ಸಿಬಿಐನಿಂದ ಅರವಿಂದ್ ಕೇಜ್ರಿವಾಲ್ ಗ್ರಿಲ್ -ಭಾನುವಾರಕ್ಕೆ ಮುಹೂರ್ತ ಫಿಕ್ಸ್; ಸೋಮವಾರಕ್ಕೆ ದೆಹಲಿ ವಿಧಾನಸಭೆ ವಿಶೇಷ ಅಧಿವೇಶನ
Chief Minister Arvind Kejriwal: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮದ್ಯ ನೀತಿ ಪ್ರಕರಣದಲ್ಲಿ ಸಿಬಿಐ ಮುಂದೆ ಹಾಜರಾಗಬೇಕಾದ ಒಂದು ದಿನದ ನಂತರ ದೆಹಲಿ ಸರ್ಕಾರ ಸೋಮವಾರ ವಿಶೇಷ ವಿಧಾನಸಭೆ ಅಧಿವೇಶನ ಕರೆದಿರುವುದು ಕುತೂಹಲಕಾರಿಯಾಗಿದೆ.
ಮದ್ಯ ನೀತಿ ವಿವಾದದ ನಡುವೆ ದೆಹಲಿ ಸರ್ಕಾರ ಸೋಮವಾರ ಒಂದು ದಿನದ ವಿಶೇಷ ವಿಧಾನಸಭೆ ಅಧಿವೇಶನವನ್ನು ಕರೆದಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮದ್ಯ ನೀತಿ ಪ್ರಕರಣದಲ್ಲಿ ಸಿಬಿಐ ಮುಂದೆ ಹಾಜರಾಗಬೇಕಾದ ಒಂದು ದಿನದ ನಂತರ ದೆಹಲಿ ಸರ್ಕಾರ ಸೋಮವಾರ ವಿಶೇಷ ವಿಧಾನಸಭೆ ಅಧಿವೇಶನವನ್ನು ಕರೆದಿದೆ.
ವಿದ್ಯುತ್ ಸಬ್ಸಿಡಿ ವಿತರಣೆ ಸಂಬಂಧ ಲೆಫ್ಟಿನೆಂಟ್ ಗೌರ್ನರ್ (Lieutenant Governor L-G) ಜೊತೆಗಿನ ಕಿತ್ತಾಟ ಮತ್ತು ಮದ್ಯದ ಅಬಕಾರಿ ನೀತಿ ಪ್ರಕರಣದಲ್ಲಿ (Liquor Policy Case) ಭಾನುವಾರ ವಿಚಾರಣೆಗೆ ಹಾಜರಾಗುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ (Chief Minister Arvind Kejriwal) ಸಿಬಿಐ (CBI) ಸಮನ್ಸ್ ನೀಡಿರುವ ಸಂದರ್ಭದಲ್ಲಿ, ರಾಜಕೀಯ ಕೋಲಾಹಲದ ನಡುವೆ ದೆಹಲಿ ಸರ್ಕಾರ (Delhi government) ಸೋಮವಾರ ಬೆಳಿಗ್ಗೆ 11 ಗಂಟೆಗೆ ಒಂದು ದಿನದ ವಿಶೇಷ ವಿಧಾನಸಭೆ ಅಧಿವೇಶನವನ್ನು (Assembly session) ಕರೆದಿದೆ.
ವಿಧಾನಸಭೆಯ ಅಧಿವೇಶನವನ್ನು 2023 ರ ಏಪ್ರಿಲ್ 17 ಕ್ಕೆ ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ. ವ್ಯವಹಾರದ ಅಗತ್ಯತೆಗಳಿಗೆ ಒಳಪಟ್ಟು, ಸದನದ ಅಧಿವೇಶನವನ್ನು ವಿಸ್ತರಿಸಬಹುದು ಎಂದು ಅಸೆಂಬ್ಲಿ ಸಚಿವಾಲಯ ಸೂಚನೆ ಹೊರಡಿಸಿದೆ.
ಇದನ್ನೂ ಓದಿ: ದಿಲ್ಲಿಯಲ್ಲಿ ಉಚಿತ ವಿದ್ಯುತ್ ನಿಂತುಹೋಯ್ತಂತೆ! ಕಾರಣವೇನು?
