IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…

IPL Mega Auction 2022: ಆರ್​ಸಿಬಿ ಅತ್ಯುತ್ತಮ ಆಟಗಾರನನ್ನು ಮೆಗಾ ಹರಾಜಿನಲ್ಲಿ ಖರೀದಿಸಬೇಕಾಗುತ್ತದೆ. ಅದರಲ್ಲೂ ಮೆಗಾ ಹರಾಜಿನಲ್ಲಿ ಕೆಲ ಆಟಗಾರರಿದ್ದಾರೆ. ಅವರ ಖರೀದಿಯಿಂದ ಆರ್​ಸಿಬಿ ತಂಡದ ಈ ಹಿಂದಿನ ಕೆಲ ನೂನ್ಯತೆಗಳನ್ನು ಸರಿಪಡಿಸಿಕೊಳ್ಳಬಹುದು. ((ಡೈಲಿಹಂಟ್​ನಲ್ಲಿ ಫೋಟೋ ಗ್ಯಾಲರಿ ಸ್ಟೋರಿಯಲ್ಲಿ ಸುದ್ದಿ ಸಾರಾಂಶ ಕಾಣಿಸುತ್ತಿಲ್ಲ. ಹಾಗಾಗಿ tv9kannada.com ಗೆ ಭೇಟಿ ನೀಡಿದ್ರೆ ಸಂಪೂರ್ಣ ಸುದ್ದಿ ಓದಬಹುದು)

| Updated By: ಝಾಹಿರ್ ಯೂಸುಫ್

Updated on: Dec 14, 2021 | 8:54 PM

ಐಪಿಎಲ್​ ಮೆಗಾ ಹರಾಜಿಗೂ ಮುನ್ನ ಹಳೆಯ 8 ಫ್ರಾಂಚೈಸಿಗಳು ಒಟ್ಟು 27 ಆಟಗಾರರನ್ನು ಉಳಿಸಿಕೊಂಡಿದೆ. ಈ ಪಟ್ಟಿಯಲ್ಲಿ ಆರ್​ಸಿಬಿ ರಿಟೈನ್ ಮಾಡಿಕೊಂಡಿರುವುದು ಕೇವಲ ಮೂವರು ಆಟಗಾರರನ್ನು ಮಾತ್ರ. ಅದರಂತೆ ಮುಂದಿನ ಸೀಸನ್​ನಲ್ಲಿ ಆರ್​ಸಿಬಿ ಪರ ಗ್ಲೆನ್ ಮ್ಯಾಕ್ಸ್​ವೆಲ್, ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್ ಆಡುವುದು ಖಚಿತ.

1 / 8
ಆದರೆ ಈಗಾಗಲೇ ಬಿಡುಗಡೆ ಮಾಡಿರುವ ಯಾವ ಆಟಗಾರ ಮತ್ತೆ ಆರ್​ಸಿಬಿಗೆ ಸಿಗಲಿದ್ದಾರೆ ಎಂಬುದರ ಬಗ್ಗೆ ಯಾವುದೇ ಖಚಿತತೆ ಇಲ್ಲ. ಹೀಗಾಗಿ ಆರ್​ಸಿಬಿ ಅತ್ಯುತ್ತಮ ಆಟಗಾರನನ್ನು ಮೆಗಾ ಹರಾಜಿನಲ್ಲಿ ಖರೀದಿಸಬೇಕಾಗುತ್ತದೆ. ಅದರಲ್ಲೂ ಮೆಗಾ ಹರಾಜಿನಲ್ಲಿ ಕೆಲ ಆಟಗಾರರಿದ್ದಾರೆ. ಅವರ ಖರೀದಿಯಿಂದ ಆರ್​ಸಿಬಿ ತಂಡದ ಈ ಹಿಂದಿನ ಕೆಲ ನೂನ್ಯತೆಗಳನ್ನು ಸರಿಪಡಿಸಿಕೊಳ್ಳಬಹುದು. ಅಂತಹ ಒಬ್ಬ ಆಟಗಾರ ಮನೀಷ್ ಪಾಂಡೆ. ಇಲ್ಲಿ ಮನೀಷ್ ಪಾಂಡೆಯೇ ಆರ್​ಸಿಬಿ ಯಾಕೆ ಬೇಕು ಎಂಬುದಕ್ಕೆ ನಾನಾ ಕಾರಣಗಳಿವೆ.

