AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: 10 ಅಡಿ ಉದ್ದದ ಹೆಬ್ಬಾವು ಹಿಡಿದ 2 ವರ್ಷದ ಮಗು; ಮುಂದೇನಾಯ್ತು ವಿಡಿಯೋ ನೋಡಿ

ಕೇವಲ 30 ಸೆಕೆಂಡ್​ಗಳ ವಿಡಿಯೋ ಇದಾಗಿದ್ದು, ಎರಡು ವರ್ಷದ ಬಾಲಕನೊಬ್ಬ 10 ಅಡಿ ಉದ್ದ ಮತ್ತು ಭಾರವಾದ ಹೆಬ್ಬಾವನ್ನು ಆಟಿಕೆಯಂತೆ ಮನೆಯ ಹೊರಗಿನ ಬಿದಿಯಲ್ಲಿ ಹಿಡಿದು ಆಟವಾಡುತ್ತಿದೆ.

Viral Video: 10 ಅಡಿ ಉದ್ದದ ಹೆಬ್ಬಾವು ಹಿಡಿದ 2 ವರ್ಷದ ಮಗು; ಮುಂದೇನಾಯ್ತು ವಿಡಿಯೋ ನೋಡಿ
ಹೆಬ್ಬಾವಿನೊಂದಿಗೆ ಆಡುವ ಮಗು
TV9 Web
| Updated By: preethi shettigar|

Updated on:Dec 27, 2021 | 4:13 PM

Share

ಹಾವು ಎಂದರೆ ಒಂದು ಕ್ಷಣ ಮೈ ನಡುಗುತ್ತೆ. ಹಾವಿನ ಹೆಸರು ಹೇಳುತ್ತಿದ್ದಂತೆ ರೋಮಗಳು ನೆಟ್ಟಗಾಗುತ್ತವೆ. ಮುಖ ಬೆವರುವುದಕ್ಕೆ ಶುರುವಾಗುತ್ತೆ. ಇದಕ್ಕೆ ಕಾರಣ ಭಯ. ದೂರದಿಂದಲೇ ಹಾವು ಕಣ್ಣಿಗೆ ಬಿದ್ದರೆ ಸಾಕು ಭಯಕ್ಕೆ ಓಡುವುದು ಸಹಜ. ಅದರಲ್ಲೂ ಹೆಬ್ಬಾವು (giant python) ಎಂದರೆ ಸುಮ್ಮನೇನಾ ಆ ಕಡೆಗೆ ತಲೆ ಕೂಡ ಹಾಕುವುದಿಲ್ಲ. ಆದರೆ 2 ವರ್ಷದ ಮಗುವೊಂದು ದೈತ್ಯಾಕಾರದ ಹಾವಿನೊಂದಿಗೆ ಆಟವಾಡಿದೆ. ಸದ್ಯ ಹೆಬ್ಬಾವಿನ ಮೇಲೆ ಮಲಗಿ ಆಟವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಇಂತಹ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಆದರೆ 2 ವರ್ಷದ ಮಗು ಹೆಬ್ಬಾವು ಜತೆಗೆ ಇರುವುದು ಸದ್ಯ ನೆಟ್ಟಿಗರಲ್ಲಿ ಆಶ್ಚರ್ಯ ಉಂಟುಮಾಡುವಂತೆ ಮಾಡಿದೆ.

