2021ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಪ್ರದರ್ಶನ ತೀರಾ ಕಳಪೆಯಾಗಿತ್ತು. ತಂಡವು ಸೆಮಿಫೈನಲ್‌ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಈ ಹೀನಾಯ ಪ್ರದರ್ಶನದೊಂದಿಗೆ ವಿರಾಟ್ ಕೊಹ್ಲಿ ಅವರ ಟಿ20 ನಾಯಕತ್ವದ ವೃತ್ತಿಜೀವನವೂ ಕೊನೆಗೊಂಡಿತು. ಇದೀಗ ವಿರಾಟ್ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ಕೂಡ ತೆಗೆದುಹಾಕಲಾಗಿದೆ. ಸದ್ಯ ಕೊಹ್ಲಿಯ ಕ್ಯಾಪ್ಟನ್ಸಿ ವಿಚಾರವು ಚರ್ಚೆಯಲ್ಲಿರುವಾಗಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತೊಂದು ದೊಡ್ಡ ವಿಷಯವನ್ನು ಬಹಿರಂಗಪಡಿಸಿದ್ದಾರೆ. 2021ರ ಟಿ20 ವಿಶ್ವಕಪ್ ತಂಡದಲ್ಲಿ ಆರ್ ಅಶ್ವಿನ್ ಸ್ಥಾನ ಪಡೆಯಲು ಯಾರು ಕಾರಣ ಎಂಬುದನ್ನು ಗಂಗೂಲಿ ಇದೇ ಮೊದಲ ಬಾರಿಗೆ ತಿಳಿಸಿದ್ದಾರೆ.