AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅತಿಥಿಗಳ ಮುಂದೆಯೇ ವಧುವಿನ ಕೈ ಹಿಡಿದು ಎಳೆದ ವರ; ವೈರಲ್ ಆದ​ ವಿಡಿಯೋ ನೋಡಿ

ವೈರಲ್​ ಆದ ವಿಡಿಯೋದಲ್ಲಿ ವರ ವೇದಿಕೆಯ ಮೇಲೆ ನಿಂತಿದ್ದು, ವಧು ಮಂಟಪದ ಕೆಳಗಿನ ಮೆಟ್ಟಿಲಿನ ಮೇಲೆ ನಿಂತಿದ್ದಾಳೆ. ವರನಿಗೆ ಕೈಕೊಟ್ಟು ಸ್ವಲ್ಪಹೊತ್ತು ಫೋಟೋಗೆ ವಧು ಪೋಸ್​ ಕೊಟ್ಟಿದ್ದಾಳೆ. ಅಷ್ಟರಲ್ಲಾಗಲೇ ವರ, ವಧುವಿನ ಕೈ ಹಿಡಿದು ಜೋರಾಗಿ ಎಳೆದಿದ್ದು, ವಧು ಎಲ್ಲರ ಮುಂದೆ ಜಾರಿ ಕೆಳಗೆ ಬಿದ್ದಿದ್ದಾಳೆ.

Viral Video: ಅತಿಥಿಗಳ ಮುಂದೆಯೇ ವಧುವಿನ ಕೈ ಹಿಡಿದು ಎಳೆದ ವರ; ವೈರಲ್ ಆದ​ ವಿಡಿಯೋ ನೋಡಿ
ವಧು-ವರ
TV9 Web
| Updated By: preethi shettigar|

Updated on:Dec 28, 2021 | 11:00 AM

Share

ಮದುವೆ ಎಂದರೆ ಪ್ರತಿಯೊಬ್ಬರ ಜೀವನದಲ್ಲೂ ಮಹತ್ವವಾದ ಸ್ಥಾನ ಇದೆ. ಸಂಗಾತಿಯ ಆಯ್ಕೆಯಿಂದ ಹಿಡಿದು ಪ್ರತಿಯೊಂದು ಹಂತವು ಕೂಡ ಬಹಳ ವಿಶೇಷ. ವಿವಾಹದ ದಿನ ಮೆಚ್ಚಿದ ವರನ ಜೊತೆ ಹೀಗೆ ಬರಬೇಕು. ಮದುವೆಯ (Marriage) ಶಾಸ್ತ್ರಗಳು ಹೀಗೆಯೇ ಇರಬೇಕು. ವಸ್ತ್ರಾಲಂಕಾರದಿಂದ ಹಿಡಿದು ಪ್ರತಿಯೊಂದು ವಿಶಿಷ್ಟ ರೀತಿಯಲ್ಲಿರಬೇಕು ಎಂಬುವುದು ಇತ್ತೀಚೆಗೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಒಮ್ಮೊಮ್ಮೆ ನಾವು ಅಂದುಕೊಂಡಂತೆ ಎಲ್ಲವೂ ನಡೆಯುವುದಿಲ್ಲ. ಇದರಿಂದ ಮುಜುಗರಕ್ಕೆ ಅಥವಾ ನಗೆಪಾಟಲಿಗೆ ಗುರಿಯಾಗಬೇಕಾಗುತ್ತದೆ. ಸದ್ಯ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್​ ಆಗಿದೆ. ವಧುವನ್ನು ಮಂಟಪಕ್ಕೆ ಕರೆತಂದ ವರನ ವಿಚಿತ್ರ ವರ್ತನೆ ನೆಟ್ಟಿರಲ್ಲಿ ಅಚ್ಚರಿ ಉಂಟುಮಾಡಿದೆ.

ವೈರಲ್​ ಆದ ವಿಡಿಯೋದಲ್ಲಿ ವರ ವೇದಿಕೆಯ ಮೇಲೆ ನಿಂತಿದ್ದು, ವಧು ಮಂಟಪದ ಕೆಳಗಿನ ಮೆಟ್ಟಿಲಿನ ಮೇಲೆ ನಿಂತಿದ್ದಾಳೆ. ವರನಿಗೆ ಕೈಕೊಟ್ಟು ಸ್ವಲ್ಪಹೊತ್ತು ಫೋಟೋಗೆ ವಧು ಪೋಸ್​ ಕೊಟ್ಟಿದ್ದಾಳೆ. ಅಷ್ಟರಲ್ಲಾಗಲೇ ವರ, ವಧುವಿನ ಕೈ ಹಿಡಿದು ಜೋರಾಗಿ ಎಳೆದಿದ್ದು, ವಧು ಎಲ್ಲರ ಮುಂದೆ ಜಾರಿ ಕೆಳಗೆ ಬಿದ್ದಿದ್ದಾಳೆ. ಈ ವೇಳೆ ಹಿಂದೆ ನಿಂತ ವಧುವಿನ ಸಂಬಂಧಿಕರು ವರನ ಈ ವರ್ತನೆಯಿಂದ ಆಶ್ವರ್ಯಗೊಂಡಿದ್ದಾರೆ.

View this post on Instagram

A post shared by Bhutni_ke (@bhutni_ke_memes)

ವೈರಲ್ ಆಗುತ್ತಿರುವ ಈ ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ನೆಟ್ಟಿಗರು ಈ ವೀಡಿಯೊವನ್ನು ತುಂಬಾ ಇಷ್ಟಪಡುತ್ತಿದ್ದಾರೆ ಮತ್ತು ತಮ್ಮ ಅಭಿಪ್ರಾಯವನ್ನು ಕಮೆಂಟ್​ ಮೂಲಕ ವ್ಯಕ್ತಪಡಿಸಿದ್ದಾರೆ. ವಧು ವೇದಿಕೆಯ ಮೇಲೆ ಹತ್ತುವಾಗ ಬಲವಾಗಿ ಎಳೆಯುವ ಬದಲು, ಅವಳನ್ನು ಆರಾಮವಾಗಿ ಕರೆತರಬೇಕಾಗಿತ್ತು ಎಂದು ಒಬ್ಬರು ಕಮೆಂಟ್​ ಮಾಡಿದರೆ, ಒನ್ನೊಬ್ಬರು ವಿಭಿನ್ನ ರೀತಿಯ ಜೋಡಿ ಎಂದು ಹಾಸ್ಯ ಮಾಡಿದ್ದಾರೆ. ಇನ್ನು ಕೆಲವರು ವರನನ್ನು ನೇರವಾಗಿ ನಾವು ನೋಡಬೇಕು ಎಂದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಹೆಚ್ಚಿನ ವ್ಯೂವ್ಸ್​ ಪಡೆದುಕೊಂಡಿದೆ.

ಇದನ್ನೂ ಓದಿ: Viral Video: ಮದುವೆಗೆ ತಂದ ಕೇಕ್​ ಕಣ್ಣ ಮುಂದೆಯೇ ನೆಲದ ಪಾಲಾಯ್ತು; ವಧು-ವರರ ರಿಯಾಕ್ಷನ್​ ಹೇಗಿತ್ತು ಗೊತ್ತಾ?

Viral Video: ಕುಕ್ಕರ್​ನಲ್ಲಿ ಕಾಫಿ ತಯಾರಿಸಿದ ವ್ಯಕ್ತಿ: ವೀಡಿಯೋ ವೈರಲ್​

Published On - 10:56 am, Tue, 28 December 21