ಚಿಕ್ಕಮಗಳೂರು: ಪೊಲೀಸ್ ಠಾಣೆಯ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ
ಮಹಿಳೆಯೊಬ್ಬರು ಮೂಡಿಗೆರೆ ಪೊಲೀಸ್ ಠಾಣೆಯ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ್ದು,ಪೊಲೀಸರು ರಕ್ಷಣೆ ಮಾಡಿದ್ದಾರೆ.
ಚಿಕ್ಕಮಗಳೂರು: ಮಹಿಳೆಯೊಬ್ಬರು ಮೂಡಿಗೆರೆ ಪೊಲೀಸ್ ಠಾಣೆಯ ಮೇಲೇರಿ ಆತ್ಮಹತ್ಯೆಗೆ(suicide) ಯತ್ನಿಸಿದ ಘಟನೆ ನಡೆದಿದೆ. ಹಳೆ ಮೂಡಿಗೆರೆ ಗ್ರಾಮದ ಶಿಲ್ಪ ಎಂಬುವವರು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಹೌದು ಮಹಿಳೆಯೊಬ್ಬರು ಠಾಣೆಯ ಮಹಡಿ ಮೇಲಿಂದ ಜಿಗಿಯಲು ಯತ್ನಿಸಿದ್ದು ಆಕೆಯನ್ನ ಪೊಲೀಸರು ರಕ್ಷಣೆ ಮಾಡಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಲು ಕಾರಣವೇನು?
ಹಳೆ ಮೂಡಿಗೆರೆ ಗ್ರಾಮದ ಶಿಲ್ಪ ಮತ್ತು ಆಕೆಯ ಅಕ್ಕನ ನಡುವೆ 2022ರಲ್ಲಿ ಗಲಾಟೆಯಾಗಿತ್ತು, ಈ ವಿಷಯಕ್ಕೆ ಇಬ್ಬರು ಅಕ್ಕ ತಂಗಿಯರು ದೂರು ನೀಡಲು ಮೂಡಿಗೆರೆ ಠಾಣೆಗೆ ಹೋಗಿದ್ದರು. ಈ ವೇಳೆ ಅಲ್ಲಿನ ಸುಜಾತಾ ಎಂಬ ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರಂತೆ. ಈ ಕಾರಣಕ್ಕೆ ಶಿಲ್ಪ ವಿರುದ್ದ ಮೂಡಿಗೆರೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಕಳೆದ ಒಂದು ವರ್ಷದಿಂದ ಶಿಲ್ಪ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆ ಕೋರ್ಟ್ ಆಕೆಯ ವಿರುದ್ಧ ಸಮನ್ಸ್ ಜಾರಿ ಮಾಡಿತ್ತು. ಇದರಿಂದ ಇದೀಗ ಮಹಿಳೆ ಕೋರ್ಟ್ ಸಮನ್ಸ್ ಹಿಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಪ್ರತಿಷ್ಠಿತ ಬ್ರ್ಯಾಂಡ್ನ್ನೇ ನಕಲು ಮಾಡಿದ್ದ ಉದ್ಯಮಿಯ ಬಂಧನ
ಬೆಂಗಳೂರು: ಪ್ರತಿಷ್ಠಿತ ಬ್ರ್ಯಾಂಡ್ನ್ನೇ ನಕಲು ಮಾಡಿದ್ದ ಉದ್ಯಮಿ ರಾಜಸ್ಥಾನ ಮೂಲದ ಕಿನ್ನಿಲಾಲ್ನನ್ನು ವಿವಿ ಪುರಂ ಪೊಲೀಸರು ಬಂಧಿಸಿದ್ದಾರೆ. 10 ವರ್ಷಗಳಿಂದ ಏಷ್ಯನ್ ಪೇಂಟ್ ನಕಲು ಮಾಡಿ ಮಾರಾಟ ಮಾಡುತ್ತಿದ್ದನಂತೆ. ಮೊದಲಿಗೆ ತನ್ನದೇ ಲೋಕಲ್ ಬ್ರ್ಯಾಂಡ್ನಲ್ಲಿ ವ್ಯವಹಾರ ಆರಂಭ ಮಾಡಿದ್ದ ಇತ, ಬಳಿಕ ಬ್ಯುಸಿನೆಸ್ ಯಶಸ್ಸು ಕಾಣದ ಹಿನ್ನೆಲೆ ಪ್ರತಿಷ್ಠಿತ ಬ್ರ್ಯಾಂಡ್ ಏಷ್ಯನ್ ಕಂಪನಿ ಹೆಸರಿನಲ್ಲಿ ನಕಲಿ ಪೇಂಟಿಂಗ್ ಮಾರಾಟ ಮಾಡಲು ಶುರು ಮಾಡಿದ್ದಾನೆ. ಇನ್ನು ಇತನ ವಿರುದ್ದ ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದಾಗ, ಈ ವೇಳೆ ನಕಲಿ ಪೇಂಟಿಂಗ್ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಬಳಿಕ ವಿದ್ಯಾರಣ್ಯಪುರದ ಕಚೇರಿ ಮೇಲೆ ದಾಳಿ ನಡೆಸಿದ್ದ ಪೊಲೀಸರು, ದಾಳಿ ವೇಳೆ 10 ಲಕ್ಷ ರೂ. ಮೌಲ್ಯದ ನಕಲಿ ಪೇಂಟಿಂಗ್ ವಶಕ್ಕೆ ಪಡೆದಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