Sign In

By signing in or creating an account, you agree with Associated Broadcasting Company's Terms & Conditions and Privacy Policy.

Weird Story: ವಿಚಿತ್ರ ಅನಿಸಿದರೂ ಇದು ಸತ್ಯ: 35 ವರ್ಷಗಳಿಂದ ಗರ್ಭ ಧರಿಸಿದ್ದ ಮುದುಕಿ..!

Viral News: ಏಕೆಂದರೆ ಹಲವಾರು ದಶಕಗಳಿಂದ ವಯಸ್ಸಾದ ಮಹಿಳೆಯ ಹೊಟ್ಟೆಯಲ್ಲಿ 7 ತಿಂಗಳ ಭ್ರೂಣವಿತ್ತು. ವಿಚಿತ್ರವೆಂದರೆ ಆ ಮಹಿಳೆಗೆ ಈ ಬಗ್ಗೆ ಗೊತ್ತೇ ಇರಲಿಲ್ಲ.

Weird Story: ವಿಚಿತ್ರ ಅನಿಸಿದರೂ ಇದು ಸತ್ಯ: 35 ವರ್ಷಗಳಿಂದ ಗರ್ಭ ಧರಿಸಿದ್ದ ಮುದುಕಿ..!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಝಾಹಿರ್ ಯೂಸುಫ್

Updated on: Dec 27, 2021 | 10:30 PM

ತಾಯಿಯಾಗುವುದು ಎಂದರೆ  ಪ್ರತಿಯೊಂದು ವಿವಾಹಿತ ಮಹಿಳೆಯರ ದೊಡ್ಡ ಕನಸು. ಏಕೆಂದರೆ ಕುಟುಂಬ, ಸಂಸಾರ ಎನ್ನುವುದು ಹುಟ್ಟಿಕೊಳ್ಳುವುದೇ ಮಕ್ಕಳಿಂದಲೇ. ಇತ್ತ ಮಹಿಳೆಯರು ಗರ್ಭಧರಿಸಿದ ಪ್ರತಿ ಕ್ಷಣವನ್ನೂ ಅನುಭವಿಸುತ್ತಲೇ ಇರುತ್ತಾರೆ. ಅದು ನೋವು ಇರಬಹುದು ಅಥವಾ ಮಗುವಿನ ಚಲನವಲನ ಇರಬಹುದು. ಆದರೆ ಅಲ್ಜೀರಿಯಾದ ಮಹಿಳೆಯೊಬ್ಬರಿಗೆ ತನ್ನ ಅರ್ಧ ವಯಸ್ಸಿನವರೆಗೆ ತನ್ನ ಹೊಟ್ಟೆಯಲ್ಲಿ ಮಗುವಿದೆ ಎಂಬುದೇ ತಿಳಿದಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಅಸಾಮಾನ್ಯ ಗರ್ಭಧಾರಣೆ. 35 ವರ್ಷಗಳ ನಂತರ, ಹೊಟ್ಟೆಯಲ್ಲಿ ಭಯಂಕರ ನೋವು ಕಾಣಿಸಿಕೊಂಡಾಗಲಷ್ಟೇ ತಾನು ಗರ್ಭಿಣಿಯಾಗಿದ್ದೆ ಎಂಬುದು ಗೊತ್ತಾಗಿದೆ.

ಅಲ್ಜೀರಿಯಾದ 73 ವರ್ಷದ ಮಹಿಳೆಯೊಬ್ಬರಿಗೆ ಇದ್ದಕ್ಕಿದ್ದಂತೆ ಹೊಟ್ಟೆಯಲ್ಲಿ ತೀವ್ರವಾದ ನೋವು ಕಾಣಿಸಿತು. ಸಹಿಸಲಾಗದ ನೋವಿನಿಂದ ಕಿರುಚುತ್ತಿದ್ದ ಮುದುಕಿಯನ್ನು ಕುಟುಂಬಸ್ಥರು ವೈದ್ಯರ ಬಳಿಗೆ ಕರೆದುಕೊಂಡು ಹೋಗಿದ್ದರು. ಹೊಟ್ಟೆ ನೋವಿಗೆ ಕಾರಣವೇನು ಎಂದು ವೈದ್ಯರು ಸ್ಕ್ಯಾನಿಂಗ್ ಮೂಲಕ ಪರಿಶೀಲಿಸಿದಾಗ ದಿಗ್ಭ್ರಮೆಗೊಂಡರು. ಏಕೆಂದರೆ ಹಲವಾರು ದಶಕಗಳಿಂದ ವಯಸ್ಸಾದ ಮಹಿಳೆಯ ಹೊಟ್ಟೆಯಲ್ಲಿ 7 ತಿಂಗಳ ಭ್ರೂಣವಿತ್ತು. ವಿಚಿತ್ರವೆಂದರೆ ಆ ಮಹಿಳೆಗೆ ಈ ಬಗ್ಗೆ ಗೊತ್ತೇ ಇರಲಿಲ್ಲ.

