Duologue With Barun Das: ನಾರಾಯಣ ಮೂರ್ತಿ ದಂಪತಿ ಜೊತೆ ಉದ್ಯಮ, ಜೀವನ ಪಯಣ ಕುರಿತು ಮುಕ್ತ ಮಾತು

ದೇಶದ ಐಟಿ ಕ್ಷೇತ್ರದ ದಿಗ್ಗಜ ಸಂಸ್ಥೆ ಇನ್ಫೋಸಿಸ್​​ನ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಹಾಗೂ ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಸುಧಾ ಮೂರ್ತಿ ಅವರು ‘ನ್ಯೂಸ್ 9’ ನ ‘ಡ್ಯುಯೊಲಾಗ್ ವಿದ್ ಬರುಣ್ ದಾಸ್’ ಎಂಬ ಒಂದು ಗಂಟೆಯ ವಿಶೇಷ ‘ಐಡಿಯಾ ಫೆಸ್ಟ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇಶದ ನಾಯಕತ್ವ, ಭಾರತೀಯ ಉದ್ಯಮ ಕ್ಷೇತ್ರಕ್ಕೆ ಸಂದೇಶಗಳು, ಯಶಸ್ವಿ ವೈವಾಹಿಕ ಜೀವನದ ರಹಸ್ಯಗಳು ಮತ್ತು ಮಕ್ಕಳ ಪಾಲನೆಯಂತಹ ವಿಷಯಗಳನ್ನು ಮುಕ್ತವಾಗಿ ಚರ್ಚಿಸಿದರು.

Duologue With Barun Das: ನಾರಾಯಣ ಮೂರ್ತಿ ದಂಪತಿ ಜೊತೆ ಉದ್ಯಮ, ಜೀವನ ಪಯಣ ಕುರಿತು ಮುಕ್ತ ಮಾತು
ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ Image Credit source: News 9
Follow us
| Updated By: ಗಣಪತಿ ಶರ್ಮ

Updated on:Apr 14, 2023 | 9:33 PM

ದೇಶದ ಐಟಿ ಕ್ಷೇತ್ರದ ದಿಗ್ಗಜ ಸಂಸ್ಥೆ ಇನ್ಫೋಸಿಸ್​​ನ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ (NR Narayana Murthy) ಹಾಗೂ ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಸುಧಾ ಮೂರ್ತಿ (Sudha Murty) ಅವರು ‘ನ್ಯೂಸ್ 9’ ನ ‘ಡ್ಯುಯೊಲಾಗ್ ವಿದ್ ಬರುಣ್ ದಾಸ್ (Duologue With Barun Das)’ ಎಂಬ ಒಂದು ಗಂಟೆಯ ವಿಶೇಷ ‘ಐಡಿಯಾ ಫೆಸ್ಟ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇಶದ ನಾಯಕತ್ವ, ಭಾರತೀಯ ಉದ್ಯಮ ಕ್ಷೇತ್ರಕ್ಕೆ ಸಂದೇಶಗಳು, ಯಶಸ್ವಿ ವೈವಾಹಿಕ ಜೀವನದ ರಹಸ್ಯಗಳು ಮತ್ತು ಮಕ್ಕಳ ಪಾಲನೆಯಂತಹ ವಿಷಯಗಳನ್ನು ಮುಕ್ತವಾಗಿ ಚರ್ಚಿಸಿದರು. ನಾರಾಯಣ ಮೂರ್ತಿ ಭಾರತದ ಐಟಿ ಕ್ಷೇತ್ರದ ದಿಗ್ಗಜ. ಅವರ ಪತ್ನಿ ಸುಧಾ ಮೂರ್ತಿ ಅವರು ಪ್ರಸಿದ್ಧ ಲೇಖಕಿ, ಸಮಾಜ ಸೇವಕಿ ಮತ್ತು ಚಿಂತಕಿಯೂ ಆಗಿದ್ದಾರೆ. ‘ನ್ಯೂಸ್ 9’ ಕಾರ್ಯಕ್ರಮದಲ್ಲಿ ಈ ದಂಪತಿ ತಮ್ಮ ಸಂಸ್ಥೆಯ ಯಶಸ್ಸಿನ ಹಿಂದಿನ ಕತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ತಮ್ಮ ವಿಶಿಷ್ಟ ಶೈಲಿಯಿಂದಲೇ ಗುರುತಿಸಿಕೊಂಡಿರುವ ಈ ದಂಪತಿ ತಾವು ಜೀವನದಲ್ಲಿ ಎದುರಿಸಿರುವ ಅನೇಕ ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು. ಎಲ್ಲ ಆಯಾಮಗಳಿಂದಲೂ ತಮ್ಮ ಪತಿ ಅರ್ಹ ವ್ಯಕ್ತಿಯಾಗಿದ್ದರೂ ಹೂಡಿಕೆ ಮಾರ್ಗವನ್ನು ಏಕೆ ಅನುಸರಿಸಿದ್ದರು, ವ್ಯವಹಾರದಲ್ಲಿ ಕಂಡುಕೊಂಡ ಕನಸಿನ ಸಾಕಾರಕ್ಕೆ ಹೇಗೆ ಮುಂದಡಿಯಿಟ್ಟಿದ್ದರು ಎಂಬ ಬಗ್ಗೆ ಸುಧಾಮೂರ್ತಿ ಇದೇ ಮೊದಲ ಬಾರಿಗೆ ಮುಕ್ತವಾಗಿ ಮಾಹಿತಿ ನೀಡಿದರು. ತನ್ನ ಮಕ್ಕಳಿಗೆ ಅತ್ಯುತ್ತಮ ತಾಯಿಯಾಗುವ ಕರ್ತವ್ಯವನ್ನು ನಿಭಾಯಿಸಿದ ಬಗ್ಗೆಯೂ ಅವರು ಭಾವುಕರಾಗಿ ಅನುಭವ ಹಂಚಿಕೊಂಡರು.

