ತನ್ನ ಮೇಲೆ ಎರಗಲು ಬಂದ ಹುಲಿಯೊಂದಿಗೆ ಕಣ್ಣಾಮುಚ್ಚಾಲೆ ಆಡಿದ ಬಾತುಕೋಳಿ!; ವಿಡಿಯೋ ಇಲ್ಲಿದೆ

ತನ್ನ ಮೇಲೆ ಎರಗಲು ಬಂದ ಹುಲಿಯೊಂದಿಗೆ ಕಣ್ಣಾಮುಚ್ಚಾಲೆ ಆಡಿದ ಬಾತುಕೋಳಿ!; ವಿಡಿಯೋ ಇಲ್ಲಿದೆ
ಬಾತುಕೋಳಿ- ಹುಲಿಯ ವಿಡಿಯೋ

ಈ ವಿಡಿಯೋವನ್ನು 2 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ, ಬಾತುಕೋಳಿಯು ತನ್ನ ಬಳಿಗೆ ಕಳ್ಳ ಹೆಜ್ಜೆಯನ್ನಿಡುತ್ತಾ ಬರುತ್ತಿದ್ದ ಹುಲಿಯೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿರುವುದನ್ನು ನೋಡಬಹುದು.

TV9kannada Web Team

| Edited By: Sushma Chakre

Dec 27, 2021 | 9:34 PM

ಇಂಟರ್ನೆಟ್​ನಲ್ಲಿ ಪ್ರಾಣಿ ಮತ್ತು ಪಕ್ಷಿಗಳನ್ನು ಒಳಗೊಂಡಿರುವ ವಿಡಿಯೋಗಳು ಹರಿದಾಡುತ್ತಲೇ ಇರುತ್ತದೆ. ನೆಟ್ಟಿಗರು ಇಂತಹ ವಿಡಿಯೋಗಳನ್ನು ಬಹಳ ಇಷ್ಟಪಟ್ಟು ನೋಡುತ್ತಾರೆ. ಅದೇ ರೀತಿ ಹುಲಿ ಮತ್ತು ಬಾತುಕೋಳಿಯ ವಿಡಿಯೋವೊಂದು ಇಂಟರ್ನೆಟ್​ನಲ್ಲಿ ಎಲ್ಲರ ಗಮನವನ್ನು ಸೆಳೆದಿದೆ. Buitengebieden ಎಂಬ ಟ್ವಿಟ್ಟರ್ ಖಾತೆಯಲ್ಲಿ 46 ಸೆಕೆಂಡುಗಳ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಈ ವಿಡಿಯೋವನ್ನು 2 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ, ಬಾತುಕೋಳಿಯು ತನ್ನ ಬಳಿಗೆ ಕಳ್ಳ ಹೆಜ್ಜೆಯನ್ನಿಡುತ್ತಾ ಬರುತ್ತಿದ್ದ ಹುಲಿಯೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿರುವುದನ್ನು ನೋಡಬಹುದು. ಹುಲಿ ಆ ಬಾತುಕೋಳಿಯ ಮೇಲೆ ದಾಳಿ ನಡೆಸುವಷ್ಟರಲ್ಲಿ ಆ ಬಾತುಕೋಳಿ ನೀರಿನೊಳಗೆ ಧುಮುಕಿತು.

ನಂತರ, ಅದು ಎಲ್ಲೋ ಕೆಳಗಿನಿಂದ ಮೇಲೆ ಬಂದು ಮತ್ತೆ ಮುಖ ತೋರಿಸಿತು. ಇದರಿಂದ ಹುಲಿ ಸಂಪೂರ್ಣವಾಗಿ ಗೊಂದಲಕ್ಕೊಳಗಾಯಿತು.

“ಪ್ಲೇಯಿಂಗ್ ಹೈಡ್ ಅಂಡ್ ಸೀಕ್ (sic),” ಎಂಬ ಶೀರ್ಷಿಕೆ ನೀಡಿ ವೀಡಿಯೊವನ್ನು ಅಪ್​ಲೋಡ್ ಮಾಡಲಾಗಿದೆ.

ಇದನ್ನೂ ಓದಿ: Viral Video: ಕಿಟ್​ಕ್ಯಾಟ್​ ಚಾಕೋಲೇಟ್​ನಿಂದ ಟೊಮ್ಯಾಟೋ ಕಟ್​ ಮಾಡಿದ ಮಹರಾಯ; ಈ ವಿಡಿಯೋ ಮಿಸ್ ಮಾಡಬೇಡಿ!

Viral Video: ಬಾಹ್ಯಾಕಾಶ ಕೇಂದ್ರದಲ್ಲಿ ಗಗನಯಾತ್ರಿಗಳಿಗೆ ಹೇಗೆ ಹೇರ್​ಕಟ್ ಮಾಡ್ತಾರೆ ಗೊತ್ತಾ?; ಇಲ್ಲಿದೆ ವಿಡಿಯೋ

Follow us on

Related Stories

Most Read Stories

Click on your DTH Provider to Add TV9 Kannada