ದಿಲ್ಲಿಯಲ್ಲಿ ಉಚಿತ ವಿದ್ಯುತ್ ನಿಂತುಹೋಯ್ತಂತೆ! ಕಾರಣವೇನು?
"ಇಂದಿನಿಂದ, ದೆಹಲಿ ನಿವಾಸಿಗಳಿಗೆ ಸಬ್ಸಿಡಿ ವಿದ್ಯುತ್ ನೀಡುವುದನ್ನು ನಿಲ್ಲಿಸಲಾಗಿದೆ. ಇದರ ಪರಿಣಾಮವಾಗಿ, ರಿಯಾಯಿತಿಯ ಬಿಲ್‌ಗಳನ್ನು ಇನ್ನು ಮುಂದೆ ನೀಡಲಾಗುವುದಿಲ್ಲ." ಎಂದು ದೆಹಲಿ ವಿದ್ಯುತ್ ಸಚಿವ ಅತಿಶಿ ಹೇಳಿದ್ದಾರೆ.
ಹೊಸದಿಲ್ಲಿ: 200 ಯೂನಿಟ್‌ವರೆಗೆ ಜನರಿಗೆ ಉಚಿತ ವಿದ್ಯುತ್ ಒದಗಿಸುವ ದಿಲ್ಲಿಯ ಸಬ್ಸಿಡಿ ವಿದ್ಯುತ್ ಯೋಜನೆಯನ್ನು ನಿಲ್ಲಿಸಲಾಗಿದೆ ಎಂದು ದೆಹಲಿ ವಿದ್ಯುತ್ ಸಚಿವ ಅತಿಶಿ ಹೇಳಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರದ ಪ್ರತಿನಿಧಿಯಂತೆ ವರ್ತಿಸುತ್ತಿರುವ ಲೆಫ್ಟಿನೆಂಟ್ ಗವರ್ನರ್ ಅವರನ್ನು ದೂಷಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿದ್ಯುತ್ ಸಚಿವ ಅತಿಶಿ ಅವರು, ಲೆಫ್ಟಿನೆಂಟ್ ಗೌರ್ನರ್ ವಿಕೆ ಸಕ್ಸೇನಾ ಅವರು ಯೋಜನೆ ವಿಸ್ತರಣೆ ಆದೇಶ ಕೋರಿದ ಕಡತಕ್ಕೆ ಅನುಮೋದನೆ ನೀಡದ ಕಾರಣ ಫಲಾನುಭವಿಗಳಿಗೆ ಶುಕ್ರವಾರದಿಂದ ಸಬ್ಸಿಡಿ ವಿದ್ಯುತ್ ಸಿಗುವುದಿಲ್ಲ ಎಂದು ಹೇಳಿದರು.
“ಇಂದಿನಿಂದ, ದೆಹಲಿ ನಿವಾಸಿಗಳಿಗೆ ಸಬ್ಸಿಡಿ ವಿದ್ಯುತ್ ನೀಡುವುದನ್ನು ನಿಲ್ಲಿಸಲಾಗಿದೆ. ಇದರ ಪರಿಣಾಮವಾಗಿ, ನಾಳೆಯಿಂದ, ರಿಯಾಯಿತಿಯ ಬಿಲ್‌ಗಳನ್ನು ಇನ್ನು ಮುಂದೆ ನೀಡಲಾಗುವುದಿಲ್ಲ.” ಎಂದು ಅವರು ಹೇಳಿದ್ದಾರೆ.
ಎಎಪಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವತು ತಮ್ಮ ಮಹತ್ವಾಕಾಂಕ್ಷಿ ಯೋಜನೆಯನ್ನು ಮುಂದುವರಿಸಲು ಉದ್ದೇಶಿಸಿದ್ದರೂ, “ಸಂಬಂಧಿತ ಫೈಲ್ ಇನ್ನೂ ದೆಹಲಿ ಲೆಫ್ಟಿನೆಂಟ್ ಗೌರ್ನರ್ ಬಳಿಯೇ ಇದೆ” ಎಂದು ಎಎಪಿ ನಾಯಕ ಹೇಳಿದ್ದಾರೆ. “ಅದನ್ನು ಹಿಂತಿರುಗಿಸುವವರೆಗೆ, ಎಎಪಿ ಸರ್ಕಾರವು ಸಬ್ಸಿಡಿ ಬಿಲ್‌ಗಳನ್ನು ನೀಡಲು ಸಾಧ್ಯವಿಲ್ಲ.” ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
2019 ರಲ್ಲಿ ಕೇಜ್ರಿವಾಲ್ ಸರ್ಕಾರವು ಪರಿಚಯಿಸಿದ ಈ ಯೋಜನೆಯು ತಿಂಗಳಿಗೆ 201-400 ಯೂನಿಟ್ ವಿದ್ಯುತ್ ಅನ್ನು ಬಳಸುವ ಗ್ರಾಹಕರಿಗೆ 50 ಪ್ರತಿಶತ ಸಬ್ಸಿಡಿಯನ್ನು ನೀಡುತ್ತಾ ಬಂದಿದೆ.
