ತರಗತಿಯಲ್ಲಿ ಗರ್ಭಪಾತ: ಕೊಠಡಿಯೊಳಕ್ಕೆ ನುಗ್ಗಿ ಬಾಗಿಲು ಹಾಕಿಕೊಂಡ ಬಿ ಟೆಕ್ ವಿದ್ಯಾರ್ಥಿನಿ, ತೀವ್ರ ರಕ್ತಸ್ರಾವದಿಂದ ಸಾವು

Nellore: ತರಗತಿಯಲ್ಲಿಯೇ ಗರ್ಭಪಾತವಾಯಿತಾ? ಅಥವಾ YouTube ವೀಡಿಯೊ ಮೂಲಕ ತನಗೆ ತಾನೇ ಸ್ವಯಂ ಅಬಾರ್ಷನ್ ಮಾಡಿಕೊಂಡಳಾ? ಪೊಲೀಸರು ಈ ಬಗ್ಗೆ ವಿವರ ಸಂಗ್ರಹಿಸುತ್ತಿದ್ದಾರೆ.

ತರಗತಿಯಲ್ಲಿ ಗರ್ಭಪಾತ: ಕೊಠಡಿಯೊಳಕ್ಕೆ ನುಗ್ಗಿ ಬಾಗಿಲು ಹಾಕಿಕೊಂಡ ಬಿ ಟೆಕ್ ವಿದ್ಯಾರ್ಥಿನಿ, ತೀವ್ರ ರಕ್ತಸ್ರಾವದಿಂದ ಸಾವು
ತರಗತಿಯಲ್ಲಿಯೇ ಗರ್ಭಪಾತವಾಯಿತಾ?
Follow us
|

Updated on:Apr 15, 2023 | 1:33 PM

ನೆಲ್ಲೂರು: ನೆಲ್ಲೂರಿನಲ್ಲಿ (Nellore) ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಖಾಸಗಿ ಕಾಲೇಜಿನಲ್ಲಿ ಬಿ. ಟೆಕ್ ಓದುತ್ತಿದ್ದ ಯುವತಿ ಗರ್ಭಪಾತಕ್ಕೆ ಒಳಗಾಗಿ ತರಗತಿಯ ಕೊಠಡಿಯಲ್ಲೇ ಸಾವನ್ನಪ್ಪಿದ್ದಾಳೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಬಹಿರಂಗಪಡಿಸಿದ ವಿವರಗಳ ಪ್ರಕಾರ, ಮರ್ರಿಪಾಡು ಮಂಡಲದ 19 ವರ್ಷದ ಯುವತಿ ನೆಲ್ಲೂರಿನಲ್ಲಿ ಬಿ. ಟೆಕ್ ದ್ವಿತೀಯ ವರ್ಷ ಓದುತ್ತಿದ್ದಳು (B Tech student). ಇದೇ ತಿಂಗಳ 11ರಂದು ತನ್ನ ಸಹಪಾಠಿಗಳೆಲ್ಲ ಹೊರಗಡೆ ಇರುವಾಗ… ತಾನು ಒಬ್ಬಳು ಮಾತ್ರ ತರಗತಿಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಬಹಳ ಹೊತ್ತಾದರೂ ಹೊರಗೆ ಬಾರದೇ ಇದ್ದ ಕಾರಣ ಸ್ನೇಹಿತೆಯರು ಬಾಗಿಲು ಒಡೆದು ನೋಡಿದಾಗ ಯುವತಿ ತೀವ್ರ ರಕ್ತಸ್ರಾವವಾಗಿ ತರಗತಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ (Abortion). ಇನ್ನೂ ಆಘಾತಕಾರಿ ಸಂಗತಿಯೆಂದರೆ ಆ ವಿದ್ಯಾರ್ಥಿನಿಯ ಪಕ್ಕದಲ್ಲಿ 6 ತಿಂಗಳ ಭ್ರೂಣವಿತ್ತು!

ಕೂಡಲೇ ಸಹಪಾಠಿಗಳೆಲ್ಲ ಸೇರಿ ತಾಯಿ ಹಾಗೂ ಭ್ರೂಣವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಾಯಿ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಮಾಹಿತಿ ಪಡೆದ ನೆಲ್ಲೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿವರ ಸಂಗ್ರಹಿಸಿದ್ದಾರೆ. ಬಾಲಕಿಯ ತಂದೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ನರ್ಸ್​ ನಿಗೂಢ ಹತ್ಯೆ! ಹಂತಕ ಆ ಒಂದು ಸುಳಿವು ನೀಡಿದ ತಕ್ಷಣ, ಚಾಣಾಕ್ಷ ಗದಗ ಪೊಲೀಸರು ಆರೋಪಿಯನ್ನು ಲಾಕ್​ ಮಾಡಿಯೇ ಬಿಟ್ರು!

ತರಗತಿಯಲ್ಲಿಯೇ ಗರ್ಭಪಾತವಾಯಿತಾ? ಅಥವಾ YouTube ವೀಡಿಯೊ ಮೂಲಕ ತನಗೆ ತಾನೇ ಸ್ವಯಂ ಅಬಾರ್ಷನ್ ಮಾಡಿಕೊಂಡಳಾ? ಪೊಲೀಸರು ಈ ಬಗ್ಗೆ ವಿವರ ಸಂಗ್ರಹಿಸುತ್ತಿದ್ದಾರೆ. ಯುವತಿಯ ಸೆಲ್‌ ಫೋನ್ ವಶಪಡಿಸಿಕೊಂಡ ಪೊಲೀಸರು, ಅದರಲ್ಲಿನ ಡೇಟಾ ಕಲೆಹಾಕಿದ್ದಾರೆ. ಅದರ ಆಧಾರದ ಮೇಲೆ ಆಕೆ ಅನಂತಸಾಗರ ಪ್ರದೇಶದ ಕಾರು ಚಾಲಕನೊಂದಿಗೆ ನಿಕಟ ಸಂಪರ್ಕ ಹೊಂದಿದ್ದಳು ಎಂದು ತಿಳಿದುಬಂದಿದೆ. ಮುಂದಿನ ತನಿಖೆ ನಡೆಯಬೇಕಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:33 pm, Sat, 15 April 23

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್