ವಿಜಯಪುರ: SDPI ಕಾರ್ಯಕರ್ತರಿಂದ ಪ್ಯಾಲೆಸ್ಟೈನ್ ಪರವಾಗಿ ಘೋಷಣೆ; ಭಿತ್ತಿಪತ್ರ ಪ್ರದರ್ಶನ

| Updated By: ವಿವೇಕ ಬಿರಾದಾರ

Updated on: Nov 06, 2023 | 10:13 AM

ವಿಜಯಪುರ ನಗರದ ಜುಮ್ಮಾ ಮಸೀದಿ ರಸ್ತೆಯಲ್ಲಿ ರವಿವಾರ ಎಸ್​ಡಿಪಿಐ ಕಾರ್ಯಕರ್ತರು ಪ್ಯಾಲೆಸ್ಟೈನ್ ಪರವಾಗಿ ಘೋಷಣೆ ಕೂಗಿ, ಪ್ರತಿಭಟನೆ ನಡೆಸಿದರು. ಎಸ್​ಡಿಪಿಐ ಜಿಲ್ಲಾಧ್ಯಕ್ಷ ಅತಾವುಲ್ಲಾ ನೇತೃತ್ವದಲ್ಲಿ ಪ್ರತಿಭಟನೆಯಲ್ಲಿ ಪ್ಯಾಲೆಸ್ಟೈನ್ ಪರ ಭಿತ್ತಿಪತ್ರ ಪ್ರದರ್ಶನ ಮಾಡಲಾಗಿತ್ತು.

ವಿಜಯಪುರ: SDPI ಕಾರ್ಯಕರ್ತರಿಂದ ಪ್ಯಾಲೆಸ್ಟೈನ್ ಪರವಾಗಿ ಘೋಷಣೆ; ಭಿತ್ತಿಪತ್ರ ಪ್ರದರ್ಶನ
ಎಸ್​ಡಿಪಿಐ ಕಾರ್ಯಕರ್ತರಿಂದ ಪ್ಯಾಲೆಸ್ಟೈನ್ ಪರವಾಗಿ ಘೋಷಣೆ
Follow us on

ವಿಜಯಪುರ ನ.06: ಇಸ್ರೇಲ್​ ಮತ್ತು ಪ್ಯಾಲೆಸ್ಟೈನ್​ನ ಹಮಾಸ್ (Israel-Hamas War) ​ಉಗ್ರರ ನಡುವೆ ಯುದ್ಧ ನಡೆದಿದೆ. ವಿಜಯಪುರದ (Vijayapura) ಜುಮ್ಮಾ ಮಸೀದಿ (Jamma Mosque) ರಸ್ತೆಯಲ್ಲಿ ರವಿವಾರ ಎಸ್​ಡಿಪಿಐ (SDPI) ಕಾರ್ಯಕರ್ತರು ಪ್ಯಾಲೆಸ್ಟೈನ್ ಪರವಾಗಿ ಘೋಷಣೆ ಕೂಗಿ, ಪ್ರತಿಭಟನೆ ನಡೆಸಿದರು. ಎಸ್​ಡಿಪಿಐ ಜಿಲ್ಲಾಧ್ಯಕ್ಷ ಅತಾವುಲ್ಲಾ ನೇತೃತ್ವದಲ್ಲಿ ಪ್ರತಿಭಟನೆಯಲ್ಲಿ ಪ್ಯಾಲೆಸ್ಟೈನ್ ಪರ ಭಿತ್ತಿಪತ್ರ ಪ್ರದರ್ಶನ ಮಾಡಲಾಗಿತ್ತು. ಪ್ರತಿಭಟನೆಯಲ್ಲಿ ಅಪ್ರಾಪ್ತ ಮಕ್ಕಳು ಸಹಿತ ಭಾಗಿಯಾಗಿದ್ದರು. ಇದೀಗ ಎಸ್​ಡಿಪಿಐ ಜಿಲ್ಲಾಧ್ಯಕ್ಷ ಅತಾವುಲ್ಲ ವಿರುದ್ಧ ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ಯಾಲೆಸ್ಟೈನ್​ಗೆ ಹಣ ನೀಡುವಂತೆ ಭಟ್ಕಳ ಮುಸ್ಲಿಂ ಯೂಥ್ ಫೆಡರೇಶನ್ ಕರೆ

ಪ್ಯಾಲೆಸ್ಟೈನ್ ಮೇಲೆ ಇಸ್ರೇಲ್ ದಾಳಿ ಮಾಡಿದ್ದನ್ನು ಖಂಡಿಸಿ ಮುಸ್ಲಿಂ ಯೂಥ್ ಫೆಡರೇಶನ್ ಭಟ್ಕಳದ ಕ್ರಿಕೆಟ್ ಲೀಗ್ ಪಂದ್ಯಾವಳಿಯನ್ನು ರದ್ದು ಮಾಡಿತ್ತು. ಯುದ್ಧ ಮುಗಿಯುವವರೆಗೆ ಭಟ್ಕಳದ ಮುಸ್ಲಿಮರು ಮದುವೆ, ಮನರಂಜನೆಯನ್ನು ರದ್ದು ಮಾಡುವಂತೆ ಕರೆ ನೀಡಿತ್ತು.