ಸನ್ ವರದಿಯ ಪ್ರಕಾರ, ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾದ ಮಹಿಳೆಯನ್ನು ತಪಾಸಣೆ ನಡೆಸಿದಾಗ ಹೊಟ್ಟೆಯಲ್ಲಿ ಸುಮಾರು 35 ವರ್ಷದಿಂದ ಏಳು ತಿಂಗಳ ಭ್ರೂಣ ಇರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಈ ಭ್ರೂಣವು ಕಲ್ಲಿನಂತೆ ಮಾರ್ಪಟ್ಟಿದೆ. ಇಂತಹ ಅಪರೂಪದ ಪ್ರಕರಣಗಳನ್ನು ಸಾಮಾನ್ಯ ಭಾಷೆಯಲ್ಲಿ ಬೇಬಿ ಸ್ಟೋನ್ ಎನ್ನಲಾಗುತ್ತದೆ. ಇದೀಗ 2 ಕೆ.ಜಿ ಆಗಿದ್ದ ಈ ಭ್ರೂಣವನ್ನು ವೈದ್ಯರು ಹೊರ ತೆಗೆದಿದ್ದಾರೆ.

ಇಂತಹ ಪ್ರಕರಣ ಬಹಳ ಅಪರೂಪವಾಗಿ ಕಂಡು ಬರುತ್ತವೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಲಿಥೋಪಿಡಿಯನ್ ಎಂಬ ಸ್ಥಿತಿ ಎಂದು ಕರೆಯಲಾಗುತ್ತದೆ. ‘ಗರ್ಭಕೋಶದ ಬದಲಾಗಿ ಹೊಟ್ಟೆಯಲ್ಲಿ ಭ್ರೂಣದ ಬೆಳವಣಿಗೆಯಾದಾಗ ಹೀಗಾಗುತ್ತದೆ. ಮಗುವಿನ ನಿರಂತರ ರಕ್ತದ ಕೊರತೆಯಿಂದಾಗಿ, ಭ್ರೂಣದ ಬೆಳವಣಿಗೆ ಸಾಧ್ಯವಾಗುವುದಿಲ್ಲ. ಭ್ರೂಣವು ಹೊಟ್ಟೆಯಲ್ಲೇ ಉಳಿಯುವುದರಿಂದಕಲ್ಲಾಗಲು ಪ್ರಾರಂಭಿಸುತ್ತದೆ. ಮಹಿಳೆಯ ದೇಹದಲ್ಲಿ ಪತ್ತೆಯಾದ ಬೇಬಿ ಸ್ಟೋನ್ ಕೂಡ ಇದೇ ಕಾರಣದಿಂದ ಉಂಟಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: IPL 2022: ಬದಲಾದ ನಿಯಮಗಳು: ಈ ಬಾರಿಯ ಐಪಿಎಲ್ ಈ ಹಿಂದಿಗಿಂತಲೂ ವಿಶೇಷ..!

ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…

ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

(Woman felt pain after 35 years of pregnancy)

ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ ಕಾರು ಜಸ್ಟ್​ ಮಿಸ್, ಬೈಕ್ ಹೋಗೇಬಿಡ್ತು
ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ ಕಾರು ಜಸ್ಟ್​ ಮಿಸ್, ಬೈಕ್ ಹೋಗೇಬಿಡ್ತು
Daily Devotional: ಪ್ರದೂಷ ಕಾಲದ ಮಹತ್ವ ಹಾಗೂ ಹಿಂದಿನ ರಹಸ್ಯ ತಿಳಿಯಿರಿ
Daily Devotional: ಪ್ರದೂಷ ಕಾಲದ ಮಹತ್ವ ಹಾಗೂ ಹಿಂದಿನ ರಹಸ್ಯ ತಿಳಿಯಿರಿ
ಬಾಂಬೆ ಹೈಕೋರ್ಟ್​ ಆವರಣದಲ್ಲಿ ವಾಮಾಚಾರ?
ಬಾಂಬೆ ಹೈಕೋರ್ಟ್​ ಆವರಣದಲ್ಲಿ ವಾಮಾಚಾರ?
Daily Horoscope: ಈ ರಾಶಿಯವರಿಗೆ ಇಂದು ಸಾಲ ಮಾಡುವ ಸಂದರ್ಭ ಬರಬಹುದು
Daily Horoscope: ಈ ರಾಶಿಯವರಿಗೆ ಇಂದು ಸಾಲ ಮಾಡುವ ಸಂದರ್ಭ ಬರಬಹುದು
ರಜತ್, ವಿನಯ್ ಗೌಡ ಮೆಡಿಕಲ್ ಚೆಕಪ್; ಲಾಂಗ್ ಹಿಡಿದವರಿಗೆ ಕಾದಿದೆ ಕಷ್ಟ ಕಾಲ
ರಜತ್, ವಿನಯ್ ಗೌಡ ಮೆಡಿಕಲ್ ಚೆಕಪ್; ಲಾಂಗ್ ಹಿಡಿದವರಿಗೆ ಕಾದಿದೆ ಕಷ್ಟ ಕಾಲ
ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