Narendra Modi: ಕಾಶಿಗೆ ಭೇಟಿ ನೀಡಲು 10 ಕಾರಣ ಹೇಳಿದ ಪ್ರಧಾನಿ ಮೋದಿ

ಕಾಶಿಯು ಎಲ್ಲರ ಆಗಮನಕ್ಕೆ ಕಾಯುತ್ತಿದೆ. ಅನೇಕ ಜನರು ಇಲ್ಲಿಗೆ ಭೇಟಿ ನೀಡಲು ಕಾಯುತ್ತಿದ್ದಾರೆ. ಒಮದು ಬಾರಿ ಭೇಟಿ ನೀಡಿದರೆ, ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ ಎಂದು ಮೋದಿ ಅವರು ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ.

Narendra Modi: ಕಾಶಿಗೆ ಭೇಟಿ ನೀಡಲು 10 ಕಾರಣ ಹೇಳಿದ ಪ್ರಧಾನಿ ಮೋದಿ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Apr 15, 2023 | 3:20 PM

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಟ್ವಿಟರ್​​ನಲ್ಲಿ ತಮ್ಮ ಲೋಕಸಭೆ ಕ್ಷೇತ್ರವಾದ ವಾರಣಾಸಿ ಬಗ್ಗೆ ಹಾಡಿಹೊಗಲಿದ್ದಾರೆ. ಇದರ ಜತೆಗೆ ಮೋದಿ ಅವರು ಉತ್ತರ ಪ್ರದೇಶದ ಪ್ರಮುಖ ಧಾರ್ಮಿಕ ನಗರಕ್ಕೆ ಭೇಟಿ ನೀಡಲು 10 ಕಾರಣಗಳ ಇದೆ ಎಂದು ಹೇಳಿದ್ದಾರೆ. ಇಲ್ಲಿನ ಅದ್ಭುತ ಧಾರ್ಮಿಕ ಆಚರಣೆ ಮತ್ತು ಸುಂದರ ನಗರಗಳು, ಆಚರಣೆ ಬಗ್ಗೆ ಮಾತನಾಡಿದ್ದಾರೆ. ಈ ನಗರಗಳು ನಮ್ಮನ್ನು ಖಂಡಿತ ಮೋಡಿ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು. ಕಾಶಿಯು ಎಲ್ಲರ ಆಗಮನಕ್ಕೆ ಕಾಯುತ್ತಿದೆ. ಅನೇಕ ಜನರು ಇಲ್ಲಿಗೆ ಭೇಟಿ ನೀಡಲು ಕಾಯುತ್ತಿದ್ದಾರೆ. ಒಮದು ಬಾರಿ ಭೇಟಿ ನೀಡಿದರೆ, ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ ಎಂದು ಮೋದಿ ಅವರು ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ. ಇದರ ಜತೆಗೆ ನಿಮ್ಮ ಜೀವನದಲ್ಲಿ ಒಮ್ಮೆಯಾದರು, ನೀವು ಕಾಶಿಗೆ ಈ 10 ಕಾರಣಕ್ಕಾಗಿ ಭೇಟಿ ಮಾಡಬೇಕು. ಈ ಬಗ್ಗೆ ವರ್ಟಿಗೋ ವಾರಿಯರ್ ಟ್ವಿಟರ್​ನಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನು ಮೋದಿ ರೀ ಟ್ವೀಟ್​ ಮಾಡಿದ್ದಾರೆ. 