ಅವುಝ ಭಟ್ಕಳ ಕ್ರಿಕೆಟ್ ಲೀಗ್-5 ನವೆಂಬರ್​ 3 ರಿಂದ ಒಂದು ತಿಂಗಳಕಾಲ ಐಪಿಎಲ್ ಮಾದರಿಯಲ್ಲಿ ನಡೆಯಬೇಕಿತ್ತು. ಭಟ್ಕಳ ಮುಸ್ಲಿಂ ಯೂಥ್ ಫೆಡರೇಶನ್ ಕಳೆದ ತಿಂಗಳು 200 ಆಟಗಾರರನ್ನು ಗುರುತಿಸಿ ಹರಾಜು ಹಾಕಿ 12 ತಂಡವನ್ನು ಆಯ್ಕೆ ಮಾಡಿತ್ತು. ಮುಸ್ಲಿಮರ ಹತ್ಯೆ ವಿರೋಧಿಸಿ ಕ್ರಿಕೇಟ್ ಪಂದ್ಯಾವಳಿಯನ್ನು ರದ್ದು ಮಾಡಲಾಗಿದೆ. ಹಣ ಉಳಿಸಿ ಪ್ಯಾಲೆಸ್ಟೈನ್​ಗೆ ಸಹಾಯ ಮಾಡಲು ಭಟ್ಕಳ ಮುಸ್ಲಿಮರಿಗೆ ಸಂಘಟನೆ ಮನವಿ ಮಾಡಿತ್ತು.

ಇದನ್ನೂ ಓದಿ: ಮೈಸೂರಿನಲ್ಲಿ ಪ್ಯಾಲೆಸ್ಟೈನ್ ಪರ ರ‍್ಯಾಲಿ ನಡೆಸಲು ಎಸ್​ಡಿಪಿಐ ನಿರ್ಧಾರ: 144 ಸೆಕ್ಷನ್ ಜಾರಿ

ಪ್ಯಾಲೆಸ್ಟೈನ್ ​ ಬೆಂಬಲಿಸಿ ವಿಡಿಯೋ ಹಂಚಿಕೊಂಡಿದ್ದ ಮುಸ್ಲಿಂ ಯುವಕ

ಪ್ಯಾಲೆಸ್ತೀನ್​ ಬೆಂಬಲಿಸಿ ವಿಡಿಯೋ ಹಂಚಿಕೊಂಡಿದ್ದ ಹೊಸಪೇಟೆಯ ಆಲಂ ಬಾಷಾ ವಿರುದ್ಧ ಸುಮುಟೋ ಪ್ರಕರಣ ದಾಖಲು ಮಾಡಲಾಗಿತ್ತು. ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ PSI ಮುನಿರತ್ನ ನೀಡಿದ ದೂರಿನ ಆಧಾರದ ಮೇಲೆ CRPC 108-151 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಯುವಕನನ್ಮು ಪೊಲೀಸರು ವಶಕ್ಕೆ ಪಡೆದಿದ್ದರು.

ಆಲಂ ಬಾಷಾ ಹೊಸಪೇಟೆಯ ಸಿದ್ದಲಿಂಗಪ್ಪ ಚೌಕಿಯ ನಿವಾಸಿ ಆಗಿದ್ದು, ಅಲ್ಪಸಂಖ್ಯಾತ ಇಲಾಖೆ ಕಚೇರಿಯಲ್ಲಿ ಅಟೆಂಡರ್​ ಕೆಲಸ ಮಾಡುತ್ತಿದ್ದ. ವಾಟ್ಸಾಪ್​​​ ಸ್ಟೇಟಸ್​ನಲ್ಲಿ ಯುದ್ಧ ಪೀಡಿತ ಪ್ಯಾಲೆಸ್ತೀನ್ ಭಾವಚಿತ್ರ ಹಾಕಿ ವಿಡಿಯೋ ಹಂಚಿಕೊಂಡಿದ್ದು, ನಾವು ಪ್ಯಾಲೆಸ್ಟೈನ್ ಪರವಾಗಿದ್ದೇವೆ. ಪ್ಯಾಲೆಸ್ಟೈನ್ ಜಿಂದಾಬಾದ್ ಅಂತ ಬರೆಯಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:09 am, Mon, 6 November 23