ವೈರಲ್ ಆದ ಈ ವಿಡಿಯೋದಲ್ಲಿ 2 ವರ್ಷದ ಮಗು ಹೆಬ್ಬಾವಿನೊಂದಿಗೆ ಆಟವಾಡುತ್ತಿದೆ. ಕೇವಲ 30 ಸೆಕೆಂಡ್​ಗಳ ವಿಡಿಯೋ ಇದಾಗಿದ್ದು, ಎರಡು ವರ್ಷದ ಬಾಲಕನೊಬ್ಬ 10 ಅಡಿ ಉದ್ದ ಮತ್ತು ಭಾರವಾದ ಹೆಬ್ಬಾವನ್ನು ಆಟಿಕೆಯಂತೆ ಮನೆಯ ಹೊರಗಿನ ಬಿದಿಯಲ್ಲಿ ಹಿಡಿದು ಆಟವಾಡುತ್ತಿದೆ. ಇದನ್ನು ನೋಡಿದರೆ ಹೃದಯ ಬಡಿತ ಹೆಚ್ಚಾಗುವುದು ಖಂಡಿತ. ವಿಡಿಯೋ ಮಧ್ಯಭಾಗದಲ್ಲಿ ಮಗುವನ್ನು ಹಾವು ಸುತ್ತುವರಿದಿದ್ದು ಭಯ ಹುಟ್ಟುಹಾಕುತ್ತದೆ.

ಆದರೆ ಈ ವಿಡಿಯೋದಲ್ಲಿನ 2 ವರ್ಷದ ಮಗುವಿಗೆ ಮಾತ್ರ ಭಯವೇ ಇಲ್ಲದಂತೆ ಕಾಣುತ್ತದೆ. ಏಕೆಂದರೆ ಹೆಬ್ಬಾವಿನ ಮೇಲೆ ಉರುಳಿ ಜಾರುಬಂಡೆ ಆಡುವಂತೆ ಮಾಡುತ್ತದೆ. ಈ ಅಚ್ಚರಿಯ ವಿಡಿಯೋವನ್ನು Nature27_12 ಹೆಸರಿನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೀಡಿಯೊವನ್ನು ಅಪ್‌ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಇದಕ್ಕೆ ಸುಮಾರು 8 ಸಾವಿರ ವ್ಯೂವ್ಸ್​ ಬಂದಿದೆ.  ಈ ವೀಡಿಯೋ ನೋಡಿದವರು ಶಾಕ್ ಆಗಿದ್ದಾರೆ. ಈ ಬಗ್ಗೆ ಜನರು ಕಮೆಂಟ್​ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲೂ ವಿಡಿಯೋ ಮಾಡಿದ ವ್ಯಕ್ತಿಯನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂದಿದ್ದಾರೆ.

View this post on Instagram

A post shared by طبیعت (@nature27_12)

ಈ ವಿಡಿಯೋ ಕಂಡ ವ್ಯಕ್ತಿಯೋರ್ವರು ವಿಡಿಯೋ ಮಾಡುತ್ತಾ ಇದ್ದಿರಲ್ಲಾ ನೀವು ಮುರ್ಖರೇ ಎಂದು ಕಮೆಂಟ್​ ಮಾಡಿದ್ದಾರೆ. ಮತ್ತೊಬ್ಬರು ಇದು ಬೇಜವಾಬ್ದಾರಿಯ ವರ್ತನೆ ಎಂದಿದ್ದಾರೆ. ಮಗುವನ್ನು ಅಲ್ಲಿಂದ ಕರೆ ತರುವ ಬದಲು ವಿಡಿಯೋ ಮಾಡುತ್ತಾ ನಿಂತಿದ್ದೀರಾ ಎಂದು ಮತ್ತೆ ಕೆಲವರು ಟೀಕಿಸಿದ್ದಾರೆ. ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ಭಯಭೀತರನ್ನಾಗಿಸುವ ವಿಡಿಯೋ ಇದಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಇದನ್ನೂ ಓದಿ:

Year Ender 2021: ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ 5 ವಿಲಕ್ಷಣ ಆಹಾರ ಸಂಯೋಜನೆ ಯಾವುದು ಗೊತ್ತಾ?

Viral Video: ಯುವತಿ ಮತ್ತು ಸಾಕು ನಾಯಿ ಮೇಲೆ ದಾಳಿ ಮಾಡಿದ ಪಿಟ್ ಬುಲ್; ಮುಂದೇನಾಯ್ತು ನೋಡಿ

Published On - 4:13 pm, Mon, 27 December 21