Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸಾಂತಾಕ್ಲಾಸ್​ ಟೋಪಿ ಧರಿಸಿ ತಿರುಗಾಡಿದ ಹಾವು; ವಿಡಿಯೋ ಕಂಡು ಅಚ್ಚರಿಗೊಂಡ ನೆಟ್ಟಿಗರು

ಈ ವಿಡಿಯೋದಲ್ಲಿ ಬಿಳಿ ಬಣ್ಣದ ಹಾವು ಸಾಂತಾಕ್ಲಾಸ್​ ಟೋಪಿಯನ್ನು ಧರಿಸಿ ತೆವಳುತ್ತಿದೆ. ಅಚ್ಚರಿಯ ಸಂಗತಿಯೆಂದರೆ ಹಾವು ಕೂಡ ಇದನ್ನು ಎಂಜಾಯ್​ ಮಾಡುತ್ತಿದೆ. ಹಾವನ್ನು ಕಂಡು ಭಯ ಪಡುವವರು ಒಮ್ಮೆ ಈ ವಿಡಿಯೋ ನೋಡಿದರೆ ಬೆರಗಾಗುವುದು ಮಾತ್ರ ಸತ್ಯ.

Viral Video: ಸಾಂತಾಕ್ಲಾಸ್​ ಟೋಪಿ ಧರಿಸಿ ತಿರುಗಾಡಿದ ಹಾವು; ವಿಡಿಯೋ ಕಂಡು ಅಚ್ಚರಿಗೊಂಡ ನೆಟ್ಟಿಗರು
ಹಾವು ಸಾಂತಾಕ್ಲಾಸ್ ಟೋಪಿ ಧರಿಸಿದೆ
Follow us
TV9 Web
| Updated By: Digi Tech Desk

Updated on:Dec 28, 2021 | 1:10 PM

ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲಾ ಒಂದು ವಿಡಿಯೋ ವೈರಲ್​ ಆಗುತ್ತಲೇ ಇರುತ್ತದೆ. ಕೆಲವೊಮ್ಮೆ ತಮಾಷೆಯ ವಿಡಿಯೋಗಳು ಹರಿದಾಡಿದರೆ ಮತ್ತೆ ಕೆಲವೊಮ್ಮೆ ಭಯ ಹುಟ್ಟಿಸುವ ಅಥವಾ ಅಚ್ಚರಿಯನ್ನುಂಟು ಮಾಡುವ ವಿಡಿಯೋಗಳು ವೈರಲ್​ ಆಗುತ್ತವೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ (Social media) ಹಾವಿನ ವಿಡಿಯೋವೊಂದು ವೈರಲ್​ ಆಗಿದೆ. ಹಾವನ್ನು ಸಾಮಾನ್ಯವಾಗಿ ಕಂಡರೆ ಭಯ ಪಡುತ್ತೇವೆ. ಅದರಿಂದ ಆದಷ್ಟು ದೂರ ಇರಲು ಪ್ರಯತ್ನಿಸುತ್ತೇವೆ. ಆದರೆ ಇತ್ತೀಚೆಗೆ ಹಾವುಗಳನ್ನು(Snake) ನಾಯಿ ಮತ್ತು ಇನ್ನಿತರ ಸಾಕುಪ್ರಾಣಿಗಳಂತೆಯೇ ಸಾಕುತ್ತಾರೆ. ಇದಕ್ಕೆ ಪುಷ್ಠಿ ನೀಡುವಂತಿದೆ ಈ ವಿಡಿಯೋ.  

