AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೋರ್ನ್‌ವಿಟಾವನ್ನು ಟೀಕಿಸಿ ರೀಲ್; ಕ್ಯಾಡ್ಬರಿಯಿಂದ ಕಾನೂನು ನೋಟಿಸ್ ಬಂದ ಕೂಡಲೇ ಪೋಸ್ಟ್ ಡಿಲೀಟ್ ಮಾಡಿದ ಇನ್​​ಫ್ಲೂಯೆನ್ಸರ್

ಕಂಪನಿಗಳು ತಮ್ಮ ಪ್ಯಾಕೇಜ್‌ನಲ್ಲಿ ಸುಳ್ಳು ಹೇಳಲು ಸರ್ಕಾರವು ಅನುಮತಿಸುತ್ತಿದೆಯೇ? ಪೋಷಕರು ತಮ್ಮ ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿ ಸಕ್ಕರೆಗೆ ವ್ಯಸನಿಯಾಗುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ ಇನ್​​ಫ್ಲೂಯೆನ್ಸರ್ ರೇವಂತ್ ಹಿಮತ್ಸಿಂಕಾ.

ಬೋರ್ನ್‌ವಿಟಾವನ್ನು ಟೀಕಿಸಿ ರೀಲ್; ಕ್ಯಾಡ್ಬರಿಯಿಂದ ಕಾನೂನು ನೋಟಿಸ್ ಬಂದ ಕೂಡಲೇ ಪೋಸ್ಟ್ ಡಿಲೀಟ್ ಮಾಡಿದ ಇನ್​​ಫ್ಲೂಯೆನ್ಸರ್
ಬೌರ್ನ್‌ವಿಟಾ
ರಶ್ಮಿ ಕಲ್ಲಕಟ್ಟ
|

Updated on:Apr 15, 2023 | 4:33 PM

Share

ಕ್ಯಾಡ್ಬರಿ (Cadbury) ಉತ್ಪನ್ನ ಬೋರ್ನ್‌ವಿಟಾ( Bournvita) ‘ಹೆಲ್ತ್ ಡ್ರಿಂಕ್’ ಎಂದು ಪ್ರಚಾರ ಮಾಡುವುದನ್ನು ಟೀಕಿಸಿದ ವಿಡಿಯೊ ವೈರಲ್ ಆದ ನಂತರ ಇನ್​​ಫ್ಲೂಯೆನ್ಸರ್ ರೇವಂತ್ ಹಿಮತ್ಸಿಂಕಾ (Revant Himatsingka) ಅವರು ಕ್ಯಾಡ್ಬರಿಯಿಂದ ಕಾನೂನು ನೋಟಿಸ್ ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ. ರೇವಂತ್ ಈಗಾಗಲೇ ಅವರ ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ ಪೋಸ್ಟ್ ಅನ್ನು ಅಳಿಸಿದ್ದಾರೆ. ವಿಡಿಯೊದಲ್ಲಿ, ಹಿಮತ್ಸಿಂಕಾ ಅವರು ಪ್ರಸ್ತುತ ಬ್ರಾಂಡ್ ಉತ್ಪನ್ನದ ಪೌಷ್ಟಿಕ ಮೌಲ್ಯವನ್ನು ತಪ್ಪಾಗಿ ತೋರಿಸಿದ್ದು, ಪ್ಯಾಕೇಜ್ ಮೇಲೆ ಬರೆದಿರುವುದನ್ನು ಕೂಡಾ ಲೇವಡಿ ಮಾಡಿದ್ದರು. ಕಂಪನಿಗಳು ತಮ್ಮ ಪ್ಯಾಕೇಜ್‌ನಲ್ಲಿ ಸುಳ್ಳು ಹೇಳಲು ಸರ್ಕಾರವು ಅನುಮತಿಸುತ್ತಿದೆಯೇ? ಪೋಷಕರು ತಮ್ಮ ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿ ಸಕ್ಕರೆಗೆ ವ್ಯಸನಿಯಾಗುವಂತೆ ಮಾಡುತ್ತಿದ್ದಾರೆ. ಮಕ್ಕಳು ತಮ್ಮ ಜೀವನದುದ್ದಕ್ಕೂ ಸಕ್ಕರೆ ಬಳಸುವಂತೆ ಇದು ಮಾಡುತ್ತದೆ ಎಂದು ಹಿಮತ್ಸಿಂಕಾ ಅವರು ರೀಲ್‌ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಇದನ್ನು Twitter ಮತ್ತು LinkedIn ನಂತಹ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಅಳಿಸಲಾದ ಪೋಸ್ಟ್ Instagram ನಲ್ಲಿ 12 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದ್ದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ನಂತರ ಅದನ್ನು ನಟ-ರಾಜಕಾರಣಿ ಪರೇಶ್ ರಾವಲ್, ಮಾಜಿ ಕ್ರಿಕೆಟಿಗ ಮತ್ತು ಸಂಸದ ಕೀರ್ತಿ ಆಜಾದ್ ಶೇರ್ ಮಾಡಿದ್ದರು.