ಸುಧಾ ಮೂರ್ತಿಯವರ ಶಿಕ್ಷಣ ಅರ್ಹತೆ /ಜ್ಞಾನ ಇವುಗಳನ್ನೆಲ್ಲ ಅಳೆದು ತೂಗಿ, ಇನ್ಫೋಸಿಸ್  ಸಂಸ್ಥಾಪಕರಾಗಿ ಕುಲಕರ್ಣಿಯವರನ್ನು  (ಮದುವೆಯ ಮೊದಲು ಸುಧಾ ಅವರನ್ನು ಸುಧಾ ಕುಲಕರ್ಣಿ ಎಂದು ಕರೆಯುತ್ತಿದ್ದರು) ಏಕೆ ನೇಮಿಸಲಿಲ್ಲ? ಎಂದು ಬರುಣ್ ದಾಸ್ ನಾರಾಯಣ ಮೂರ್ತಿಯವರನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ನಾರಾಯಣಮೂರ್ತಿ, ‘ಈ ಕುರಿತು ನಾವಿಬ್ಬರೂ ಆರಂಭದಲ್ಲಿಯೇ ಚರ್ಚಿಸಿದ್ದೇವು ಎಂದು ನಾನು ಭಾವಿಸುತ್ತೇನೆ. ಸಂಸ್ಥಾಪಕ ಮತ್ತು ಸಹ-ಸಂಸ್ಥಾಪಕರ ಪತ್ನಿಯರ ವಿಚಾರಕ್ಕೆ ಬಂದರೆ, ಆಕೆ ಅತ್ಯಂತ ಸಮರ್ಥಳು. ಆದರೆ, ನಾವಿಬ್ಬರೂ ಇದರಲ್ಲಿ ಭಾಗಿಯಾಗಬೇಕೋ ಅಥವಾ ಬೇಡವೇ ಎಂಬ ಬಗ್ಗೆ ಚರ್ಚಿಸಿದ್ದೆವು. ಆ ಸಮಯದಲ್ಲಿ ಸಂಸ್ಥಾಪಕರ ಗುಂಪಿನಲ್ಲಿ ಅನಗತ್ಯ ಸಮಸ್ಯೆಗಳಿಗೆ ಕಡಿವಾಣ ಹಾಕುವ ಬಗ್ಗೆಯೇ ನಾನು ಹೆಚ್ಚು ಗಮನ ಕೇಂದ್ರೀಕರಿಸಿದ್ದೆ’ ಎಂದರು.