2 / 8
 1- ಕರ್ನಾಟಕದ ಆಟಗಾರ: ಕಳೆದ ಎರಡು ಸೀಸನ್​ನಲ್ಲಿ ಆರ್​ಸಿಬಿ ಪರ ಆಡಿದ್ದು ಏಕೈಕ ಕನ್ನಡಿಗ ದೇವದತ್ ಪಡಿಕ್ಕಲ್. ಇದೀಗ ಪಡಿಕ್ಕಲ್ ಕೂಡ ಮೆಗಾ ಹರಾಜಿನಲ್ಲಿರುವ ಕಾರಣ ಅವರನ್ನು ಮತ್ತೆ ಖರೀದಿಸಲು ಸಾಧ್ಯವಾಗುತ್ತೊ ಗೊತ್ತಿಲ್ಲ. ಆದರೆ ಮನೀಷ್ ಪಾಂಡೆಯ ಖರೀದಿಯೊಂದಿಗೆ ಆರ್​ಸಿಬಿ ಓಪನಿಂಗ್ ಆಟಗಾರನ ಸಮಸ್ಯೆಯನ್ನು ನೀಗಿಸಬಹುದು. ಏಕೆಂದರೆ ಈ ಹಿಂದೆ ಪಾಂಡೆ ಆರ್​ಸಿಬಿ ಪರ ಆರಂಭಿಕನಾಗಿ ಆಡಿದ್ದರು. 2009 ರಲ್ಲಿ ಆರ್​ಸಿಬಿ ಪರ ಪಾಂಡೆ ಭರ್ಜರಿ ಪ್ರದರ್ಶನ ನೀಡಿದ್ದರು. ಆ ವರ್ಷ ಆರ್​ಸಿಬಿ ಫೈನಲ್​ಗೂ ಪ್ರವೇಶಿಸಿತ್ತು ಎಂಬುದು ವಿಶೇಷ. ಇನ್ನು ಸಂದರ್ಭಕ್ಕೆ ತಕ್ಕಂತೆ ಬ್ಯಾಟ್ ಬೀಸುವ ಮನೀಷ್ ಅತ್ಯುತ್ತಮ ಹಿಟ್ಟರ್ ಎಂಬುದಕ್ಕೆ ಕೆಕೆಆರ್, ಎಸ್​ಆರ್​ಹೆಚ್​ ಪರ ಆಡಿದ ಸ್ಪೋಟಕ ಇನಿಂಗ್ಸ್​ಗಳೇ ಸಾಕ್ಷಿ. ಹೀಗಾಗಿ ಕನ್ನಡಿಗ ಸ್ಥಾನವನ್ನು ಹಾಗೂ ಆರಂಭಿಕನ ಕೊರತೆಯನ್ನು ಪಾಂಡೆ ಮೂಲಕ ತುಂಬಬಹುದು.

3 / 8
2- ಮಧ್ಯಮ ಕ್ರಮಾಂಕದ ಶಕ್ತಿ: ಮನೀಷ್ ಪಾಂಡೆ ಯಾವುದೇ ಕ್ರಮಾಂಕದಲ್ಲೂ ಬ್ಯಾಟ್ ಬೀಸಬಲ್ಲ ಆಟಗಾರ. ಇದೀಗ ಆರ್​ಸಿಬಿ ತಂಡದಿಂದ ಎಬಿ ಡಿವಿಲಿಯರ್ಸ್ ಹೊರನಡೆದಿದ್ದಾರೆ. ಒಂದು ವೇಳೆ ಆರ್​ಸಿಬಿ ಆರಂಭಿಕ ಆಟಗಾರನನ್ನು ಕಂಡುಕೊಂಡರೆ, ಮಧ್ಯಮ ಕ್ರಮಾಂಕದಲ್ಲೂ ಮನೀಷ್ ಪಾಂಡೆ ಅವರನ್ನು ಬಳಸಿಕೊಳ್ಳಬಹುದು. ಹೀಗಾಗಿ ಆರಂಭಿಕ ಅಥವಾ ಮಧ್ಯಮ ಕ್ರಮಾಂಕ..ಎರಡೂ ಆಯ್ಕೆಯನ್ನು ಮನೀಷ್ ಪಾಂಡೆ ಆಯ್ಕೆಯಿಂದ ಪಡೆಯಬಹುದು.

