ಉತ್ತರ ಪ್ರದೇಶ: ಮಗ ಅಸಾದ್ ಅಹ್ಮದ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿಲ್ಲ ಅತೀಕ್ ಅಹ್ಮದ್

ಅತೀಕ್ ಶುಕ್ರವಾರ ತನ್ನ ಮಗನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮ್ಯಾಜಿಸ್ಟ್ರೇಟ್‌ಗೆ ಅನುಮತಿ ಕೋರಿದ್ದರು. ಅಂಬೇಡ್ಕರ್ ಜಯಂತಿ ನಿಮಿತ್ತ ಶುಕ್ರವಾರ ರಜೆ ಇದ್ದ ಕಾರಣ ಮನವಿಯನ್ನು ರಿಮಾಂಡ್ ಮ್ಯಾಜಿಸ್ಟ್ರೇಟ್‌ಗೆ ಕಳುಹಿಸಲಾಗಿದೆ ಎಂದು ಅವರ ವಕೀಲ ಮನೀಶ್ ಖನ್ನಾ ಪಿಟಿಐಗೆ ತಿಳಿಸಿದ್ದಾರೆ.

ಉತ್ತರ ಪ್ರದೇಶ: ಮಗ ಅಸಾದ್ ಅಹ್ಮದ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿಲ್ಲ ಅತೀಕ್ ಅಹ್ಮದ್
ಅತೀಕ್ ಅಹ್ಮದ್
Follow us
|

Updated on: Apr 15, 2023 | 5:10 PM

ಪ್ರಯಾಗರಾಜ್: ಗ್ಯಾಂಗ್ ಸ್ಟರ್, ರಾಜಕಾರಣಿ ಅತೀಕ್ ಅಹ್ಮದ್ (Atiq Ahmed) ಅವರ ಪುತ್ರ ಅಸಾದ್ ಅಹ್ಮದ್ (Asad Ahmad) ಅಂತ್ಯಕ್ರಿಯೆಯನ್ನು ಶನಿವಾರ ಇಲ್ಲಿನ ಕಸರಿ ಮಸಾರಿ ಸ್ಮಶಾನದಲ್ಲಿ ಭಾರೀ ಪೊಲೀಸ್ ಭದ್ರತೆಯ ನಡುವೆ ನೆರವೇರಿಸಲಾಯಿತು. ಕೆಲವು ಸಂಬಂಧಿಕರು ಮತ್ತು ಸ್ಥಳೀಯರಿಗೆ ಸಮಾಧಿ ಭೂಮಿಗೆ ತೆರಳು ಅವಕಾಶ ನೀಡಲಾಯಿತು. ಒಂದು ಗಂಟೆ ಕಾಲ ಅಂತ್ಯಕ್ರಿಯೆ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.ಅಸಾದ್ ಅಹ್ಮದ್ ಅವರ ಅಂತಿಮ ವಿಧಿವಿಧಾನಗಳು ಪೂರ್ಣಗೊಂಡಿವೆ. ಇದು ಒಂದು ಗಂಟೆ ನಡೆಯಿತು. ಅತೀಕ್ ಅವರ ಕೆಲವು ಸಂಬಂಧಿಗಳು ಮತ್ತು ಕೆಲವು ಪ್ರದೇಶದ ಜನರಿಗೆ ಸ್ಮಶಾನಕ್ಕೆ ಹೋಗಲು ಅವಕಾಶ ನೀಡಲಾಯಿತು. ಇದು ಭದ್ರತಾ ದೃಷ್ಟಿಯಿಂದ ಅಗತ್ಯವಾಗಿತ್ತು ಎಂದು ಪ್ರಯಾಗರಾಜ್ ನ ಜಂಟಿ ಪೊಲೀಸ್ ಕಮಿಷನರ್ ಆಕಾಶ್ ಕುಲ್ಹಾರಿ ಪಿಟಿಐಗೆ ತಿಳಿಸಿದ್ದಾರೆ. ಇದಕ್ಕೂ ಮುನ್ನ ಅಸಾದ್‌ನ ಮಾವ ಉಸ್ಮಾನ್ ತನ್ನ ಸೋದರಳಿಯನ ಮೃತದೇಹದೊಂದಿಗೆ ಸ್ಮಶಾನವನ್ನು ತಲುಪಿದ್ದರು. ಭಾರೀ ಭದ್ರತೆಯಿರುವ ಸ್ಮಶಾನದೊಳಗೆ ಪ್ರವೇಶಿಸದಂತೆ ಮಾಧ್ಯಮಗಳನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.