ಅವರ ಈ ಮಾತಿಗೆ ಸಮ್ಮತಿಸಿದ ಸುಧಾ ಮೂರ್ತಿ, ಯುವಕರಾಗಿದ್ದಾಗ ನಾರಾಯಣ ಮೂರ್ತಿ ಅವರು ಸಾಫ್ಟ್‌ವೇರ್ ಕಂಪನಿಯನ್ನು ನಿರ್ಮಿಸುವ ಕನಸು ಕಂಡಿದ್ದನ್ನು ನೆನಪಿಸಿಕೊಂಡರು. ಮುಂದುವರಿದು, ‘ನಮ್ಮ ದೇಶದಲ್ಲಿ ಉದ್ಯಮಶೀಲತೆಯ ಪಾತ್ರಕ್ಕೆ ಸಂಬಂಧಿಸಿದ ಮಹತ್ವವನ್ನು ಅವರು 1981 ರಲ್ಲಿ ನನಗೆ ವಿವರಿಸಿದ್ದರು’ ಎಂದು ಹೇಳಿದರು.

ನಾರಾಯಣಮೂರ್ತಿ, ಸುಧಾಮೂರ್ತಿ ನಡುವೆ ಉತ್ತಮ ಬಾಂಧವ್ಯವಿದ್ದು ಅತ್ಯುತ್ತಮ ಜೋಡಿ ಎಂದೇ ಗುರುತಿಸಿಕೊಂಡವರು ಇವರು. ಇಬ್ಬರೂ ಭಿನ್ನ ದಿಕ್ಕುಗಳಲ್ಲಿ ಕೆಲಸ ಮಾಡಿದರು. ಒಬ್ಬರು ವ್ಯವಹಾರವನ್ನು ಕೈಗೆತ್ತಿಕೊಂಡರೆ ಮತ್ತೊಬ್ಬರು ಸಮಾಜದ ಕುರಿತಾದ ಕಾಳಜಿಯೊಂದಿಗೆ ಜವಾಬ್ದಾರಿಯನ್ನು ವಹಿಸಿಕೊಂಡರು. ಅಸಂಖ್ಯಾತ ಅವಕಾಶಗಳು ಮತ್ತು ಸವಾಲುಗಳನ್ನು ದಿಟ್ಟವಾಗಿ ಎದುರಿಸುತ್ತಿರುವ ಇಬ್ಬರೂ ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರೂ ಹೌದು.

ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರೊಂದಿಗಿನ ಸಂಭಾಷಣೆಯ ವೇಳೆ, ನಾನು ಅವರಿಂದ ತುಂಬಾ ಪ್ರಭಾವಿತನಾಗಿದ್ದೆ. ಅವರಿಂದ ಸ್ಫೂರ್ತಿಯನ್ನೂ ಪಡೆದಿದ್ದೇನೆ. ಅವರ ದೃಢಸಂಕಲ್ಪ ಮತ್ತು ದೃಢವಾದ ನಾಯಕತ್ವದಿಂದ ಇನ್ಫೋಸಿಸ್‌ನಂತಹ ಕಂಪನಿಯ ಬೆಳವಣಿಗೆಯ ಪಯಣ ಶ್ಲಾಘನೀಯವಾಗಿದೆ. ಆದಾಗ್ಯೂ, 40 ವರ್ಷಗಳ ಹಿಂದೆ, ಸುಧಾ ಕುಲಕರ್ಣಿ ಅವರು ನಾರಾಯಣಮೂರ್ತಿಗೆ ಬೆಂಬಲ ನೀಡುವುದನ್ನಷ್ಟೇ ಮಾಡುವ ಬದಲು ಆವಾಗಲೇ ತಾವೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರೆ ಭಾರತದ ಕಂಪನಿಗಳಲ್ಲಿ ಅಥವಾ ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ಇನ್ನಷ್ಟು ಉತ್ತಮವಾಗಿರುತ್ತಿತ್ತು. ಈ ವಿಚಾರ ನನಗೆ ಇನ್ನೂ ಮಹತ್ವದ್ದೆನಿಸುತ್ತದೆ ಎಂದು ‘ಟಿವಿ9’ ನೆಟ್‌ವರ್ಕ್‌ನ ಎಂಡಿ, ಸಿಇಒ ಮತ್ತು ಕಾರ್ಯಕ್ರಮ ನಿರೂಪಕ ಬರುಣ್ ದಾಸ್ ಹೇಳಿದ್ದಾರೆ.

