PM Modi: ಗಿನ್ನಿಸ್ ದಾಖಲೆ ಬರೆದ ಅಸ್ಸಾಂ ಸಾಂಪ್ರದಾಯಿಕ ಬಿಹು ನೃತ್ಯದಲ್ಲಿ ನಮೋ ಭಾಗಿ

ಪ್ರಧಾನಿ ನರೇಂದ್ರ ಮೋದಿಯವರು ಅಸ್ಸಾಂ ಪ್ರವಾಸ ಕೈಗೊಂಡಿದ್ದು, ಈ ವೇಳೆ AIIMS ಗುವಾಹಟಿ ಕಾರ್ಯಾರಂಭಕ್ಕೆ ಚಾಲನೆ ನೀಡುವುದರ ಜೊತೆಗೆ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಶಂಕುಸ್ಥಾಪನೆ ನೇರವೆರಿಸಿದರು.

Follow us
Praveen Sannamani
|

Updated on:Apr 14, 2023 | 9:21 PM

ಅಸ್ಸಾಂ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರು ಏಮ್ಸ್ ಗುವಾಹಟಿ ಇತರ ಮೂರು ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಿದರು. ಜೊತೆಗೆ 14,300 ಕೋಟಿ ರೂ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಸಾರ್ವಜನಿಕ ಸಮಾರಂಭದಲ್ಲಿ ಮೂರು ವೈದ್ಯಕೀಯ ಕಾಲೇಜುಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದು, ಪಲಾಶಬರಿ ಮತ್ತು ಸುಳ್ಕುಚಿಯನ್ನು ಸಂಪರ್ಕಿಸುವ ಬ್ರಹ್ಮಪುತ್ರ ನದಿಯ ಸೇತುವೆ ಮತ್ತು ಶಿವಸಾಗರದಲ್ಲಿ ರಂಗ್ ಘರ್ ಸೌಂದರ್ಯೀಕರಣ ಕಾಮಗಾರಿಗೆ ಅವರು ಶಂಕುಸ್ಥಾಪನೆ ನೆರವೇರಿಸಲಿದರು.

ಇದೇ ವೇಳೆ ಪ್ರಧಾನಿ ಮೋದಿಯವರು ಅಸ್ಸಾಂ ರಾಜ್ಯದ ಸಾಂಪ್ರದಾಯಿಕ ಬಿಹು ನೃತ್ಯ ವೀಕ್ಷಿಸಿದರು. ಬಿಹು ನೃತ್ಯದಲ್ಲಿ 11,304 ಕಲಾವಿದರು ಭಾಗಿಯಾಗುವ ಮೂಲಕ ಹೊಸ ಗಿನ್ನೆಸ್ ಬುಕ್ ಆಫ್ ದಿ ರೇಕಾರ್ಡ್ ಗೆ ಸೇರ್ಪಡೆಯಾಗಿದ್ದು ವಿಶೇಷವಾಗಿತ್ತು.

ಒಂದೇ ವೇದಿಕೆಯ ಮೂಲಕ 11,304 ಕಲಾವಿದರಿಂದ ಬಿಹು ನೃತ್ಯ ಪ್ರದರ್ಶನ ಮಾಡಿದ್ದಲ್ಲದೆ 2548 ಕಲಾವಿದರು ಡ್ರಮ್ ಬಾರಿಸಿದ್ದು ಕೂಡಾ ಹೊಸ ದಾಖಲೆ ನಿರ್ಮಾಣ ಮಾಡಿದರು. ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನಿ ಮೋದಿಯವರು ಕಲಾವಿದರಿಗೆ ಅಭಿನಂದನೆ ಸಲ್ಲಿಸಿದರು.

Published On - 9:21 pm, Fri, 14 April 23