AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಕಪಟ ಶ್ರೀಮಂತ ಬ್ಯಾಚುಲರ್ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಯುವತಿಯರಿಗೆ ಲಕ್ಷ ಲಕ್ಷಗಳಲ್ಲಿ ವಂಚಿಸಿದ!

ಉತ್ತರ ಪ್ರದೇಶದ ನಿವಾಸಿ ವಿಶಾಲ್, ಸೂಕ್ತ ವಧುವಿನ ಹುಡುಕಾಟ ನಡೆಸುತ್ತಾ ತಾನೊಬ್ಬ ಶ್ರೀಮಂತ ಬ್ರಹ್ಮಚಾರಿ ಎಂಬಂತೆ ವರ್ತಿಸಿದ್ದಾನೆ. ಗುರುಗ್ರಾಮ್‌ ಬಳಿಯ ವಿಲ್ಲಾಗಳು ಮತ್ತು ಫಾರ್ಮ್‌ಹೌಸ್‌ಗಳ ಚಿತ್ರಗಳನ್ನು ತೋರಿಸಿ, ಅವೆಲ್ಲಾ ತನ್ನದೇ ಎಂದು ತೋರಿಸಿದ್ದಾನೆ.

ಆ ಕಪಟ ಶ್ರೀಮಂತ ಬ್ಯಾಚುಲರ್ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಯುವತಿಯರಿಗೆ ಲಕ್ಷ ಲಕ್ಷಗಳಲ್ಲಿ ವಂಚಿಸಿದ!
ಯುವತಿಯರಿಗೆ ಲಕ್ಷ ಲಕ್ಷಗಳಲ್ಲಿ ವಂಚಿಸಿದ ಕಪಟ ಶ್ರೀಮಂತ ಬ್ಯಾಚುಲರ್
TV9 Web
| Edited By: |

Updated on: Apr 15, 2023 | 3:17 PM

Share

ದೆಹಲಿ: ಅತ್ಯಂತ ಶ್ರೀಮಂತ ಬ್ರಹ್ಮಚಾರಿ ಎಂದು ತನ್ನನ್ನು ಬಿಂಬಿಸಿಕೊಂಡು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಯುವತಿಯರಿಗೆ ವಂಚಿಸಿದ ಆರೋಪದ ಮೇಲೆ 26 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶದ ಮುಜಾಫರ್‌ನಗರದ ನಿವಾಸಿ ವಿಶಾಲ್, ಸೂಕ್ತ ವಧುವಿನ ಹುಡುಕಾಟದಲ್ಲಿ ತಾನೊಬ್ಬ ಶ್ರೀಮಂತ ಬ್ರಹ್ಮಚಾರಿ ಎಂಬಂತೆ ನಟಿಸಿದ್ದಾನೆ. ಅವ ಮಹಿಳೆಯರನ್ನು “ಇಂಪ್ರೆಸ್” ಮಾಡಲು ದುಬಾರಿ ಕಾರುಗಳನ್ನು ಬಳಸುತ್ತಿದ್ದ. ಗುರುಗ್ರಾಮ್‌ ಬಳಿಯ ವಿಲ್ಲಾಗಳು ಮತ್ತು ಫಾರ್ಮ್‌ಹೌಸ್‌ಗಳ ಚಿತ್ರಗಳನ್ನು ಸಹ ತೋರಿಸಿದ್ದ ಎಂದು ಸಂತ್ರಸ್ತ ಯುವತಿಯರು ನೀಡಿದ ಮಾಹಿತಿಯನ್ನಾಧರಿಸಿ ಪೊಲೀಸರು ಹೇಳಿದರು. ಕಡಿಮೆ ದರದಲ್ಲಿ ಐಫೋನ್ ಖರೀದಿಸುವ ನೆಪದಲ್ಲಿ ಮಹಿಳೆಯರಿಗೆ ಹಣ ವರ್ಗಾವಣೆ ಮಾಡುವಂತೆ ಮನವೊಲಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವಿಶಾಲ್ ಒಬ್ಬ ವಿದ್ಯಾವಂತ. ಬಹುರಾಷ್ಟ್ರೀಯ ಕಂಪನಿಯಲ್ಲಿ (MNC) ಕೆಲಸ ಮಾಡುತ್ತಾನೆ. ಸ್ವಂತ ಉದ್ಯಮವನ್ನೂ ಆರಂಭಿಸಿದ್ದಾನೆ. ತನ್ನ ವ್ಯವಹಾರದಲ್ಲಿ ನಷ್ಟ ಅನುಭವಿಸಿದ ನಂತರ, ಮಹಿಳೆಯರಿಗೆ ಮೋಸ ಮಾಡುವ ಮೂಲಕ ಸುಲಭವಾಗಿ ಹಣ ಗಳಿಸಲು ನಿರ್ಧರಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಮುಜಾಫರ್‌ನಗರದ ನಿವಾಸಿ ವಿಶಾಲ್, ಸೂಕ್ತ ವಧುವಿನ ಹುಡುಕಾಟ ನಡೆಸುತ್ತಾ ತಾನೊಬ್ಬ ಶ್ರೀಮಂತ ಬ್ರಹ್ಮಚಾರಿ ಎಂಬಂತೆ ವರ್ತಿಸಿದ್ದಾನೆ. ಯುವತಿಯರನ್ನು ಮೆಚ್ಚಿಸಲು ಅವ ದುಬಾರಿ ಕಾರುಗಳನ್ನು ಬಳಸುತ್ತಿದ್ದ. ಗುರುಗ್ರಾಮ್‌ ಬಳಿಯ ವಿಲ್ಲಾಗಳು ಮತ್ತು ಫಾರ್ಮ್‌ಹೌಸ್‌ಗಳ ಚಿತ್ರಗಳನ್ನು ತೋರಿಸಿ, ಅವೆಲ್ಲಾ ತನ್ನದೇ ಎಂದು ತೋರಿಸಿದ್ದಾನೆ.

