ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಮಗು ಮಾರಾಟ ಪ್ರಕರಣ ನಡೆದಿದ್ದು ಹೆತ್ತಮ್ಮ 5,000 ರೂಪಾಯಿಗೆ ಗಂಡು ಮಗು ಮಾರಾಟ ಮಾಡಿರುವುದು ವರದಿಯಾಗಿದೆ. ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ರೇಣುಕಾ ಮಗು ಮಾರಾಟ ಮಾಡಿರುವ ಮಹಿಳೆ ಎಂದು ತಿಳಿದುಬಂದಿದೆ.
ಈ ಸಂಬಂಧ ಸೆಪ್ಟೆಂಬರ್ 12ರಂದು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲಾಸ್ಪತ್ರೆಯ ಸ್ಟಾಫ್ ನರ್ಸ್ ಕಸ್ತೂರಿ ಮತ್ತು ಆಕೆ ಪತಿಯ ಕೈವಾಡ ಶಂಕೆ ವ್ಯಕ್ತವಾಗಿತ್ತು. ಆಗಸ್ಟ್ 26ರಂದು ಜಿಲ್ಲಾಸ್ಪತ್ರೆ ಆವರಣದಲ್ಲೇ ಈ ಮಗು ಮಾರಾಟವಾಗಿರುವ ಶಂಕೆ ವ್ಯಕ್ತವಾಗಿದೆ.
ಪ್ರಕರಣದಲ್ಲಿ ಜಿಲ್ಲಾಸ್ಪತ್ರೆಯ ಸ್ಟಾಫ್ ನರ್ಸ್ ಕಸ್ತೂರಿ ಅವರನ್ನು ಸೇವೆಯಿಂದ ಅಮಾನತು ಮಾಡಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್ ಎಲ್ ಲಕ್ಕಮ್ಮಣವರ ಆದೇಶಿಸಿದ್ದಾರೆ. ಸ್ಟಾಫ್ ನರ್ಸ್ ಕಸ್ತೂರಿಯ ಪತಿ ಮಂಜುನಾಥನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಈ ಮಧ್ಯೆ ಮಗು ಇನ್ನೂ ಪತ್ತೆಯಾಗಿಲ್ಲ. ಜಿಲ್ಲಾ ಪೊಲೀಸರಿಂದ ಶೋಧ ಕಾರ್ಯ ನಡೆದಿದೆ.
(child sold in vijayapura district hospital staff nurse suspended baby boy not yet found)
Published On - 12:29 pm, Thu, 16 September 21