ಕಾಶಿಗೆ ಭೇಟಿ ನೀಡಲು 10 ಕಾರಣ ಇಲ್ಲಿದೆ ಪಟ್ಟಿ

1. ಶ್ರೀ ಕಾಶಿ ವಿಶ್ವನಾಥ ಜ್ಯೋತಿರ್ಲಿಂಗ

2. ಗಂಗಾ ಆರತಿ

3. ಗಂಗಾ ಘಟ್ಟಗಳು

4. ಗಂಗಾ ಸ್ನಾನ

5. ಸಂಕಷ್ಟ ಮೋಚನ್ ಹನುಮಾನ್ ಮಂದಿರ

6. ಗಂಗಾ ನದಿಯಲ್ಲಿ ದೋಣಿ ವಿಹಾರ

7. ಕಾಶಿ ಕಾ ಚಾತ್

8. ಗೋಡೋಲಿಯಾ ಕಾ ಮೀತಾ ಪಾನ್

9. ಮಲೈಯೋ

10. ಕುಲ್ಲಾಡ್ ಚಾಯ್

ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಈ ಬಗ್ಗೆ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಈ ಕುರಿತು ಬಳಕೆದಾರರು ಈ ಪ್ರದೇಶಗಳಿಗೆ ಭೇಟಿ ನೀಡಿದ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರ ಇತಿಹಾಸಕ್ಕಿಂತ ಹಳೆಯದು, ಸಂಪ್ರದಾಯಕ್ಕಿಂತ ಹಳೆಯದು, ದಂತಕಥೆಗಿಂತಲೂ ಹಳೆಯದು. ಉಳಿದಿರುವ ವಿಶ್ವದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದೆ. ಮಹಾದೇವ್ ಕಿ ನಾಗರಿ, ನಮ್ಮ ಕಾಶಿ, ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Narendra Modi in Karnataka: ಕರ್ನಾಟಕದಲ್ಲಿ ಮೋದಿ ಮೋಡಿ; ಚಿತ್ರಗಳಲ್ಲಿ ನೋಡಿ

ಕಾಶಿಯು ಭೇಟಿ ನೀಡುವ ಪ್ರತಿಯೊಬ್ಬರನ್ನು ಮಂತ್ರಮುಗ್ಧಗೊಳಿಸುತ್ತದೆ. ಇದು ಬಹಳ ಪ್ರಭಾವ ಹೊಂದಿರುವ ನಗರ. ಅದುವೇ ದೇವರ ವಿಶ್ವನಾಥನ ಶಕ್ತಿಯಾಗಿರಲಿ, ದೇವಿ ಅನ್ನಪೂರ್ಣೆಯ ಕರುಣೆಯಾಗಿರಲಿ, ಶಕ್ತಿಶಾಲಿ ಗಂಗೆಯಾಗಿರಲಿ. ಇದು ಈ ನಗರದ ಕಂಪನಗಳು. ಕಾಶಿಗೆ ಹೋಗಲು ಯಾವಾಗಲೂ ಸಂತೋಷವಾಗುತ್ತದೆ ಎಂದು ಇನ್ನೊಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಮಾರ್ಚ್ 24ರಂದು ವಾರಣಾಸಿಗೆ ಭೇಟಿ ನೀಡಿದರು, ಅಲ್ಲಿ ಅವರು ಭಾರತದ ಮೊದಲ ನಗರದ ರೋಪ್‌ವೇ ಸೇರಿದಂತೆ ಶಂಕುಸ್ಥಾಪನೆ ಮಾಡಿದರು ಮತ್ತು 1,780 ಕೋಟಿ ರೂ.ಗೂ ಹೆಚ್ಚು ಮೌಲ್ಯದ 28 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು.

ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ
ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆ ಬಿರುಗಾಳಿ: ಯತ್ನಾಳ್ ಸ್ಫೋಟಕ ಹೇಳಿಕೆ
ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆ ಬಿರುಗಾಳಿ: ಯತ್ನಾಳ್ ಸ್ಫೋಟಕ ಹೇಳಿಕೆ
ತ್ರಿವಿಕ್ರಮ್ ಡೇಂಜರ್​ ಎಂದ ಭವ್ಯಾ ಗೌಡ; ರಾಧೆಗೆ ಈಗ ಬೇಡವಾದ ಕೃಷ್ಣ
ತ್ರಿವಿಕ್ರಮ್ ಡೇಂಜರ್​ ಎಂದ ಭವ್ಯಾ ಗೌಡ; ರಾಧೆಗೆ ಈಗ ಬೇಡವಾದ ಕೃಷ್ಣ