ಈ ದಂಪತಿಯ ನಾಯಕತ್ವದಿಂದ ಭಾರತವು ಬಹಳಷ್ಟು ವಿಚಾರಗಳನ್ನು ಕಲಿಯಬಹುದು ಎಂದು ನಾನು ಭಾವಿಸುತ್ತೇನೆ. ಅವರ ದೂರದೃಷ್ಟಿಯಿಂದಾಗಿಯೇ ಇನ್ಫೋಸಿಸ್ ತನ್ನ ವಿಭಿನ್ನ ವ್ಯವಹಾರಗಳಲ್ಲಿ ಯಶಸ್ಸಿನ ಪತಾಕೆಯನ್ನು ಹಾರಿಸಿತು. ಹೀಗೆ ಮಾಡುವುದರಿಂದ ಭವಿಷ್ಯದಲ್ಲಿ ಭಾರತದ ಅಭಿವೃದ್ಧಿಗೆ ದಾರಿ ಮಾಡಿಕೊಡಬಹುದು ಎಂದು ಬರುಣ್ ದಾಸ್ ಹೇಳಿದರು.

ಸಮಾಜ ಸೇವೆಗಾಗಿ ಸುಧಾಮೂರ್ತಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮ ಭೂಷಣ ಸ್ವೀಕರಿಸಿದ ಕುರಿತು ಏಪ್ರಿಲ್ ಮೊದಲ ವಾರದಲ್ಲಿ ಅವರ ಅಳಿಯ, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಇನ್​ಸ್ಟಾಗ್ರಾಂ ಪೋಸ್ಟ್ ಮೂಲಕ ಹೆಮ್ಮೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ನಾಸಾದ ‘ಆರ್ಟೆಮಿಸ್ ಮಿಷನ್‌’ಗಾಗಿ ರೋವರ್ ತಯಾರಿಸಿದ 6 ವಿದ್ಯಾರ್ಥಿಗಳು; ಆಯ್ಕೆಯಾದರೆ ಚಂದ್ರನ ಮೇಲೆ ಓಡಾಡಲಿದೆ ಭಾರತದ ರೋವರ್!

‘ಡ್ಯುಯೊಲಾಗ್ ವಿದ್ ಬರುಣ್ ದಾಸ್’ ಎಂಬುದು ಸಂವಾದ ಕಾರ್ಯಕ್ರಮವಾಗಿದ್ದು, ಮಹಾನ್ ವ್ಯಕ್ತಿಗಳು ಅಥವಾ ದಂತಕಂತೆಗಳು ತಮ್ಮ ಜೀವನ ಪಯಣದ ಅನುಭವವನ್ನು ಹಂಚಿಕೊಳ್ಳುತ್ತಾರೆ. ಈ ಕಾರ್ಯಕ್ರಮದ ಮೂಲಕ ಅವರು ತಮ್ಮ ಆಲೋಚನೆಗಳು ಮತ್ತು ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ.

‘ಡ್ಯುಯೊಲಾಗ್ ವಿದ್ ಬರುಣ್ ದಾಸ್’ನ ಈ ಎಪಿಸೋಡ್​​ನಲ್ಲಿ ನಡೆದ ಸಂಭಾಷಣೆಯು ಅನುಭವಗಳ ನಿಜವಾದ ಹಬ್ಬವಾಗಿತ್ತು. ಭಾರತದ ಸ್ಪರ್ಧಾತ್ಮಕ ಸೂಚ್ಯಂಕವನ್ನು ಸ್ಪರ್ಶಿಸುವ ಆಕರವಾಗಿತ್ತು. ಒಂದು ರಾಷ್ಟ್ರವಾಗಿ ಗೆಲ್ಲುವ ಉತ್ಸಾಹವನ್ನು ಪಡೆದುಕೊಳ್ಳುವುದು, ಪೀಳಿಗೆಯ ಮನಸ್ಥಿತಿಯನ್ನು ಬದಲಾಯಿಸುವುದು ಮತ್ತು ಭವಿಷ್ಯವನ್ನು ರೂಪಿಸುವಲ್ಲಿ ಯುವಕರ ಪಾತ್ರಗಳ ಕುರಿತ ಚರ್ಚೆಯ ಹೂರಣವಾಗಿತ್ತು.

ಈ ಸಂಪೂರ್ಣ ಕಾರ್ಯಕ್ರಮವನ್ನು ವಿಶ್ವದ ಮೊದಲ ಸುದ್ದಿ OTT ಪ್ಲಾಟ್‌ಫಾರ್ಮ್ ‘ನ್ಯೂಸ್ 9’ ಪ್ಲಸ್‌ನಲ್ಲಿ ಮೂರು ಎಪಿಸೋಡ್​ಗಳಾಗಿ ಪ್ರಸಾರ ಮಾಡಲಾಗುತ್ತಿದೆ.

EP1: INDIA’S WORLD

EP2: MAN, WOMAN, & INFOSYS

EP3: THE STARTUP DILEMMA

Published On - 8:22 pm, Fri, 14 April 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