ಸುಮಾರು ಮೂರು ಲಕ್ಷ ರೂಪಾಯಿಯಷ್ಟು ವಂಚನೆಗೊಳಗಾದ ಯುವತಿಯೊಬ್ಬರು ವಾಯವ್ಯ ದೆಹಲಿಯ ಕೇಶವಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಗುರುಗ್ರಾಮ್‌ನ ಎಂಎನ್‌ಸಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮತ್ತು ಆಕೆಯ ಪೋಷಕರು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಪ್ರೊಫೈಲ್ ಹಾಕಿಕೊಂಡಿದ್ದರು. ಸೂಕ್ತವಾದ ವರನಿಗಾಗಿ ಹುಡುಕುತ್ತಿರುವಾಗ ವರ್ಷಕ್ಕೆ 50-70 ಲಕ್ಷ ರೂ ಆದಾಯವಿರುವ ಮಾನವ ಸಂಪನ್ಮೂಲ ವೃತ್ತಿಪರ ಉದ್ಯೋಗಿ ಎಂದು ಹೇಳಿಕೊಳ್ಳುವ ವ್ಯಕ್ತಿಯ ಪ್ರೊಫೈಲ್ ಮೇಲೆ ಆ ಯುವತಿಯ ಕಣ್ಣು ಬಿದ್ದಿದೆ.

ಆ ಯುವತಿಯ ಕುಟುಂಬವೂ ಅವನ ಪ್ರೊಫೈಲ್ ಅನ್ನು ಇಷ್ಟಪಟ್ಟಿದೆ ಮತ್ತು ಅವನಿಗೆ ತಮ್ಮ ಮಗಳ ಪರವಾಗಿ ವಿನಂತಿಯನ್ನೂ ಕಳುಹಿಸಿದ್ದಾರೆ. ಫೋನ್ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡ ನಂತರ, ಆ ಯುವತಿ ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಅವನೊಂದಿಗೆ ಚಾಟ್ ಮಾಡಲು ಪ್ರಾರಂಭಿಸಿದಳು.