ಅತೀಕ್ ಶುಕ್ರವಾರ ತನ್ನ ಮಗನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮ್ಯಾಜಿಸ್ಟ್ರೇಟ್‌ಗೆ ಅನುಮತಿ ಕೋರಿದ್ದರು. ಅಂಬೇಡ್ಕರ್ ಜಯಂತಿ ನಿಮಿತ್ತ ಶುಕ್ರವಾರ ರಜೆ ಇದ್ದ ಕಾರಣ ಮನವಿಯನ್ನು ರಿಮಾಂಡ್ ಮ್ಯಾಜಿಸ್ಟ್ರೇಟ್‌ಗೆ ಕಳುಹಿಸಲಾಗಿದೆ ಎಂದು ಅವರ ವಕೀಲ ಮನೀಶ್ ಖನ್ನಾ ಪಿಟಿಐಗೆ ತಿಳಿಸಿದ್ದಾರೆ.

ಆದಾಗ್ಯೂ, ಶನಿವಾರದಂದು ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅತೀಕ್ ಅವರ ಅರ್ಜಿಯನ್ನು ಸಲ್ಲಿಸುವ ಮೊದಲು ಅಂತ್ಯಕ್ರಿಯೆ ನಡೆಯಿತು.

ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ವಾಂಟೆಡ್ ಆಗಿದ್ದ ಅಸದ್ ಮತ್ತು ಆತನ ಸಹಚರ ಗುಲಾಮ್ ಗುರುವಾರ ಝಾನ್ಸಿ ಬಳಿ ಉತ್ತರ ಪ್ರದೇಶ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಗುಂಡಿಗೆ ಬಲಿಯಾಗಿದ್ದರು. ಅಸಾದ್ ಅತೀಕ್ ಅಹ್ಮದ್ ಅವರ ಐವರು ಪುತ್ರರಲ್ಲಿ ಮೂರನೆಯವರಾಗಿದ್ದು, ಉಮೇಶ್ ಪಾಲ್ ಕೊಲೆ ಪ್ರಕರಣದ ನಂತರ ನಾಪತ್ತೆಯಾಗಿದ್ದ.

ಇದನ್ನೂ ಓದಿ: ಕಚೇರಿಯೊಳಗೆ ನುಗ್ಗಿ ಗುಂಡು ಹಾರಿಸಿ ದೆಹಲಿ ಬಿಜೆಪಿ ನಾಯಕನ ಬರ್ಬರ ಹತ್ಯೆ; ಹಂತಕರ ಪತ್ತೆಗೆ ಪೊಲೀಸ್ ಶೋಧ

ಅತೀಕ್ ಅವರ ಇತರ ಪುತ್ರರಲ್ಲಿ ಹಿರಿಯ ಮಗ ಉಮರ್ ಲಕ್ನೋ ಜೈಲಿನಲ್ಲಿದ್ದರೆ, ಎರಡನೇ ಮಗ ಅಲಿ ಪ್ರತ್ಯೇಕ ಪ್ರಕರಣಗಳಲ್ಲಿ ನೈನಿ ಸೆಂಟ್ರಲ್ ಜೈಲಿನಲ್ಲಿದ್ದಾನೆ. ನಾಲ್ಕನೇ ಮಗ ಅಹ್ಜಾಮ್ ಮತ್ತು ಕಿರಿಯ ಮಗ ಅಬಾನ್ ಪ್ರಯಾಗರಾಜ್‌ನಲ್ಲಿರುವ ಜುವೆನೇಲ್ ಹೋಮ್ ನಲ್ಲಿದ್ದಾರೆ.. ಅಸಾದ್‌ನ ಸಮಾಧಿಯನ್ನು ತಾನು ಅಗೆದಿರುವುದಾಗಿ ಹೇಳಿಕೊಂಡ ಜಾನು ಖಾನ್ ಪ್ರಕಾರ, ಅತೀಕ್‌ನ ಪೋಷಕರ ಅವಶೇಷಗಳನ್ನು ಅದೇ ಸ್ಮಶಾನದಲ್ಲಿ (ಕಸರಿ ಮಸಾರಿ) ಸಮಾಧಿ ಮಾಡಲಾಗಿದೆ. ಅತೀಕ್ ಪ್ರಸ್ತುತ 2006 ರ ಉಮೇಶ್ ಪಾಲ್ ಅಪಹರಣ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