AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಡರ್​ ಮಾಡಿದ್ದು 1 ಲಕ್ಷ ರೂ. ಬೆಲೆಯ ಐಫೋನ್​​, ಆನ್ಲೈನ್​ನಲ್ಲಿ ಬಂದಿದ್ದು ಮಾತ್ರ 2 ಕ್ಯಾಡ್ಬರಿ ಚಾಕೋಲೇಟ್​

ಇಂಗ್ಲೆಂಡ್​ನ ಡೇನಿಯಲ್​ ಎನ್ನುವ ವ್ಯಕ್ತಿ 1 ಲಕ್ಷ ರೂಗಳ ಆಪಲ್​ 13 ಐಫೋನ್ಅನ್ನು ಆನ್ಲೈನ್​ ನಲ್ಲಿ ಆರ್ಡರ್​ ಮಾಡಿದ್ದರು. ಆದರೆ ಡೆಲಿವರಿಯಾದ ಕವರ್​ನಲ್ಲಿ 2 ಕ್ಯಾಡ್ಬರಿ ಚಾಕೋಲೇಟ್​ ಟಾಯ್ಲೆಟ್​ ಕವರ್​ನಲ್ಲಿ ಸುತ್ತಿಕೊಂಡಿತ್ತು. ಇದನ್ನು ನೋಡಿ ಡೇನಿಯಲ್​ ಗಾಬರಿಗೊಂಡಿದ್ದಾರೆ.

ಆರ್ಡರ್​ ಮಾಡಿದ್ದು 1 ಲಕ್ಷ ರೂ. ಬೆಲೆಯ ಐಫೋನ್​​, ಆನ್ಲೈನ್​ನಲ್ಲಿ ಬಂದಿದ್ದು ಮಾತ್ರ 2 ಕ್ಯಾಡ್ಬರಿ ಚಾಕೋಲೇಟ್​
TV9 Web
| Edited By: |

Updated on:Dec 28, 2021 | 1:18 PM

Share

ಹಲವು ಬಾರಿ ಆನ್ಲೈನ್​ ನಲ್ಲಿ ಆರ್ಡರ್​ ಮಾಡಿದ್ದು ಒಂದು ವಸ್ತುವಾದರೆ, ಕೈಗೆ ಸಿಗುವುದು ಬೇರೆ ಯಾವುದೋ ವಸ್ತವಾದ ಹಲವು ಘಟನೆಗಳು ಈ ಹಿಂದೆ ನಡೆದಿದೆ. ಇದೀಗ ಅಂಥಹದ್ದೆ ಒಂದು ಘಟನೆ ಆಪಲ್​ ಐಫೋನ್​ ವಿಷಯದಲ್ಲಿ ನಡೆದಿದೆ.  ಇಂಗ್ಲೆಂಡ್​ನ ಡೇನಿಯಲ್​ ಎನ್ನುವ ವ್ಯಕ್ತಿ 1 ಲಕ್ಷ ರೂಗಳ ಆಪಲ್​ 13 ಐಫೋನ್ಅನ್ನು ಆನ್ಲೈನ್​ ನಲ್ಲಿ ಆರ್ಡರ್​ ಮಾಡಿದ್ದರು. ಆದರೆ ಡೆಲಿವರಿಯಾದ ಕವರ್​ನಲ್ಲಿ 2 ಕ್ಯಾಡ್ಬರಿ ಚಾಕೋಲೇಟ್​ ಟಾಯ್ಲೆಟ್​ ಕವರ್​ನಲ್ಲಿ ಸುತ್ತಿಕೊಂಡಿತ್ತು. ಇದನ್ನು ನೋಡಿ ಡೇನಿಯಲ್​ ಗಾಬರಿಗೊಂಡಿದ್ದಾರೆ.

