Viral Video: ಸಿಡಿಲು ಬಡಿದು ಸ್ಪೋಟಗೊಂಡ ವ್ಯಕ್ತಿ; ನೆಟ್ಟಿಗರಲ್ಲಿ ಭಯ ಹುಟ್ಟಿಸಿದ ವಿಡಿಯೋ ನೋಡಿ

ಸ್ಥಳೀಯ ಮಾಧ್ಯಮಗಳ ಪ್ರಕಾರ, ಜಕಾರ್ತಾದ ಉತ್ತರದಲ್ಲಿನ ಕಂಪನಿಯೊಂದರ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ 35 ವರ್ಷದ ವ್ಯಕ್ತಿಗೆ ಸಿಡಿಲು ಬಡಿದಿದೆ. ಆ ದಿನ ಮಳೆ ಕೂಡ ಬರುತ್ತಿದ್ದು, ಕರ್ತವ್ಯ ನಿರತನಾಗಿದ್ದ ಸಿಬ್ಬಂದಿಗೆ ಅಚಾನಕ್​ ಆಗಿ ಸಿಡಿಲು ಬಡಿದಿದೆ.

Viral Video: ಸಿಡಿಲು ಬಡಿದು ಸ್ಪೋಟಗೊಂಡ ವ್ಯಕ್ತಿ; ನೆಟ್ಟಿಗರಲ್ಲಿ ಭಯ ಹುಟ್ಟಿಸಿದ ವಿಡಿಯೋ ನೋಡಿ
ವ್ಯಕ್ತಿಗೆ ಸಿಡಿಲು ಬಡಿದಿದೆ
Follow us
TV9 Web
| Updated By: preethi shettigar

Updated on:Dec 28, 2021 | 8:58 AM

ಅಚಾನಕ್​ ಆಗಿ ನಡೆಯುವ ಕೆಲವು ಅಪಘಾತಗಳು ಮತ್ತು ಎದುರಾಗುವ ಸನ್ನಿವೇಶಗಳು ಹೆಚ್ಚು ನೋವನ್ನುಂಟು ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಬಹುಷಃ ಇದು ಹೆಚ್ಚು. ನಾವು ಅಂದುಕೊಂಡಿದ್ದಕ್ಕಿಂತ ಯಾವುದನ್ನು ಯೋಚಿಸಿರುವುದಿಲ್ಲವೋ ಅದೇ ಹೆಚ್ಚಾಗಿ ನಡೆಯುತ್ತದೆ. ಅದರಲ್ಲೂ ಮಾನವನ ಬದುಕು ನೀರಿನ ಮೇಲಿನ ಗುಳ್ಳೆಯಿದ್ದಂತೆ. ಇದು ಸತ್ಯ. ಏಕೆಂದರೆ ಇಂದು ನಮ್ಮ ನಡುವೆ ಚೆನ್ನಾಗಿದ್ದವರು ಕೆಲವೇ ನಿಮಿಷಗಳಲ್ಲಿ ಇಲ್ಲದಂತಾಗುತ್ತಾರೆ. ಆರೋಗ್ಯವಂತರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಅಥವಾ ಸಾವನ್ನಪ್ಪಲುಬಹುದು. ಅನಿರೀಕ್ಷಿತವಾಗಿ ನಡೆಯುವ ಘಟನೆಗೆ ಸದಾ ಸಿದ್ಧವಿರಬೇಕು. ಈ ಮಾತಿಗೆ ಪುಷ್ಠಿ ನೀಡುವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social media) ಸದ್ಯ ವೈರಲ್​ ಆಗಿದೆ. ತಮ್ಮ ಪಾಡಿಗೆ ತಾವು ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಸಿಡಿಲು ಬಡಿದಿದೆ. ಈ ಭಯಾನಕ ವಿಡಿಯೋ ನೆಟ್ಟಿಗರಲ್ಲಿ ಆತಂಕ ಹುಟ್ಟು ಹಾಕಿದೆ.

ಇಂಡೋನೇಷ್ಯಾದ ಜಕಾರ್ತದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬ ಬದುಕುಳಿದ ಆಘಾತಕಾರಿ ವಿಡಿಯೋ ವೈರಲ್​ ಆಗಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಜಕಾರ್ತಾದ ಉತ್ತರದಲ್ಲಿನ ಕಂಪನಿಯೊಂದರ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ 35 ವರ್ಷದ ವ್ಯಕ್ತಿಗೆ ಸಿಡಿಲು ಬಡಿದಿದೆ. ಆ ದಿನ ಮಳೆ ಕೂಡ ಬರುತ್ತಿದ್ದು, ಕರ್ತವ್ಯ ನಿರತನಾಗಿದ್ದ ಸಿಬ್ಬಂದಿಗೆ ಅಚಾನಕ್​ ಆಗಿ ಸಿಡಿಲು ಬಡಿದಿದೆ. ಈ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವೈರಲ್​ ಆಗಿದೆ.

ವೈರಲ್​ ಆದ ಈ ವಿಡಿಯೋದಲ್ಲಿ ಮಳೆಯ ನಡುವೆ ವ್ಯಕ್ತಿ ಕೈಯಲ್ಲಿ ಕೊಡೆ ಹಿಡಿದುಕೊಂಡು ನಡೆದು ಹೋಗುತ್ತಿರುತ್ತಾನೆ. ಆದರೆ ಕೆಲವೇ ಸೆಕೆಂಡುಗಳ ನಂತರ, ಸಿಡಿಲು ಬಡಿದು ಬೆಂಕಿ ಕಿಡಿ ಸಿಡಿಯುವಂತೆ ಸಿಡಿದು ಆತ ನೆಲಕ್ಕೆ ಬಿಳುತ್ತಾನೆ. ಈ ವಿಷಯ ತಿಳಿಯುತ್ತಿದ್ದಂತೆ ಇನ್ನಿತರ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಆತನನ್ನು ಎಚ್ಚರಿಸುವ ಪ್ರಯತ್ನ ಮಾಡುತ್ತಾರೆ. ಈ ಘಟನೆ ಡಿಸೆಂಬರ್​ 26 ರಂದು ಜಕಾರ್ತಾ ಬಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಅದೃಷ್ಟವಶಾತ್ ವ್ಯಕ್ತಿ ಬದುಕುಳಿದಿದ್ದಾರೆ. ಆದರೆ ಕೈಗಳಲ್ಲಿ ಸಿಡಿಲ ಬಡಿತಕ್ಕೆ ಸುಟ್ಟಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ವ್ಯಕ್ತಿಯ ಕೈಯಲ್ಲಿದ್ದ ವಾಕಿ ಟಾಕಿಗೆ ಸಿಡಿಲು ಬಡಿದಿದೆ ಎಂದು ಸದ್ಯ ತಿಳಿದು ಬಂದಿದೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಇದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.

ಇದನ್ನೂ ಓದಿ: Viral Video: 10 ಅಡಿ ಉದ್ದದ ಹೆಬ್ಬಾವು ಹಿಡಿದ 2 ವರ್ಷದ ಮಗು; ಮುಂದೇನಾಯ್ತು ವಿಡಿಯೋ ನೋಡಿ

Viral Photo: ಈ ಚಿತ್ರದಲ್ಲಿ ನಿಮಗೆ ಎಷ್ಟು ಕುದುರೆ ಕಾಣುತ್ತಿದೆ? ಸರಿಯಾದ ಉತ್ತರಕ್ಕಾಗಿ ತಲೆ ಕೆಡಿಸಿಕೊಂಡ ನೆಟ್ಟಿಗರು

Published On - 8:47 am, Tue, 28 December 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