ವಿಧಾನಸಭೆಯ ಅಧಿವೇಶನವು ಬೆಳಿಗ್ಗೆ 11:00 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ದಿನಕ್ಕೆ ನಿಗದಿಪಡಿಸಿದ ವ್ಯವಹಾರವು ಮುಕ್ತಾಯಗೊಳ್ಳುವವರೆಗೆ ಮುಂದುವರಿಯುತ್ತದೆ. ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ (ಎಲ್-ಜಿ) ಮಧ್ಯೆ ವಿದ್ಯುತ್ ಸಬ್ಸಿಡಿ ಕುರಿತಾದ ಜಗಳ ಹರಿದಾಡುತ್ತಿರುವ ಸಮಯದಲ್ಲಿ ಅಧಿವೇಶನವು ನಡೆಯಲಿದೆ. ಸಬ್ಸಿಡಿ ವಿಸ್ತರಣೆ ಅನುಮೋದನೆ ಕೋರಿ ಸಲ್ಲಿಸಿರುವ ಫೈಲ್‌ಗಳಿಗೆ L-G ಅಂಕಿತ ಹಾಕಿಲ್ಲ ಎಂದು ಆರೋಪಿಸಲಾಗಿದೆ. ಆದರೆ, ಕಡತಕ್ಕೆ ಈಗಾಗಲೇ ಅನುಮೋದನೆ ನೀಡಲಾಗಿದ್ದು, ವಿದ್ಯುತ್ ಸಚಿವರಿಂದ (ಅತಿಶಿ) ವಿಳಂಬವಾಗಿದೆ ಎಂದು ಎಲ್-ಜಿ ಕಚೇರಿ ಸ್ಪಷ್ಟನೆ ನೀಡಿದೆ.
ವಿದ್ಯುತ್ ಸಬ್ಸಿಡಿ ಕುರಿತ ಜಗಳದ ಹೊರತಾಗಿ, ಮದ್ಯ ನೀತಿ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಸಿಎಂ ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಕರೆದಿದೆ. ಭಾನುವಾರ ವಿಚಾರಣೆಗೆ ಹಾಅಜರಾಗುವಂತೆ ಮುಖ್ಯಮಂತ್ರಿಗೆ ತನಿಖಾ ಸಂಸ್ಥೆ ಸಮನ್ಸ್ ನೀಡಿದೆ.
ಮದ್ಯದ ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ, ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರನ್ನು ಈ ಹಿಂದೆಯೇ ಬಂಧಿಸಲಾಗಿದೆ. ಭಾನುವಾರದ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್ಗೆ ಸಿಬಿಐ ಸೂಚಿಸಿದೆ. ಸದ್ಯ ಮನೀಶ್ ಸಿಸೋಡಿಯಾ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಏಪ್ರಿಲ್ 17ರ ವರೆಗೆ ಅವರು ನ್ಯಾಯಾಂಗ ಬಂಧನದಲ್ಲಿ ಇರಲಿದ್ದು, ನಂತರ ನ್ಯಾಯಾಲಯ ಏನು ಆದೇಶ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.
ಕೇಜ್ರಿವಾಲ್ ಸರ್ಕಾರ ಭಾರೀ ವಂಚನೆ ಎಸಗಿದೆ ಎಂದು ಸಿಬಿಐ ಆರೋಪಿಸಿದೆ. ಸಂಸ್ಥೆಯೊಂದರ ಪರವಾಗಿ ಅಬಕಾರಿ ನೀತಿ ರೂಪಿಸಲು ಲಂಚ ಪಡೆಯಲಾಗಿತ್ತು ಎಂದೂ ಸಿಬಿಐ ಆಪಾದಿಸಿದೆ. ಆದರೆ, ಎಎಪಿ ಈ ಆರೋಪಗಳನ್ನು ತಳ್ಳಿಹಾಕಿದ್ದು, ರಾಜಕೀಯ ಸೇಡಿನಿಂದ ಕೂಡಿದ ಕ್ರಮ ಎಂದು ದೂರಿದೆ. ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಕೇಜ್ರಿವಾಲ್ ಅವರೇ ಹಗರಣದ ಮಾಸ್ಟರ್ ಮೈಂಡ್ ಎಂದು ಬಿಜೆಪಿ ಹಲವು ಬಾರಿ ಸಾರಿದೆ. ಆದರೆ, ಈ ಆರೋಪಗಳನ್ನು ಕೇಜ್ರಿವಾಲ್ ಅಲ್ಲಗಳೆದಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಸಿಬಿಐಯು ಕೇಜ್ರಿವಾಲ್ಗೆ ಇದೇ ಮೊದಲ ಬಾರಿಗೆ ಸಮನ್ಸ್ ನೀಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:16 pm, Sat, 15 April 23