ವೈರಲ್​ ಆದ ವಿಡಿಯೋದಲ್ಲಿ ಹಾವನ್ನು ಕಂಡು ಭಯ ಬೀಳುವುದಿಲ್ಲ. ಬದಲಾಗಿ ಹಾವು ಕೂಡ ಹೀಗೆ ಇರಬಹುದಾ ಎಂದು ಆಶ್ಚರ್ಯಪಡುತ್ತಿರಾ. ಇದಕ್ಕೆ ಕಾರಣ ಹಾವು ಸಾಂತಾಕ್ಲಾಸ್​ ಟೋಪಿ ಧರಿಸಿ ತಿರುಗಾಡುತ್ತದೆ. ಈ ವಿಡಿಯೋದಲ್ಲಿ ಬಿಳಿ ಬಣ್ಣದ ಹಾವು ಸಾಂತಾಕ್ಲಾಸ್​ ಟೋಪಿಯನ್ನು ಧರಿಸಿ ತೆವಳುತ್ತಿದ್ದು, ಅದನ್ನು ವ್ಯಕ್ತಿಯೊಬ್ಬರು ಮಾತನಾಡಿಸುತ್ತಿರುವಂತೆ ಕಾಣುತ್ತದೆ. ಅಚ್ಚರಿಯ ಸಂಗತಿಯೆಂದರೆ ಹಾವು ಕೂಡ ಇದನ್ನು ಎಂಜಾಯ್​ ಮಾಡುತ್ತಿದೆ. ಹಾವನ್ನು ಕಂಡು ಭಯ ಪಡುವವರು ಒಮ್ಮೆ ಈ ವಿಡಿಯೋ ನೋಡಿದರೆ ಬೆರಗಾಗುವುದು ಮಾತ್ರ ಸತ್ಯ.

View this post on Instagram

A post shared by ViralHog (@viralhog)

ಹಾವಿನ ಈ ವಿಡಿಯೋವನ್ನು ಎಲ್ಲರೂ ತುಂಬಾ ಇಷ್ಟ ಪಟ್ಟಿದ್ದಾರೆ. ಕಾಮೆಂಟ್‌ಗಳ ಮೂಲಕ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ವೈರಲ್ ಹಾಗ್ ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಲಕ್ಷಾಂತರ ವ್ಯೂವ್ಸ್​ ಪಡೆದಿದೆ. ಕಮೆಂಟ್​ ಮೂಲಕ ನೆಟ್ಟಿಗರು ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಾವು ತುಂಬಾ ಸುಂದರವಾಗಿದೆ ಮತ್ತು ವಿಶಿಷ್ಟವಾಗಿದೆ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ಇದು ತುಂಬಾ ಅಪಾಯಕಾರಿ ಎಂದು ಕಮೆಂಟ್​ ಮಾಡಿದ್ದಾರೆ. ಒಟ್ಟಾರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅನೇಕರು ರೀಪೋಸ್ಟ್​ ಕೂಡ ಮಾಡಿದ್ದಾರೆ.

ಇದನ್ನೂ ಓದಿ: Viral Video: ಯುವತಿ ಮತ್ತು ಸಾಕು ನಾಯಿ ಮೇಲೆ ದಾಳಿ ಮಾಡಿದ ಪಿಟ್ ಬುಲ್; ಮುಂದೇನಾಯ್ತು ನೋಡಿ

Viral Video: ಅತಿಥಿಗಳ ಮುಂದೆಯೇ ವಧುವಿನ ಕೈ ಹಿಡಿದು ಎಳೆದ ವರ; ವೈರಲ್ ಆದ​ ವಿಡಿಯೋ ನೋಡಿ

Published On - 12:36 pm, Tue, 28 December 21

ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್
ತೀವ್ರ ಕುತೂಹಲ ಮೂಡಿಸಿರುವ ಬಸನಗೌಡ ಯತ್ನಾಳ್ ಮುಂದಿನ ನಡೆ
ತೀವ್ರ ಕುತೂಹಲ ಮೂಡಿಸಿರುವ ಬಸನಗೌಡ ಯತ್ನಾಳ್ ಮುಂದಿನ ನಡೆ
ಹನಿ ಟ್ರ್ಯಾಪ್ ಪ್ರಕರಣ ವೈಯಕ್ತಿಕವಾದದ್ದು, ಕಾಮೆಂಟ್ ಮಾಡಲಾರೆ: ರಾಜು ಕಾಗೆ
ಹನಿ ಟ್ರ್ಯಾಪ್ ಪ್ರಕರಣ ವೈಯಕ್ತಿಕವಾದದ್ದು, ಕಾಮೆಂಟ್ ಮಾಡಲಾರೆ: ರಾಜು ಕಾಗೆ
ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಡಿಕೆ ಶಿವಕುಮಾರ್
ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಡಿಕೆ ಶಿವಕುಮಾರ್