ್ತದೆ. ಅವರು ಬೇಗ ಬೇಗ ಎದ್ದು ಸೆಹ್ರಿ ತಯಾರಿ ಮಾಡಿಕೊಂಡು ಊಟ ಮಾಡಿಬಿಡುತ್ತಾರೆ.
‘ಮುಸ್ಲಿಂ ಬಾಂಧವರನ್ನು ಎಬ್ಬಿಸಲು ರಂಜಾನ್ ತಿಂಗಳಲ್ಲಿ ನಾನು ಇದನ್ನು ಪ್ರತಿದಿನ ಮಾಡುತ್ತೇನೆ. ಹೀಗೆ ಮಾಡುವುದರಿಂದ ನಂಗೆ ಸಿಗೋದು ಏನು ಗೊತ್ತಾ? ಆಶೀರ್ವಾದ ಮತ್ತು ಭ್ರಾತೃತ್ವ!’ ಎಂದು ಗುಲಾಬ್ ಧನ್ಯತೆಯ ಭಾವದಿಂದ ಹೇಳುತ್ತಾರೆ.
‘ಹಿಂದೆ ರಂಜಾನ್ ತಿಂಗಳಲ್ಲಿ ಗುಲಾಬ್ ಅವರ ತಂದೆ ನಮ್ಮನ್ನು ಬೆಳಗಿನ ಜಾವ ಎಬ್ಬಿಸುತ್ತಿದ್ದರು. ಅಮೇಲೆ ಅವರಣ್ಣ ಆ ಕೆಲಸ ಮಾಡುತ್ತಿದ್ದರು. ಈಗ ಗುಲಾಬ್ ಆ ಪರಂಪರೆಯನ್ನು ಮುಂದುವರಿಸಿದ್ದಾರೆ. ಇದರಿಂದ ನಮಗೇನೂ ಸಮಸ್ಯೆಯಿಲ್ಲ,’ ಎಂದು ಗ್ರಾಮದ ನಿವಾಸಿಯೊಬ್ಬರು ಹೇಳುತ್ತಾರೆ.
ಗುಲಾಬ್ ಕುಟುಂಬ ಈ ಉನ್ನತ ಪರಂಪರೆಯನ್ನು ಜಾರಿಯಲ್ಲಿಡುವ ಮೂಲಕ ಗಂಗಾ-ಜಮುನಿ ತೆಹ್ಜೀಬ್ ಅನ್ನು ಜೀವಂತವಾಗಿಟ್ಟಿದ್ದಾರೆ. ಭಾರತದ ಉಪಖಂಡದಲ್ಲಿ ಈ ತೆಹ್ಜೀಬ್ ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ಸಾಂಸ್ಕೃತಿಕ ಸಾಮರಸ್ಯ ಮತ್ತು ಸಹಬಾಳ್ವೆಯನ್ನು ಪ್ರತಿಬಿಂಬಿಸುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