4 / 8
3- ಅತ್ಯುತ್ತಮ ಫೀಲ್ಡರ್: ಟಿ20 ಕ್ರಿಕೆಟ್​ನಲ್ಲಿ ಒಂದೊಂದು ರನ್ ಕೂಡ ಅಮೂಲ್ಯ. ಪ್ರಸ್ತುತ ಆರ್​ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಅತ್ಯುತ್ತಮ ಫೀಲ್ಡರ್​ಗಳಾಗಿ ಗುರುತಿಸಿಕೊಂಡಿದ್ದಾರೆ. ಇತ್ತ ಮನೀಷ್ ಪಾಂಡೆ ಕೂಡ ಬೌಂಡರಿ ಲೈನ್​ನ ವೇಗದ ಸರದಾರ. ಮಿಂಚಿನ ಓಟದ ಮೂಲಕ ಬೌಂಡರಿ ಲೈನ್​ನಲ್ಲಿ ಅದ್ಭುತ ಫೀಲ್ಡಿಂಗ್ ಮಾಡುವ ಮನೀಷ್ ಪಾಂಡೆ ಸೇರಿದರೆ ಆರ್​ಸಿಬಿ ತಂಡದ ಫೀಲ್ಡಿಂಗ್ ಮತ್ತಷ್ಟು ಬಲಿಷ್ಠವಾಗಲಿದೆ.

5 / 8
 4- ಕ್ಯಾಪ್ಟನ್: ಸದ್ಯದ ಆರ್​ಸಿಬಿ ತಂಡದ ಅತೀ ದೊಡ್ಡ ಚಿಂತೆ ಮುಂದಿನ ನಾಯಕ ಯಾರೆಂಬುದು. ಆದರೆ ಇತ್ತ ದೇಶೀಯ ಟಿ20 ಟೂರ್ನಿಯಲ್ಲಿ (ಸೈಯದ್ ಮುಷ್ತಾಕ್ ಅಲಿ ಟ್ರೋಫಿ) ಮನೀಷ್ ಪಾಂಡೆ ಕರ್ನಾಟಕವನ್ನು ಫೈನಲ್​ಗೆ ಕೊಂಡೊಯ್ದಿದ್ದರು. ಅಷ್ಟೇ ಅಲ್ಲದೆ ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ಪ್ರಿಕ್ವಾರ್ಟರ್​​ ಫೈನಲ್​ಗೆ ಪ್ರವೇಶಿಸಿದೆ. ಇನ್ನು ಪಾಂಡೆಯ ನಾಯಕತ್ವದಲ್ಲಿ ಕರ್ನಾಟಕ ತಂಡವು ಅತ್ಯುತ್ತಮ ಪ್ರದರ್ಶನ ನೀಡಿದೆ. ಹೀಗಾಗಿ ಮನೀಷ್ ಪಾಂಡೆ ಆಯ್ಕೆಯಿಂದಾಗಿ ಆರ್​ಸಿಬಿ ನಾಯಕತ್ವ ಚಿಂತೆಯನ್ನು ಕೂಡ ದೂರ ಮಾಡಬಹುದು.

6 / 8
ಒಟ್ಟಿನಲ್ಲಿ ಆರ್​ಸಿಬಿ ತಂಡಕ್ಕೆ ಮನೀಷ್ ಪಾಂಡೆ ಆಯ್ಕೆಯಾದರೆ ಒಂದೇ ಖರೀದಿಯಲ್ಲಿ ಹಲವು ಆಯ್ಕೆಗಳು ಸಿಗುವುದಂತು ಸತ್ಯ.

7 / 8
ವಿರಾಟ್ ಕೊಹ್ಲಿ ಜೊತೆ ಮನೀಷ್ ಪಾಂಡೆ

ವಿರಾಟ್ ಕೊಹ್ಲಿ ಜೊತೆ ಮನೀಷ್ ಪಾಂಡೆ

8 / 8
Follow us
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು

ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!

ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್

ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ

ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ

ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