ಐಪಿಎಲ್ ಮೆಗಾ ಹರಾಜಿಗಾಗಿ ದಿನಾಂಕ ಫಿಕ್ಸ್ ಆಗಿದೆ. ಫೆಬ್ರವರಿ 12 ಹಾಗೂ 13 ರಂದು ಬೆಂಗಳೂರಿನಲ್ಲಿ ಮೆಗಾ ಹರಾಜು ನಡೆಯಲಿದೆ. ಈಗಾಗಲೇ 8 ತಂಡಗಳು 27 ಆಟಗಾರರನ್ನು ಉಳಿಸಿಕೊಂಡಿದ್ದು, ಹೀಗಾಗಿ ಯಾವ ತಂಡ ಯಾರನ್ನು ಖರೀದಿಸಲಿದೆ ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿದೆ.
ಇದಲ್ಲದೆ ಈ ಬಾರಿ ಐಪಿಎಲ್ನಲ್ಲಿ 2 ತಂಡಗಳ ಸೇರ್ಪಡೆಯಾಗಿದ್ದು, ಹೀಗಾಗಿ ಫಾರ್ಮಾಟ್ ಕೂಡ ಬದಲಾಗಿದೆ. ಅದರಂತೆ ಮುಂದಿನ ಸೀಸನ್ ಐಪಿಎಲ್ ಕೆಲ ಕಾರಣಗಳಿಂದ ಕುತೂಹಲಕ್ಕೆ ಕಿಚ್ಚು ಹಚ್ಚಿದೆ. ಹಾಗಿದ್ರೆ ಹಿಂದಿನ ಸೀಸನ್ಗಿಂತ ಮುಂದಿನ ಸೀಸನ್ ಐಪಿಎಲ್‌ನ ಬದಲಾವಣೆಗಳೇನು ನೋಡೋಣ...
10 ತಂಡಗಳು: ಮುಂದಿನ ಸೀಸನ್ ಐಪಿಎಲ್‌ನ ಅತ್ಯಾಕರ್ಷಣೆ ಎಂದರೆ ತಂಡಗಳ ಹೆಚ್ಚಳ. ಹೌದು, 2011 ರ ಬಳಿಕ ಮತ್ತೊಮ್ಮೆ ಐಪಿಎಲ್ನಲ್ಲಿ ಒಟ್ಟು 10 ತಂಡಗಳು ಕಾಣಿಸಿಕೊಳ್ಳಲಿದೆ. ಲಕ್ನೋ ಹಾಗೂ ಅಹಮದಾಬಾದ್ ತಂಡಗಳು ಹೊಸ ತಂಡಗಳಾಗಿ ಕಣಕ್ಕಿಳಿಯಲಿದೆ.
ಐಪಿಎಲ್‌ನ ಹೊಸ ಸ್ವರೂಪ: ಐಪಿಎಲ್ 2021 ಅನ್ನು ಬಿಸಿಸಿಐ ಹೊಸ ಫಾರ್ಮಾಟ್ನಲ್ಲಿ ಆಯೋಜಿಸಲಿದೆ. 10 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಿ 74 ಪಂದ್ಯಗಳನ್ನು ಆಡಿಸಲಾಗುತ್ತದೆ. ಅದರಂತೆ ಒಟ್ಟು 70 ಲೀಗ್ ಹಂತದ ಪಂದ್ಯಗಳು ಮತ್ತು 4 ಪ್ಲೇಆಫ್ ಪಂದ್ಯಗಳಿರಲಿದೆ.
