Viral Video: ಉದ್ದಿನ ದೋಸೆ, ನೀರ್ ದೋಸೆಯೆಲ್ಲ ಹಳೇದಾಯ್ತು; ಫ್ರೂಟ್ ದೋಸೆ ಮಾಡೋದು ಹೇಗಂತ ಗೊತ್ತಾ?
Fruit Dosa: ಎಂದಾದರೂ ಫ್ರೂಟ್ ದೋಸೆಯನ್ನು ತಿಂದಿದ್ದೀರಾ? ಈ ವಿಚಿತ್ರ ದೋಸೆಯ ವಿಡಿಯೋ ಓಡಿ ಕೆಲವರು ಬಾಯಿ ಚಪ್ಪರಿಸಿದರೆ ಇನ್ನು ಕೆಲವರು ಮೂಗು ಮುರಿದಿದ್ದಾರೆ.
ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಬಳಸಲಾಗುವ ತಿಂಡಿ ದೋಸೆ. ದೋಸೆಯ ಮೇಲೆ ನೂರಾರು ರೀತಿಯ ಪ್ರಯೋಗಗಳನ್ನು ಮಾಡಲಾಗುತ್ತದೆ. ಉದ್ದಿನ ದೋಸೆ, ನೀರು ದೋಸೆ, ಮೆಂತ್ಯ ದೋಸೆ, ಮಸಾಲ ದೋಸೆ, ಮೈಸೂರು ಮಸಾಲ ದೋಸೆ, ಕಾಯಿ ದೋಸೆ, ಸೌತೆ ಕಾಯಿ ದೋಸೆ, ಸೆಟ್ ದೋಸೆ, ಬೆಣ್ಣೆ ದೋಸೆ, ತುಪ್ಪದ ದೋಸೆ, ಖಾಲಿ ದೋಸೆ, ಪನ್ನೀರ್ ದೋಸೆ ಹೀಗೆ ಹಲವಾರು ರೀತಿಯ ದೋಸೆಗಳಿವೆ. ಆದರೆ, ಎಂದಾದರೂ ಫ್ರೂಟ್ ದೋಸೆಯನ್ನು ತಿಂದಿದ್ದೀರಾ? ಈ ವಿಚಿತ್ರ ದೋಸೆಯ ವಿಡಿಯೋ ಓಡಿ ಕೆಲವರು ಬಾಯಿ ಚಪ್ಪರಿಸಿದರೆ ಇನ್ನು ಕೆಲವರು ಮೂಗು ಮುರಿದಿದ್ದಾರೆ.
ಭಾರತದಲ್ಲಿ ಇಷ್ಟಪಡುವ ಖಾದ್ಯವೆಂದರೆ ದೋಸೆ. ದೋಸೆಯಲ್ಲಿ ಹಲವು ವಿಧಾನಗಳಿವೆ. ಮಧುರೈನಲ್ಲಿರುವ ರೆಸ್ಟೋರೆಂಟ್‌ನವರು ಕಪ್ಪು ಇದ್ದಿಲಿನ ದೋಸೆ ಮಾಡುವ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ದೆಹಲಿ ಮೂಲದ ವ್ಯಾಪಾರಿಯೊಬ್ಬರು ಹಣ್ಣುಗಳನ್ನು ತುಂಬಿದ ವಿಚಿತ್ರವಾದ ಮಸಾಲೆ ದೋಸೆಯನ್ನು ತಯಾರಿಸಿದ್ದಾರೆ. ವೈರಲ್ ಆಗಿರುವ ಆ ವಿಡಿಯೋವನ್ನು ಒಮ್ಮೆ ನೋಡಿ.
ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋವನ್ನು 2.5 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಈ ವಿಡಿಯೋಗೆ 1,30,000 ಲೈಕ್ಗಳು ಬಂದಿವೆ. “ನಾನು ಫೈರ್ ಫ್ರೂಟ್ಸ್ ದೋಸೆಯನ್ನು ಪ್ರಯತ್ನಿಸಿದೆ” ಎಂದು ವೈರಲ್ ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ. ದೆಹಲಿಯ ಗೀತಾ ಕಾಲೋನಿಯಲ್ಲಿರುವ ಅಯ್ಯರ್ ಜಿ. ದೋಸಾ ವಾಲೆ ವೀಡಿಯೊದ ಸ್ಥಳವಾಗಿದೆ.
View this post on Instagram
ಹಣ್ಣಿನ ದೋಸೆಯ ತಯಾರಿಕೆಯಲ್ಲಿ ಮೊದಲು ಅಡುಗೆಯವನು ಬಿಸಿಯಾದ ತವಾ ಮೇಲೆ ದೋಸೆ ಹಿಟ್ಟನ್ನು ಹರಡುತ್ತಾನೆ. ದೋಸೆಯನ್ನು ಬೇಯಿಸಲು ಪ್ರಾರಂಭಿಸಿದ ನಂತರ, ಅವನು ಅದರ ಮೇಲೆ ಸ್ವಲ್ಪ ಬೆಣ್ಣೆಯನ್ನು ಉಜ್ಜುತ್ತಾನೆ. ನಂತರ, ವಿವಿಧ ಕತ್ತರಿಸಿದ ಹಣ್ಣುಗಳೊಂದಿಗೆ ಫ್ರೂಟ್ ಮಸಾಲಾ ಮಾಡಿಕೊಳ್ಳುತ್ತಾನೆ. ಸೇಬು, ಬಾಳೆಹಣ್ಣು, ದ್ರಾಕ್ಷಿ ಮತ್ತು ಕತ್ತರಿಸಿದ ಒಣ ಹಣ್ಣುಗಳನ್ನು ಮಸಾಲೆಯಂತೆ ದೋಸೆಯ ಮೇಲೆ ಹಾಕಿ, ಪನೀರ್ ತುಂಡುಗಳು ಮತ್ತು ಬಗೆಬಗೆಯ ಸಾಸ್‌ಗಳನ್ನು ಕೂಡ ಹಾಕುತ್ತಾನೆ. ಸ್ವಲ್ಪ ರೋಸ್ಟ್ ಆದ ನಂತರ ಹಣ್ಣಿನ ದೋಸೆ ಸಿದ್ಧವಾಗುತ್ತದೆ.
ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿದ ಕೆಲವರು “ಅದ್ಭುತ” ಎಂದು ಕರೆದರೆ ಇನ್ನು ಕೆಲವರು ಈ ವಿಡಿಯೋ ನೋಡಿದರೆ ವಾಂತಿ ಬರುತ್ತದೆ ಎಂದಿದ್ದಾರೆ. ಫುಡ್ ಬ್ಲಾಗರ್ ಅರ್ಜುನ್ ಚೌಹಾನ್ ಈ ಹಣ್ಣಿನ ದೋಸೆ ಮಾಡುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Viral Video: ಕಿಟ್ಕ್ಯಾಟ್ ಚಾಕೋಲೇಟ್ನಿಂದ ಟೊಮ್ಯಾಟೋ ಕಟ್ ಮಾಡಿದ ಮಹರಾಯ; ಈ ವಿಡಿಯೋ ಮಿಸ್ ಮಾಡಬೇಡಿ!
Viral Video: ಕುಕ್ಕರ್ನಲ್ಲಿ ಕಾಫಿ ತಯಾರಿಸಿದ ವ್ಯಕ್ತಿ: ವೀಡಿಯೋ ವೈರಲ್