ಅದೆಷ್ಟು ಹೊತ್ತು ಮೊಬೈಲ್ ನೋಡ್ತೀಯಾ ಎಂದು ಕಸಿದುಕೊಂಡಿದ್ದಕ್ಕೆ 7 ಅಂತಸ್ತಿನ ಕಟ್ಟಡದಿಂದ ಜಿಗಿದು ಬಾಲಕಿ ಆತ್ಮಹತ್ಯೆ
ಮೊಬೈಲ್ ಫೋನ್ ಬಳಸಲು ಅನುಮತಿಸದಿದ್ದಕ್ಕಾಗಿ ಅಸಮಾಧಾನಗೊಂಡ 15 ವರ್ಷದ ಬಾಲಕಿ ಏಳು ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ, ಪೋಷಕರು ಯಾವ ಕಾರಣಕ್ಕಾಗಿ ನಮಗೆ ಬುದ್ಧಿ ಮಾತು ಹೇಳುತ್ತಿರಬಹುದು ಎನ್ನುವ ಕನಿಷ್ಠ ಆಲೋಚನಾ ಶಕ್ತಿಯು ಕೂಡ ಅವರಿಗಿರುವುದಿಲ್ಲ. ಮೊಬೈಲ್ ಫೋನ್ ಬಳಸಲು ಅನುಮತಿಸದಿದ್ದಕ್ಕಾಗಿ ಅಸಮಾಧಾನಗೊಂಡ 15 ವರ್ಷದ ಬಾಲಕಿ ಏಳು ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪಶ್ಚಿಮ ಉಪನಗರದ ಮಾಲ್ವಾನಿ ಪ್ರದೇಶದಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಲಕಿ ಶವ ಪತ್ತೆಯಾದ ನಂತರ, ಪೊಲೀಸರು ಆಕೆಯ ಪೋಷಕರನ್ನು ಪತ್ತೆಹಚ್ಚಿದ್ದಾರೆ ಎಂದು ಅವರು ಹೇಳಿದರು. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಆಕೆಯ ಕುಟುಂಬಸ್ಥರು ಆಕೆಯ ಮೊಬೈಲ್ ಫೋನ್ ಅನ್ನು ಕಿತ್ತುಕೊಂಡಿದ್ದರಿಂದ ಬಾಲಕಿ ಅಸಮಾಧಾನಗೊಂಡಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ, ತನಿಖೆ ಮುಂದುವರೆದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