ತಂಡವೊಂದಕ್ಕೆ 14 ಪಂದ್ಯ: ಮುಂದಿನ ಸೀಸನ್ ಐಪಿಎಲ್ ರೌಂಡ್ ರಾಬಿನ್ ಫಾರ್ಮಾಟ್ನಲ್ಲಿ ನಡೆಯಲಿದೆ. ಇಲ್ಲಿ 10 ತಂಡಗಳನ್ನು 5 ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಅಂದರೆ ಗ್ರೂಪ್ A-ನಲ್ಲಿರುವ 5 ತಂಡಗಳು ಪರಸ್ಪರ ಎರಡೆರಡು ಪಂದ್ಯಗಳನ್ನು ಆಡಲಿದೆ. ಗ್ರೂಪ್ A ಗ್ರೂಪ್ನಲ್ಲಿರುವ 4 ತಂಡಗಳ ವಿರುದ್ದ ತಲಾ 2 ಪಂದ್ಯಗಳನ್ನು ಆಡಲಿದೆ. ಇಲ್ಲಿ ಒಟ್ಟು ಪಂದ್ಯಗಳ ಸಂಖ್ಯೆ 8 ಆಗುತ್ತೆ. ಬಳಿಕ ಗ್ರೂಪ್ B ನಲ್ಲಿರುವ 5 ತಂಡಗಳ ತಂಡಗಳ ವಿರುದ್ದ ತಲಾ ಒಂದು ಪಂದ್ಯಗಳನ್ನು ಆಡಲಿದೆ. ಇದರೊಂದಿಗೆ ಪ್ರತಿ ತಂಡಗಳ ಪಂದ್ಯಗಳ ಸಂಖ್ಯೆ 13 ಆಗಲಿದೆ. ಇನ್ನು ಪ್ರತಿ ತಂಡಗಳು ಲಕ್ಕಿ ಡಿಪ್ ಆಯ್ಕೆಯ ಮೂಲಕ ಹೆಚ್ಚುವರಿ ಒಂದು ಪಂದ್ಯವಾಡಲಿದೆ. ಈ ಮೂಲಕ 14 ಪಂದ್ಯಗಳನ್ನು ಪೂರ್ಣಗೊಳಿಸಲಾಗುತ್ತದೆ.
ಕೊನೆಯ ಮೆಗಾ ಹರಾಜು: ಫೆಬ್ರವರಿ 12 ಮತ್ತು 13 ರಂದು ನಡೆಯಲಿರುವ ಮೆಗಾ-ಹರಾಜು ಐಪಿಎಲ್‌ನ ಕೊನೆಯ ಮೆಗಾ ಆಕ್ಷನ್ ಆಗಿರಲಿದೆ ಎಂದು ಹೇಳಲಾಗಿದೆ. ಎಲ್ಲಾ ಫ್ರಾಂಚೈಸಿಗಳು ಮೆಗಾ ಹರಾಜಿನ ಬಗ್ಗೆ ನಿರಾಸಕ್ತಿ ಹೊಂದಿದ್ದು, ಹೀಗಾಗಿ ಮುಂದಿನ ದಿನಗಳಲ್ಲಿ ಎಲ್ಲಾ ತಂಡಗಳು ತಮಗೆ ಬೇಕಾದ ಆಟಗಾರರನ್ನು ಉಳಿಸಿ, ಬಿಡುಗಡೆ ಮಾಡಿದ ಆಟಗಾರರ ಸ್ಥಾನಕ್ಕೆ ಮಾತ್ರ ಹರಾಜು ನಡೆಸಲು ಆಸಕ್ತಿ ಹೊಂದಿದೆ. ಅಂದರೆ ಈ ಹಿಂದೆ ನಡೆದಂತೆ ಮಿನಿ ಹರಾಜು ಮಾದರಿಯಲ್ಲಿ ರಿಲೀಸ್ ಮಾಡಿದ ಆಟಗಾರರ ಸ್ಥಾನಗಳಲ್ಲಿ ಬೇರೆ ಆಟಗಾರರಿಗೆ ಬಿಡ್ಡಿಂಗ್ ನಡೆಯಲಿದೆ. ಅದರಂತೆ 3 ವರ್ಷಕ್ಕೊಮ್ಮೆ ನಡೆಸುವ ಮೆಗಾ ಹರಾಜಿಗೆ ಬಿಸಿಸಿಐ ಬ್ರೇಕ್ ಹಾಕಲಿದೆ. ಹೀಗಾಗಿ ಈ ಬಾರಿ ನಡೆಯಲಿರುವುದು ಐಪಿಎಲ್‌ನ ಕೊನೆಯ ಮೆಗಾ ಹರಾಜು ಎನ್ನಲಾಗಿದೆ.
Published On - 4:21 pm, Mon, 27 December 21