ವಿಜಯಪುರ, ಆ.24: ವಿಜಯಪುರ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭಿವಿಸಿದೆ. ನಗರದ ಹೊರವಲಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಅಪರಿಚಿತ ಕ್ಯಾಂಟರ್ ವಾಹನ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ(Accident). ತಲೆ ಮೇಲೆ ಕ್ಯಾಂಟರ್ ಹರಿದ ಪರಿಣಾಮ ತಲೆಗಳು ಛಿದ್ರವಾಗಿವೆ. ಇನ್ನೂ ಮೃತ ಸವಾರರ ಹೆಸರು, ವಿಳಾಸ ಪತ್ತೆಯಾಗಿಲ್ಲ. ಹಾಗಾಗಿ ವಿಜಯಪುರ ಸಂಚಾರಿ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಸವಾರರ ಹೆಸರು, ವಿಳಾಸ ಪತ್ತೆಗೆ ಮುಂದಾಗಿದ್ದಾರೆ.
ಬೆಂಗಳೂರಿನಲ್ಲಿ ದಿನನಿತ್ಯವೂ ಆಕ್ಸಿಡೆಂಟ್ ಕಾಮನ್ ಆಗಿದೆ. ಒಂದಲ್ಲಾ ಒಂದು ಏರಿಯಾದಲ್ಲಿ ಅಪಘಾತಗಳು ಸಂಭವಿಸುತ್ತಲೇ ಇದ್ದು ಸವಾರರು ಗಾಯಾಳುಗಳಾಗಿ, ಮರಣವನಪ್ಪುತ್ತಲೇ ಇರುತ್ತಾರೆ. ಆದರೆ ಪದೇ ಪದೇ ಆಕ್ಸಿಡೆಂಟ್ ಆಗುವ ಬ್ಲಾಕ್ ಸ್ಪಾಟ್ ಗಳನ್ನು ಪಟ್ಟಿಮಾಡಿ, ಅಪಘಾತಕ್ಕೆ ಪರಿಹಾರ ಹುಡುಕಿ ಅಪಘಾತ ನಿಯಂತ್ರಿಸಲು ಪೊಲೀಸರು ಮುಂದಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಪೊಲೀಸ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ಸೃಷ್ಟಿಸಿದ್ದ ವ್ಯಕ್ತಿ ಕೊನೆಗೂ ಪೊಲೀಸ್ ಬಲೆಗೆ
ಸಂಚಾರ ದಟ್ಟಣೆ ಹಾಗು ವಯಲೇಷನ್ ತಪ್ಪಿಸಲು ಅಫೇನ್ಸ್ ಅನಾಲೈಝ್ಡ್ ಕ್ಯಾಮರಾ ಬಳಕೆ, ಬದಲಿ ಸಂಚಾರ ವ್ಯವಸ್ಥೆ, ಸಂಚಾರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಸ್ಪಾಟ್ ಫೈನ್ ಕ್ಯಾನ್ಸಲ್ ಮಾಡಿ ಕಾಂಟ್ಯಾಕ್ಟ್ಟ ಲೆಸ್ ಕೇಸ್ ಗಳ ದಾಖಲು ಮಾಡುವುದು ಸೇರಿದಂತೆ ಹಲವು ಕ್ರಮಗಳನ್ನ ಸಂಚಾರಿ ಪೊಲೀಸರು ಕೈಗೊಂಡಿದ್ದಾರೆ. ಈಗ ಮತ್ತೊಂದು ಹೊಸ ವಿಧಾನ ಪೊಲೀಸರು ಕಂಡುಕೊಂಡಿದ್ದಾರೆ. ಟ್ರಾಫಿಕ್ ನ ಸ್ಟ್ಯಾಟಿಸ್ಟಿಕ್‌ನ್ನು ತೆಗೆದುಕೊಂಡು ಪರಿಶೀಲನೆ ನಡೆಸಿ ಅದಕ್ಕೊಂದು ಪರಿಹಾರವನ್ನೂ ಕಂಡುಕೊಂಡಿದ್ದಾರೆ. ಅದಕ್ಕೆ ಇಟ್ಟ ಹೆಸರು ಬ್ಲಾಕ್ ಸ್ಪಾಟ್.
ಅತಿಯಾದ ವೇಗ , ರಸ್ತೆಗುಂಡಿಗಳೂ ಕೂಡ ಅಪಘಾತಕ್ಕೆ ಕಾರಣವಾಗಿದೆ. ಹಾಗು ಅವೈಜ್ಜಾನಿಕವಾಗಿ ಅಳವಡಿಸಿರುವ ರೋಡ್ ಹಂಪ್ಸ್ ಕೂಡ ಆಕ್ಸಿಡೆಂಟ್ ಕಾರಣವಾಗಿದೆ. ಈ ಹಿನ್ನಲೆ ಸಂಚಾರಿ ಪೊಲೀಸರಲ್ಲದೆ ಮತ್ತೆರಡು ಇಲಾಖೆಯ ಅಧಿಕಾರಿಗಳು ಕೂಡ ಇನ್ಸ್ಪೆಕ್ಷನ್ ಮಾಡಲಿದ್ದಾರೆ. ಯೆಸ್, ಪಿ ಡಬ್ಲ್ಯೂ ಡಿ ಹಾಗು ಬಿಬಿಎಂಪಿ ಅಧಿಕಾರಿಗಳು ಕೂಡ ಸಂಚಾರಿ ಪೊಲೀಸ್ ಅಧಿಕಾರಿಗಳ ಜೊತೆಗಿದ್ದು ಕಾರ್ಯ ನಿರ್ವಹಿಸಲಿದ್ದಾರೆ. ಈಗಾಗಲೆ ಎಲ್ಲೆಲ್ಲಿ ಬ್ಲಾಕ್ ಸ್ಪಾಟ್‌ಗಳೆಂದು ಗುರುತಿಸಲಾಗಿದ್ಯೋ ಅಲ್ಲೆಲ್ಲ ಮೂರು ತಿಂಗಳಿಗೊಮ್ಮೆ ಮತ್ತೆ ಸರ್ವೇ ನಡೆಸಲಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:14 am, Thu, 24 August 23