ಏಪ್ರಿಲ್ 4 ರಂದು ಮುಂದಿನ ವರ್ಷಕ್ಕೆ ಸಬ್ಸಿಡಿ ಯೋಜನೆಯನ್ನು ವಿಸ್ತರಿಸಲು ದೆಹಲಿ ಕ್ಯಾಬಿನೆಟ್ ಅನುಮೋದನೆ ನೀಡಿತು. ಅಂದು, ವಿದ್ಯುತ್ ಸಚಿವ ಅತಿಶಿ ಅವರು ಉಚಿತ ವಿದ್ಯುತ್ ಯೋಜನೆಯನ್ನು ನಿಲ್ಲಿಸಲು ಇಲಾಖೆಯ ಅಧಿಕಾರಿಗಳು ಒತ್ತಡದಲ್ಲಿದ್ದಾರೆ ಎಂದು ಹೇಳಿದರು. ಕಡತಕ್ಕೆ ಇನ್ನೂ LG ಕಡೆಯಿಂದ ಅನುಮೋದನೆ ನೀಡಬೇಕಾಗಿದೆ ಎಂದು ಅವರು ಹೇಳಿದ್ದರು.
ಅತಿಶಿ ಅವರ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, LG ಸಕ್ಸೇನಾ ಅವರ ಕಚೇರಿಯು ಅವರು (ದೆಹಲಿ ಸರ್ಕಾರ) ಬಡವರಿಗೆ ವಿದ್ಯುತ್ ಸಬ್ಸಿಡಿಗಳ ವಿರುದ್ಧವಾಗಿಲ್ಲ, ಆದರೆ ಯಾವುದೇ ಕಳ್ಳತನ ಸಂಭವಿಸದಂತೆ ಲೆಕ್ಕಪರಿಶೋಧನೆಗೆ ಕರೆ ನೀಡಿದ್ದಾರಂತೆ. ಕಳೆದ ಆರು ವರ್ಷಗಳಿಂದ ಖಾಸಗಿ ಡಿಸ್ಕಾಂಗಳಿಗೆ (ವಿತರಣಾ ಕಂಪನಿಗಳಿಗೆ) ನೀಡಲಾದ 13,549 ಕೋಟಿ ರೂಪಾಯಿಯನ್ನು ಎಎಪಿ ಸರ್ಕಾರ ಲೆಕ್ಕಪರಿಶೋಧನೆಗೆ ಒಳಪಡಿಸಿಲ್ಲ ಎಂದು ಅವರ ಕಚೇರಿ ಟೀಕಿಸಿದೆ.
“ವಿದ್ಯುತ್ ಕಾಯಿದೆ, 2003 ರ ಸೆಕ್ಷನ್ 108 ಅನ್ನು DERC ಗೆ ಇಲ್ಲಿಯವರೆಗೆ ಡಿಸ್ಕಾಂಗಳನ್ನು ಆಡಿಟ್ ಮಾಡುವುದನ್ನು ಕಡ್ಡಾಯಗೊಳಿಸಿಲ್ಲವೆಂದು ಲೆಫ್ಟಿನೆಂಟ್ ಗೌರ್ನರ್ ಕಚೇರಿ ಕೇಜ್ರಿವಾಲ್ ಸರ್ಕಾರವನ್ನು ಪ್ರಶ್ನಿಸುತ್ತಿದೆ. CAG ಎಂಪ್ಯಾನೆಲ್ಡ್ ಆಡಿಟರ್‌ಗಳ ಆಡಿಟ್ ಅನ್ನು CAG ಆಡಿಟ್‌ಗೆ ಪರ್ಯಾಯವಾಗಿ ಪರಿಗಣಿಸಲಾಗುವುದಿಲ್ಲ ಮತ್ತು ಪರಿಗಣಿಸಬಾರದು ಎಂದೂ LG ಒತ್ತಿಹೇಳುತ್ತದೆ” ಎಂದು ಲೆಫ್ಟಿನೆಂಟ್ ಗೌರ್ನರ್ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಡಿಸ್ಕಾಂಗಳ ಸಿಎಜಿ ಆಡಿಟ್ ರದ್ದುಗೊಳಿಸಿದ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರದ ಮೇಲ್ಮನವಿ ಏಳು ವರ್ಷಗಳಿಗೂ ಹೆಚ್ಚು ಕಾಲದಿಂದ ಬಾಕಿ ಉಳಿದಿರುವುದಕ್ಕೆ ಎಲ್‌ಜಿ ಸಕ್ಸೇನಾ ಇದೇ ವೇಳೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ ಮತ್ತು ತುರ್ತು ವಿಚಾರಣೆಗೆ ಸಲ್ಲಿಸುವ ಮೂಲಕ ಮೇಲ್ಮನವಿಯನ್ನು ತ್ವರಿತಗೊಳಿಸುವಂತೆ ಸರ್ಕಾರಕ್ಕೆ ಸೂಚಿಸಿದರು.