ಕಚೇರಿಯೊಳಗೆ ನುಗ್ಗಿ ಗುಂಡು ಹಾರಿಸಿ ದೆಹಲಿ ಬಿಜೆಪಿ ನಾಯಕನ ಬರ್ಬರ ಹತ್ಯೆ; ಹಂತಕರ ಪತ್ತೆಗೆ ಪೊಲೀಸ್ ಶೋಧ

ಮಟಿಯಾಲಾ ಅವರ ಕುಟುಂಬವು ಯಾವುದೇ ಶಂಕಿತರನ್ನು ಹೆಸರಿಸದಿದ್ದರೂ, ಅವರನ್ನು ಹತ್ಯೆಗೈದ ನಾಟಕೀಯ ರೀತಿಯಲ್ಲಿ ಅವರ ಹತ್ಯೆಯ ಹಿಂದೆ ವೈಯಕ್ತಿಕ ದ್ವೇಷ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಕಚೇರಿಯೊಳಗೆ ನುಗ್ಗಿ ಗುಂಡು ಹಾರಿಸಿ ದೆಹಲಿ ಬಿಜೆಪಿ ನಾಯಕನ ಬರ್ಬರ ಹತ್ಯೆ; ಹಂತಕರ ಪತ್ತೆಗೆ ಪೊಲೀಸ್ ಶೋಧ
ಸುರೇಂದ್ರ ಮಟಿಯಾಲ
Follow us
|

Updated on: Apr 15, 2023 | 2:59 PM

ದೆಹಲಿ: ದೆಹಲಿ ಬಿಜೆಪಿ (BJP) ಮುಖಂಡ ಸುರೇಂದ್ರ ಮಟಿಯಾಲರನ್ನು (Surendra Matiala) ಶುಕ್ರವಾರ ಸಂಜೆ ಇಬ್ಬರು ಅಪರಿಚಿತ ವ್ಯಕ್ತಿಗಳು ಅವರ ಕಚೇರಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ ಮಟಿಯಾಲ ಮತ್ತು ಅವರ ಸೋದರಳಿಯ ಸಂಜೆ 7:30 ರ ಸುಮಾರಿಗೆ ಟಿವಿ ನೋಡುತ್ತಿದ್ದರು. ಆ ಹೊತ್ತಿಗೆ ಇಬ್ಬರು ವ್ಯಕ್ತಿಗಳು ಮುಖ ಮುಚ್ಚಿಕೊಂಡು ದ್ವಾರಕಾದಲ್ಲಿನ ಕಚೇರಿಗೆ ಪ್ರವೇಶಿಸಿದರು. ಬಿಜೆಪಿ ನಾಯಕನ ಮೇಲೆ ನಾಲ್ಕೈದು ಬಾರಿ ಗುಂಡು ಹಾರಿಸುವ ಮೊದಲು ಅವರು ಥಳಿಸಿದ್ದಾರೆ. ಕೃತ್ಯವೆಸಗಿದ ಕೂಡಲೇ ಇಬ್ಬರೂ ಪರಾರಿಯಾಗಿದ್ದು, ದುಷ್ಕರ್ಮಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.ತನ್ನ ತಂದೆಗೆ ಯಾರೊಂದಿಗೂ ದ್ವೇಷವಿಲ್ಲ. ಕೊಲೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಪೊಲೀಸರು ಶೀಘ್ರದಲ್ಲೇ ಬಂಧಿಸುತ್ತಾರೆ ಎಂದು ಮಟಿಯಾಲಾ ಅವರ ಮಗ ಹೇಳಿದ್ದಾರೆ.

ಮಟಿಯಾಲಾ ಅವರ ಕುಟುಂಬವು ಯಾವುದೇ ಶಂಕಿತರನ್ನು ಹೆಸರಿಸದಿದ್ದರೂ, ಅವರನ್ನು ಹತ್ಯೆಗೈದ ನಾಟಕೀಯ ರೀತಿಯಲ್ಲಿ ಅವರ ಹತ್ಯೆಯ ಹಿಂದೆ ವೈಯಕ್ತಿಕ ದ್ವೇಷ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಮೂಲಗಳ ಪ್ರಕಾರ ಮಟಿಯಾಲಾ ಅವರು ಕೆಲವು ಜನರೊಂದಿಗೆ ಆಸ್ತಿ ವಿವಾದವನ್ನು ಹೊಂದಿದ್ದರು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Mehul Choksi: ಮೆಹುಲ್ ಚೋಕ್ಸಿಗೆ ರಿಲೀಫ್; ಆಂಟಿಗುವಾ ಮತ್ತು ಬಾರ್ಬುಡಾದಿಂದ ಗಡಿಪಾರು ಸಾಧ್ಯವಿಲ್ಲ ಎಂದ ಹೈಕೋರ್ಟ್

ದೆಹಲಿ ಪೊಲೀಸರ ಐದು ತಂಡಗಳು ಹಂತಕರ ಪತ್ತೆಗಾಗಿ ಹುಡುಕಾಟ ನಡೆಸುತ್ತಿವೆ. ಅಪರಾಧದ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ದ್ವಾರಕಾ ಉಪ ಪೊಲೀಸ್ ಆಯುಕ್ತ ಹರ್ಷ ವರ್ಧನ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