ಕ್ಯಾಡ್ಬರಿ ಬೋರ್ನ್‌ವಿಟಾ  2023 ಏಪ್ರಿಲ್ 9ರಂದು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಉತ್ಪನ್ನದ ಕುರಿತು ಸ್ಪಷ್ಟೀಕರಣವನ್ನು ನೀಡಿತ್ತು. ಬೋರ್ನ್‌ವಿಟಾದಲ್ಲಿ ವಿಟಮಿನ್ ಎ, ಸಿ, ಡಿ, ಕಬ್ಬಿಣ, ಸತು, ತಾಮ್ರ ಮತ್ತು ಸೆಲೆನಿಯಮ್ ಎಂಬ ಪೋಷಕಾಂಶಗಳಿವೆ, ಇದು ರೋಗನಿರೋಧಕ ಶಕ್ತಿಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ.  ಹಲವಾರು ವರ್ಷಗಳಿಂದ ನಮ್ಮ ಪ್ಯಾಕ್‌ನ ಹಿಂಭಾಗದಲ್ಲಿ (ಕೋವಿಡ್ -19 ಸಾಂಕ್ರಾಮಿಕ ರೋಗಕ್ಕೂ ಮುಂಚೆಯೇ) ಪ್ರತಿರಕ್ಷಣಾ ವ್ಯವಸ್ಥೆಯ ಆರೋಗ್ಯಕರ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ” ಎಂದು ನಾವು ಹೇಳಿದ್ದೇವೆ ಎಂದಿತ್ತು.

ಶುಕ್ರವಾರ, ಹಿಮತ್ಸಿಂಕಾ ಬೋರ್ನ್‌ವಿಟಾದ ಕ್ಷಮೆಯಾಚಿಸಿದ್ದಾರೆ. ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿದ ಅವರು ನಾನು ಏಪ್ರಿಲ್ 13 ರಂದು ಭಾರತದ ಅತಿದೊಡ್ಡ ಕಾನೂನು ಸಂಸ್ಥೆಗಳಿಂದ ಕಾನೂನು ಸೂಚನೆಯನ್ನು ಸ್ವೀಕರಿಸಿದ ನಂತರ (Bournvita) ವಿಡಿಯೊವನ್ನು ತೆಗೆದುಹಾಕಲು ನಿರ್ಧರಿಸಿದೆ. ವಿಡಿಯೊವನ್ನು ಮಾಡಿದ್ದಕ್ಕಾಗಿ ನಾನು ಕ್ಯಾಡ್ಬರಿ ಕಂಪನಿಯ ಕ್ಷಮೆಯಾಚಿಸುತ್ತೇನೆ. ನಾನು ಯಾವುದೇ ಟ್ರೇಡ್‌ಮಾರ್ಕ್ ಅನ್ನು ಉಲ್ಲಂಘಿಸಲು ಅಥವಾ ಯಾವುದೇ ಕಂಪನಿಯನ್ನು ಮಾನಹಾನಿ ಮಾಡಲು ಉದ್ದೇಶಿಸಿಲ್ಲ.ಯಾವುದೇ ನ್ಯಾಯಾಲಯದ ಪ್ರಕರಣಗಳಲ್ಲಿ ಭಾಗವಹಿಸಲು ನನಗೆ ಆಸಕ್ತಿ ಅಥವಾ ಸಂಪನ್ಮೂಲಗಳಿಲ್ಲ . ಇದನ್ನು ಕಾನೂನುಬದ್ಧವಾಗಿ ಮುಂದಕ್ಕೆ ತೆಗೆದುಕೊಳ್ಳದಂತೆ ನಾನು MNC ಗಳನ್ನು ವಿನಂತಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: Narendra Modi: ಕಾಶಿಗೆ ಭೇಟಿ ನೀಡಲು 10 ಕಾರಣ ಹೇಳಿದ ಪ್ರಧಾನಿ ಮೋದಿ

ಈಗ ಅಳಿಸಲಾದ ವಿಡಿಯೊದಲ್ಲಿ ಹಿಮತ್ಸಿಂಕಾ ಮೊದಲುಬೋರ್ನ್‌ವಿಟಾದ ಪ್ರಯೋಜನಗಳನ್ನು ಸೂಚಿಸಿದ್ದಾರೆ. ನಂತರ ಅವರು ಬೌರ್ನ್‌ವಿಟಾ ದಲ್ಲಿ ಸಕ್ಕರೆ, ಕೋಕೋ ಸಾಲಿಡ್ಸ್, 150 ಡಿಗ್ರಿ ಸಿ ಬಣ್ಣ (ಕ್ಯಾನ್ಸರ್-ಉಂಟುಮಾಡುತ್ತದೆ ಎಂದು ಅವರು ಹೇಳಿದ್ದಾರೆ), ಎಮಲ್ಸಿಫೈಯರ್ ಮತ್ತು ಲಿಕ್ವಿಡ್ ಗ್ಲೂಕೋಸ್ ಇರುವುದನ್ನು ತೋರಿಸಿದರು, ಈ ಪ್ಯಾಕ್ ನಲ್ಲಿ 100 ಗ್ರಾಂಗೆ 50 ಗ್ರಾಂ ಸಕ್ಕರೆ ಇದೆ. ವಾಸ್ತವಾಗಿ ಇದರಲ್ಲಿರುವ ಸಮ ಅರ್ಧ ಪ್ಯಾಕ್ ಸಕ್ಕರೆ ಎಂದು ಹೇಳಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:29 pm, Sat, 15 April 23

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!