ಡಿಸೆಂಬರ್​2ರಂದು ಐಪೋನ್​ಅನ್ನು ಆರ್ಡರ್​ ಮಾಡಿದ  ಡೇನಿಯಲ್ ಅವರು ಡಿ. 17ರವರೆಗೆ ಕಾದಿದ್ದರು. ಆದರೆ ಆರ್ಡರ್​ ಬರದ ಕಾರಣದ  ಟ್ರ್ಯಾಕಿಂಗ್​ ಚೆಕ್​ ಮಡಿದ ವೇಳೆ ಸ್ಟಾಕ್​ ಖಾಲಿಯಾದ ಕಾರಣ ತಡವಾಗುತ್ತದೆ ಎಂದು ಮೆಸೇಜ್​ ನೋಡಿದ್ದರು. ಕೊನೆಗೂ ಡಿ.17ರಂದು ಪಾರ್ಸಲ್​ ಬಂದಿದ್ದನ್ನು ನೀಡಿ ಡೇನಿಯಲ್​ ಸಂತಸಗೊಂಡಿದ್ದರು. ಖುಷಿಯಿಂದ ಪ್ಯಾಕ್​ ಓಪನ್​ ಮಾಡಿದಾಗ ಡೇನಿಯಲ್​ ಶಾಕ್​ಆಗಿದ್ದರು. ಯಾಕೆಂದರೆ ಪಾರ್ಸಲ್​ನಲ್ಲಿ ಎರಡು ವೈಟ್ ಓರಿಯೋ ಚಾಕೋಲೆಟ್​ಗಳು ಟಾಯ್ಲೆಟ್​ ಪೇಪರ್​ನಲ್ಲು ಸುತ್ತಿಕೊಂಡಿದ್ದವು.

ಈ ಕುರಿತು ಡೇನಿಯಲ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಐಪೋನ್​ಗಾಗಿ ಕಾದು ಸುಸ್ತಾಗಿ ಕೊನೆಗೆ 24 ಮೈಲಿ ದೂರ ಹೋಗಿ ಅವರ ಪಾರ್ಸಲ್​ ಡೆಲಿವರಿ ಆಗುವ ಅಂಗಡಿಗೇ ಹೋಗಿ ಕೆಳಿದೆ. ಆಗ ಅವರು ನನ್ನ ಹೆಸರಿನಲ್ಲಿ ಬಂದಿದ್ದ ಬಾಕ್ಸ್​ ಕೊಟ್ಟರು. ಬಾಕ್ಸ್​ ಸ್ವಲ್ಪ ಹರಿದಿತ್ತು ಆದರೆ ಭಾರವಾಗಿತ್ತು. ಹೀಗಾಗಿ ಮೊಬೈಲ್​ ಇರಬಹುದೆಂದು ಭಾವಿಸಿದೆ. ಆದರೆ ಅದರಲ್ಲಿ 2 ಚಾಕಲೋಟ್​ಗಳು ಟಾಯ್ಲೆಟದದ ಪೇಪರ್​ನಲ್ಲಿ ಸುತ್ತಿಕೊಂಡಿತ್ತು. ಅಲ್ಲದೆ ತಾನು 1 ಲಕ್ಷರೂಗಳನ್ನು ಪಾವತಿ ಮಾಡಿದ್ದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೋವು ಹಂಚಿಕೊಂಡಿದ್ದಾರೆ.

ಈ ಕುರಿತು ಅವರು ಗ್ರಾಹಕ ರಕ್ಷಣಾ ವೇದಿಕೆಗೆ ದೂರನ್ನು ನೀಡಿದ್ದು ತನಿಖೆ ಆರಂಭವಾಗಿದೆ. ಇದು ಇಂಗ್ಲೆಂಡ್​ನಲ್ಲಿ ನಡೆದ ಘಟನೆಯಾದರೂ ಭಾರತದಲ್ಲೂ ಇಂತಹ ಸಾಕಷ್ಟು ಘಟನೆಗಳು ನಡೆದಿವೆ. ನಡೆಯುತ್ತಲೂ ಇವೆ. ಹೀಗಾಗಿ ಆನ್ಲೈನ್​ ಆರ್ಡರ್​ ಮಾಡುವುದಕ್ಕೂ ಮೊದಲು ಎಚ್ಚರಿಕೆ ವಹಿಸುವುದು ಅಗತ್ಯ.

ಇದನ್ನೂ ಓದಿ:

Viral Video: ಸಿಡಿಲು ಬಡಿದು ಸ್ಪೋಟಗೊಂಡ ವ್ಯಕ್ತಿ; ನೆಟ್ಟಿಗರಲ್ಲಿ ಭಯ ಹುಟ್ಟಿಸಿದ ವಿಡಿಯೋ ನೋಡಿ

Published On - 10:02 am, Tue, 28 December 21

Follow Us
TV9 Web
TV9 Web

TV9 Kannada

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