“ಮಾರ್ಚ್ 2023 ರಲ್ಲಿ, ಅವನು ಅವಳಿಗೆ ದುಬಾರಿ ಕಾರುಗಳ ಚಿತ್ರಗಳನ್ನು ಕಳುಹಿಸಿದನು ಮತ್ತು ಅವಳಿಗಾಗಿ ತನ್ನ ಆಯ್ಕೆಯ ಒಪ್ಪಿಗೆಯನ್ನು ಸೂಚಿಸಿದನು. ಅವಳನ್ನು ಮೆಚ್ಚಿಸಲು ಅವನು ಗುರುಗ್ರಾಮ್‌ನಲ್ಲಿರುವ ಕೆಲವು ವಿಲ್ಲಾಗಳು ಮತ್ತು ಫಾರ್ಮ್‌ಹೌಸ್‌ಗಳನ್ನು ತನ್ನದೇ ಆಸ್ತಿಗಳು ಎಂಬಂತೆ ತೋರಿಸಿದ್ದಾನೆ. ಅವನು ಗುರುಗ್ರಾಮ್‌ನಲ್ಲಿ ಆಹಾರ ಸರಪಳಿ ಬ್ಯುಸಿನೆಸ್ ಇದೆಯೆಂದು ಹೇಳಿಕೊಂಡಿದ್ದಾಗಿ ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ. ಇದೇ ವೇಳೆ ಆ ವ್ಯಕ್ತಿ ಯುವತಿಯ ಕುಟುಂಬದ ವಿಶ್ವಾಸವನ್ನು ಗೆದ್ದಿದ್ದ. ಯುವತಿಯ ಮನೆಯವರೂ ಆತನನ್ನು ಭೇಟಿಯಾಗಲು ನಿರ್ಧರಿಸಿದರು.

ಇನ್ನು ಆರೋಪಿಯು ಐಫೋನ್ 14 ಪ್ರೊ ಮ್ಯಾಕ್ಸ್ ಅಗ್ಗದ ದರದಲ್ಲಿ ಸಿಗುತ್ತಿದೆ, ಅದನ್ನು ಖರೀದಿಸುವಂತೆ ಯುವತಿಯನ್ನು ಪುಸಲಾಯಿಸಿದ್ದಾನೆ. ಮತ್ತು ಅದನ್ನೇ ವ್ಯವಹಾರವಾಗಿಸಿಕೊಂಡು ಲಾಭ ಗಳಿಸುವ ಸಲುವಾಗಿ ಅದನ್ನು ಖರೀದಿಸಲು ಮನವೊಲಿಸಿದ್ದಾನೆ. ಯುವತಿ ಆಕೆಯ ಸಂಬಂಧಿಕರು ಮತ್ತು ಸ್ನೇಹಿತರಿಗೆ ಫೋನ್ ಖರೀದಿಸಬಹುದು ಎಂದು ಆಕೆಗೆ ಮನವರಿಕೆ ಮಾಡಿದ್ದಾನೆ ಎಂದೂ ದೂರಿನಲ್ಲಿ ಯುವತಿ ಆರೋಪಿಸಿದ್ದಾರೆ. ಆರೋಪಿಯ ಚಾಲ್​ಚಲಾಕಿಯಿಂದ ಪ್ರಭಾವಿತಳಾದ ಯುವತಿ ಎಂಟು ವಹಿವಾಟುಗಳಲ್ಲಿ ಯುಪಿಐ ಮೂಲಕ 3.05 ಲಕ್ಷ ಹಣವನ್ನು ಆತನಿಗೆ ವರ್ಗಾಯಿಸಿದ್ದಾಳೆ.

