Rahul Gandhi: ಸರ್ಕಾರಿ ನಿವಾಸ ಖಾಲಿ ಮಾಡಿದ ರಾಹುಲ್ ಗಾಂಧಿ
ಲೋಕ ಸಭೆಯಿಂದ ಅನರ್ಹಗೊಂಡ ರಾಹುಲ್ ಗಾಂಧಿಯವರು ಸರ್ಕಾರ ನೀಡಿದ ಅಧಿಕೃತ ನಿವಾಸವನ್ನು ಖಾಲಿ ಮಾಡಿದ್ದಾರೆ. ಇದೀಗ ಮನೆಯ ಮುಂದೆ ತಮ್ಮ ಸಾಮಗ್ರಿಗಳನ್ನು ಸಾಗಿಸಲು ಟ್ರಕ್ ಬಂದು ಮನೆಯ ಮುಂದೆ ನಿಂತಿದೆ.
ದೆಹಲಿ: ಮೋದಿ ಉಪನಾಮಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ರಾಹುಲ್ ಗಾಂಧಿ (Rahul Gandhi) ಅವರ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹಾಕಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರತ್ ಕೋರ್ಟ್ ರಾಹುಲ್ ಗಾಂಧಿ ಅವರಿಗೆ ದೋಷಿ ಎಂದು 2 ವರ್ಷಗಳ ಕಾಲ ಶಿಕ್ಷೆಯನ್ನು ವಿಧಿಸಿ, ಜಾಮೀನು ನೀಡಿತ್ತು, ನಂತರ ಲೋಕಸಭೆ ಸದಸ್ಯತ್ವದಿಂದ ಅನರ್ಹ ಕೂಡ ಮಾಡಲಾಗಿತ್ತು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟ್ನಾದ ನ್ಯಾಯಾಲಯವೊಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು, ಇದೀಗ ಲೋಕ ಸಭೆಯಿಂದ ಅನರ್ಹಗೊಂಡ ರಾಹುಲ್ ಗಾಂಧಿಯವರು ಸರ್ಕಾರ ನೀಡಿದ ಅಧಿಕೃತ ನಿವಾಸವನ್ನು ಖಾಲಿ ಮಾಡಿದ್ದಾರೆ. ಮನೆಯ ಮುಂದೆ ತಮ್ಮ ಸಾಮಗ್ರಿಗಳನ್ನು ಸಾಗಿಸಲು ಟ್ರಕ್ ಬಂದು ನಿಂತಿದೆ.
ಅಪರಾಧ ಸಾಬೀತಾದ ಕಾರಣ ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಂಡ ನಂತರ, ಏಪ್ರಿಲ್ 22 ರೊಳಗೆ ಅವರ ಅಧಿಕೃತ ನಿವಾಸವನ್ನು ಖಾಲಿ ಮಾಡುವಂತೆ ಲೋಕಸಭೆಯ ಕಾರ್ಯದರ್ಶಿಯು ರಾಹುಲ್ ಗಾಂಧಿಯರಿಗೆ ಹೇಳಿದ್ದರು. ತುಘಲಕ್ ಲೇನ್ ಬಂಗಲೆಯನ್ನು ರಾಹುಲ್ ಗಾಂಧಿಯವರಿಗೆ 2005ರಲ್ಲಿ ಉತ್ತರ ಪ್ರದೇಶದ ಅಮೇಥಿನಿಂದ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ ಅವರಿಗೆ ಮಂಜೂರು ಮಾಡಲಾಯಿತು. ಆದರೆ ಅವರು ಮಾರ್ಚ್ 23ರಿಂದ ಲೋಕಸಭೆಯಿಂದ ಅಹರ್ನಗೊಂಡ ನಂತರ ನಿಯಮದ ಪ್ರಕಾರ, ಅನರ್ಹಗೊಂಡ ಸಂಸದರು ಸರ್ಕಾರಿ ವಸತಿಗೆ ಅರ್ಹರಲ್ಲ ಮತ್ತು ಅಧಿಕೃತ ಬಂಗಲೆಯನ್ನು ಖಾಲಿ ಮಾಡಲು 30 ದಿನಗಳ ಅವಧಿಯನ್ನು ನೀಡಲಾಗುತ್ತದೆ.
2019ರ ಲೋಕಸಭಾ ಚುನಾವಣೆ ಪ್ರಚಾರ ಸಮಯದಲ್ಲಿ ಎಲ್ಲಾ ಕಳ್ಳರು ಮೋದಿ ಉಪನಾಮಗಳನ್ನು ಹೊಂದಿದ್ದಾರೆ ಹೇಗೆ ಎಂದು ಕೇಳಿದರು ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರತ್‌ನ ಸ್ಥಳೀಯ ನ್ಯಾಯಾಲಯವು ಕಾಂಗ್ರೆಸ್ ನಾಯಕನನ್ನು ಎರಡು ವರ್ಷಗಳ ಅವಧಿಗೆ ದೋಷಿ ಎಂದು ಘೋಷಿಸಿತು.
ರಾಹುಲ್ ಗಾಂಧಿಯವರು ನಿವಾಸ ಖಾಲಿ ಮಾಡುವ ಸಮಯದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ ಯಾವಾಗಲೂ ಸರ್ಕಾರಿ ವಸತಿಗೃಹದಲ್ಲಿಯೇ ಇರುತ್ತಿದ್ದರಿಂದ ತನಗೆ ಎಂದಿಗೂ ನನಗೆ ಮನೆ ಇರಲಿಲ್ಲ ಎಂದು ಹೇಳಿದರು. ಈ ಮನೆಗೂ ತನಗೂ ಬಲವಾದ ಬಾಂಧವ್ಯ ಇಲ್ಲ ಎಂದು ಹೇಳಿದ್ದರು. ಕಾಂಗ್ರೆಸ್ನ ನಾಯಕ ರಾಹುಲ್ ಗಾಂಧಿ ಅವರು ತಮ್ಮ ನಿವಾಸದಿಂದ ಖಾಲಿ ಮಾಡುತ್ತಾರೆ ಎಂದಾಗ ಕಾಂಗ್ರೆಸ್ ಅನೇಕ ಸಂಸದರು ನಾನು ಸರ್ಕಾರಿ ಮನೆಯನ್ನು ಖಾಲಿ ಮಾಡುತ್ತೇವೆ ಎಂದು ‘ಮೇರಾ ಘರ್, ಆಪ್ಕಾ ಘರ್’ ಅಭಿಯಾನವನ್ನು ಪ್ರಾರಂಭಿಸಿದ್ದರು.
Published On - 6:40 pm, Fri, 14 April 23