ಅಶೋಕ್ ಗೆಹ್ಲೋಟ್ ರಾಜಸ್ಥಾನ ಸರ್ಕಾರವನ್ನು ಭ್ರಷ್ಟಾಚಾರದ ಅಡ್ಡಾ ಮಾಡಿದ್ದಾರೆ: ಅಮಿತ್ ಶಾ
ಭ್ರಷ್ಟಾಚಾರ ಹಣದಿಂದ ಬೊಕ್ಕಸವನ್ನು ತುಂಬುವಲ್ಲಿ ಸಚಿನ್ ಪೈಲಟ್ ಅವರ ಕೊಡುಗೆಗಿಂತ ಅಶೋಕ್ ಗೆಹ್ಲೋಟ್ ಕೊಡುಗೆ ಜಾಸ್ತಿ ಇರುವುದರಿಂದ ಕಾಂಗ್ರೆಸ್ ಯಾವಾಗಲೂ ಮುಖ್ಯಮಂತ್ರಿ ಗೆಹ್ಲೋಟ್ಗೆ ಆದ್ಯತೆ ನೀಡುತ್ತದೆ ಎಂದ ಅಮಿತ್ ಶಾ.
ಭರತ್‌ಪುರ: ರಾಜಸ್ಥಾನದಲ್ಲಿ (Rajasthan) ಆಂತರಿಕ ಕಲಹದ ಹಿನ್ನೆಲೆಯಲ್ಲಿ ಕಾಂಗ್ರೆಸ್ (Congress) ವಿರುದ್ಧ ಟೀಕಾ ಪ್ರಹಾರ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) “ಭ್ರಷ್ಟಾಚಾರ” ಹಣದಿಂದ ಬೊಕ್ಕಸವನ್ನು ತುಂಬುವಲ್ಲಿ ಸಚಿನ್ ಪೈಲಟ್ ಅವರ ಕೊಡುಗೆಗಿಂತ ಅಶೋಕ್ ಗೆಹ್ಲೋಟ್ ಕೊಡುಗೆ ಜಾಸ್ತಿ ಇರುವುದರಿಂದ ಕಾಂಗ್ರೆಸ್ ಯಾವಾಗಲೂ ಮುಖ್ಯಮಂತ್ರಿ ಗೆಹ್ಲೋಟ್ ಗೆ ಆದ್ಯತೆ ನೀಡುತ್ತದೆ ಎಂದು ಶನಿವಾರ ಹೇಳಿದ್ದಾರೆ. ಪೈಲಟ್ ಯಾವುದೇ ನೆಪದಲ್ಲಿ ಧರಣಿ ಕುಳಿತಿದ್ದಾರೆ, ಆದರೆ ಅವರಿಗೆ ಬೆಂಬಲ ಇರುವುದಿಲ್ಲ. ಏಕೆಂದರೆ ಕಾಂಗ್ರೆಸ್ ಪಕ್ಷದ ಬೊಕ್ಕಸವನ್ನು ತುಂಬುವಲ್ಲಿ ಸಚಿನ್ ಪೈಲಟ್ ಕೊಡುಗೆ ಕಡಿಮೆ ಮತ್ತು ಗೆಹ್ಲೋಟ್ ಅವರ ಕೊಡುಗೆ ಹೆಚ್ಚು ಎಂದು ಭರತ್‌ಪುರದಲ್ಲಿ ಬೂತ್ ಮಟ್ಟದ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅಮಿತ್ ಶಾ ಹೇಳಿದರು.
ಗೆಹ್ಲೋಟ್ ಅವರು ರಾಜಸ್ಥಾನ ಸರ್ಕಾರವನ್ನು ಭ್ರಷ್ಟಾಚಾರದ ಅಡ್ಡಾ ಮಾಡಿದ್ದು, ರಾಜ್ಯವನ್ನು ಲೂಟಿ ಮಾಡಿದ್ದಾರೆ. ಈ ಭ್ರಷ್ಟಾಚಾರದ ಹಣ ಕಾಂಗ್ರೆಸ್ ಪಕ್ಷದ ಬೊಕ್ಕಸಕ್ಕೆ ಹೋಗಿದೆ ಎಂದು ಶಾ ಆರೋಪಿಸಿದ್ದಾರೆ. 2008 ರ ಜೈಪುರ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿದ ನಂತರ, ವೋಟ್ ಬ್ಯಾಂಕ್ ರಾಜಕೀಯದ ಕಾರಣ ಕಾಂಗ್ರೆಸ್ ಸರ್ಕಾರವು ಹೈಕೋರ್ಟ್‌ನಲ್ಲಿ ಸರಿಯಾದ ವಾದವನ್ನು ಮಂಡಿಸಲಿಲ್ಲ ಎಂದು ಅಮಿತ್ ಶಾ ಆರೋಪಿಸಿದ್ದಾರೆ.
#WATCH | “…Pilot ji whatever you do, your number won’t come, maybe your contribution is more on ground than Gehlot ji but Gehlot ji’s contribution is more in Congress’s treasure”: Union minister Amit Shah takes a dig at Ashok Gehlot-Sachin Pilot tussle in Rajasthan Congress pic.twitter.com/bZG4QHLMlP
— ANI (@ANI) April 15, 2023
ಸ್ಫೋಟ ಸಂತ್ರಸ್ತರ ಸಾವಿನ ಬಗ್ಗೆ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ರಾಜಸ್ಥಾನದಲ್ಲಿ 3-ಡಿ ಸರ್ಕಾರವಿದೆ. ಮೂರು ಡಿಎಸ್ ಎಂದರೆ ದಂಗೆ (ಗಲಭೆಗಳು), ಮಹಿಳೆಯರೊಂದಿಗೆ ದುರ್ವರ್ತನೆ ಮತ್ತು ‘ದಲಿತ’ ದೌರ್ಜನ್ಯಗಳು.
ಇದನ್ನೂ ಓದಿ:ಉತ್ತರ ಪ್ರದೇಶ: ಮಗ ಅಸಾದ್ ಅಹ್ಮದ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿಲ್ಲ ಅತೀಕ್ ಅಹ್ಮದ್
ಜನರು ಈ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಹೊರದಬ್ಬುತ್ತಾರೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 2/3 ಬಹುಮತದೊಂದಿಗೆ ಸರ್ಕಾರವನ್ನು ರಚಿಸುತ್ತದೆ. ರಾಜಸ್ಥಾನದಲ್ಲಿ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಎಲ್ಲಾ 25 ಸ್ಥಾನಗಳನ್ನು ಗೆಲ್ಲುತ್ತದೆ ಎಂದಿದ್ದಾರೆ ಅಮಿತ್ ಶಾ ಮೋದಿ ಸರ್ಕಾರದ ಕಾರ್ಯವೈಖರಿ, ಪಕ್ಷದ ಸಿದ್ಧಾಂತ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ಆಧಾರದ ಮೇಲೆ ಬಿಜೆಪಿ ಚುನಾವಣೆಗೆ ಸ್ಪರ್ಧಿಸಲಿದೆ ಎಂದು ಅವರು ಹೇಳಿದ್ದಾರೆ. ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜಸ್ಥಾನದ ಇತಿಹಾಸದಲ್ಲಿ ಅತ್ಯಂತ ಭ್ರಷ್ಟ ಸರ್ಕಾರಗಳಲ್ಲಿ ಒಂದು. ಜನರು ಬೇಸತ್ತಿದ್ದಾರೆ ಎಂದಿದ್ದಾರೆ ಅಮಿತ್ ಶಾ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:39 pm, Sat, 15 April 23