ಆದರೆ, ಹಣವನ್ನು ಪಡೆದ ನಂತರ, ವ್ಯಕ್ತಿ ಅವಳನ್ನು ಸಾಮಾಜಿಕ ಜಾಲತಾಣದಲ್ಲಿ ನಿರ್ಬಂಧಿಸಿದ್ದಾನೆ. ತಾನು ಅಪಘಾತದಲ್ಲಿ ಸಿಲುಕಿದ್ದೇನೆ, ಜೈಪುರ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿಯೂ ಹೇಳಿಕೊಂಡಿದ್ದಾನೆ. ಮುಂದೆ ಯುವತಿಯ ಮೊಬೈಲ್​​ ಕರೆಗಳಿಗೆ ಉತ್ತರಿಸುವುದನ್ನು ನಿಲ್ಲಿಸಿದ್ದಾನೆ. ಇದಾದ ಮೇಲೆ ನಿಧಾನಕ್ಕೆ ತಾನು ಮೋಸಕ್ಕೆ ಒಳಗಾಗಿರುವುದು ಯುವತಿಗೆ ಅರಿವಾಗತೊಡಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಉಪ ಆಯುಕ್ತ (ವಾಯವ್ಯ) ಜಿತೇಂದ್ರ ಕುಮಾರ್ ಮೀನಾ ಅವರು ದೂರು ಸ್ವೀಕರಿಸಿದ ಕೆಲವು ದಿನಗಳ ನಂತರ, ಸಖತ್​ ಐಡಿಯಾ ಒಂದನ್ನು ಮಾಡಿದ್ದಾರೆ. ಆರೋಪಿಗೆ ಅದೇ ಸೈಟ್‌ ಮೂಲಕ ವಿವಾಹ ಸಂಬಂಧ ಕೋರಿ (ಪೊಲೀಸರ ಸೋಗಿನಲ್ಲಿ) ವಿನಂತಿ ಕಳುಹಿಸಿದ್ದಾರೆ. ಮಿಕ ಬಲೆಗೆ ಬಿದ್ದು ವಿನಂತಿಯನ್ನು ಸ್ವೀಕರಿಸಿದ್ದಾನೆ. ಮತ್ತು ಈ ಹಿಂದಿನಂತೆಯೇ ಮೋಸದಾಟದ ಮೂಲಕ ಪ್ರಭಾವ ಬೀರಲು ಪ್ರಾರಂಭಿಸಿದ್ದಾನೆ. ಮುಂದೆ ನಿಗದಿತ ಜಾಗದಲ್ಲಿ ಭೇಟಿಯಾಗಲು ಹೇಳಿದ್ದಾನೆ. ಆ ವೇಳೆ ಪೊಲೀಸರು ಆರೋಪಿಯನ್ನು ಹಿಡಿದಿದ್ದಾರೆ.

ವಿಚಾರಣೆಯ ಸಮಯದಲ್ಲಿ, ತಾನು ವಂಚನೆಯಲ್ಲಿ ತೊಡಗಿರುವುದನ್ನು ಒಪ್ಪಿಕೊಂಡಿದ್ದಾನೆ. ದೆಹಲಿಯಿಂದ BCA ಮತ್ತು MBA ಮುಗಿಸಿದ ನಂತರ ಆತ 2018 ರಲ್ಲಿ ಗುರುಗ್ರಾಮ್‌ನ MNC ಯಲ್ಲಿ HR ಅಧಿಕಾರಿಯಾಗಿ ಕೆಲಸ ಆರಂಭಿಸಿದ್ದಾನೆ. ಮುಂದೆ, 2021 ರಲ್ಲಿ ಕೆಲಸ ತೊರೆದು, ಗುರುಗ್ರಾಮ್ ನಲ್ಲಿ ರೆಸ್ಟೋರೆಂಟ್ ತೆರೆದಿದ್ದಾನೆ. ಆದರೆ ಆ ಸಾಹಸದಲ್ಲಿ ಆತ ಯಶಸ್ವಿಯಾಗಲಿ ಎಂದು ಪೊಲೀಸರು ಹೇಳಿದ್ದಾರೆ. ಇದೇ ರೀತಿಯ ಇತರ ದೂರುಗಳಲ್ಲಿ ವಿಶಾಲ್ ಭಾಗಿಯಾಗಿರುವ ಸಾಧ್ಯತೆಯನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಅವರ ಬ್ಯಾಂಕ್ ಖಾತೆ ವಿವರಗಳನ್ನೂ ಪರಿಶೀಲಿಸುತ್ತಿದ್ದಾರೆ.