ಕೊಪ್ಪಳ: ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಲ್ಲಿರುವ ಹುಲಿಗೆಮ್ಮ ದೇಗುಲಕ್ಕೆ ಕೇಂದ್ರ ಸಚಿವ ನಾರಾಯಣಸ್ವಾಮಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು. ಕೊಪ್ಪಳ ಜಿಲ್ಲಾ ಪ್ರವಾಸದಲ್ಲಿರುವ ಸಚಿವ ನಾರಾಯಣಸ್ವಾಮಿಗೆ ಸ್ಥಳೀಯ ನಾಯಕರು ಸಾಥ್ ನೀಡಿದರು. ಈ ವೇಳೆ, ಹುಲಿಗೆಮ್ಮ ದೇವಸ್ಥಾನದ ಬಳಿ ಸುದ್ದಿಗಾರರೊಂದಿಗೆ ಮಾತಮಾಡಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ನಾರಾಯಣಸ್ವಾಮಿ ಆರ್ಟಿಕಲ್ 370 ತೆಗೆಯೋಕೆ ಆಗಲ್ಲ ಎಂದು ಅನೇಕ ತಜ್ಞರು ದಾರಿ ತಪ್ಪಿಸಿದ್ದರು. ಆದ್ರೆ ನಮ್ಮ ಸರ್ಕಾರ ಆರ್ಟಿಕಲ್ 370 ತಗೆದು ಹಾಕ್ತು. ನಾವು ಯಾವ ಸಮಾಜವನ್ನೂ ತೆಗೆದುಹಾಕಲ್ಲ, ಯಾರಿಗೂ ತೊಂದರೆ ಆಗದ ಹಾಗೆ ನಮ್ಮ ಸರ್ಕಾರದ ಅವಧಿಯಲ್ಲಿಯೇ ಸದಾಶಿವ ಆಯೋಗ ಜಾರಿ ಮಾಡ್ತೇವೆ ಎಂದು ಪುನರ್ ಭರವಸೆ ನೀಡಿದರು.
ಇನ್ನು ರಾಜ್ಯದಲ್ಲಿ ಮುಂದಿನ ಶನಿವಾರ ನಡೆಯಲಿರುವ ಬೈ ಎಲೆಕ್ಷನ್ಗಳಲ್ಲಿ ಹಾನಗಲ್ ಮತ್ತು ಸಿಂದಗಿಯಲ್ಲಿ ನಾವು ಗೆಲ್ತೀವಿ. ಮೋದಿ ಅವರ ದೇಶಭಕ್ತಿ, ಆಡಳಿತ ವೈಖರಿ ನಮ್ಮ ಗೆಲುವಿಗೆ ಕಾರಣವಾಗಲಿದೆ. ಯಾರ ನಿರೀಕ್ಷೆಗಳನ್ನೂ ಹುಸಿ ಮಾಡದ ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಬೊಮ್ಮಾಯಿ ಹೋಗ್ತಿದಾರೆ. ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಯಾರು ಹೋಗ್ತಾರೋ ಅವರಿಗೆ ಜಯ ಕಟ್ಟಿಟ್ಟಬುತ್ತಿ ಎಂದು ನಾರಾಯಣಸ್ವಾಮಿ ಹೇಳಿದರು.
ಇದೇ ವೇಳೆ, ಎರಡು ಪ್ರತಿಪಕ್ಷಗಳು RSS ವಿರುದ್ಧ ಮಾತಾಡಿದ್ದು ಕಪ್ಪುಚುಕ್ಕೆ ಇಟ್ಟಿದ್ದಾರೆ. ಅವರಿಗೆ ಮುಂದೆ ಜನ ಪಾಠ ಕಲಿಸ್ತಾರೆ. ಜೆ.ಡಿ.ಎಸ್ ಹಾಗೂ ಕಾಂಗ್ರೆಸ್ ಧರ್ಮ ಇಬ್ಭಾಗ ಮಾಡೋ ಕೆಲಸ ಮಾಡ್ತಿವೆ ಎಂದು ನಾರಾಯಣಸ್ವಾಮಿ ಹೇಳಿದರು. ನಾನು ಸಂಘ ಪರಿವಾರದಿಂದ ಬಂದವನು. ನನ್ನಲ್ಲಿ ಶಿಸ್ತು ಇದೆ. ವೈಯಕ್ತಿಕ ವಿಚಾರದಲ್ಲಿ ರಾಜಕಾರಣ ಮಾಡೋದು ಯಾರಿಗೂ ಶೋಭೆ ತರೋದಿಲ್ಲಎಂದು ಕೇಂದ್ರ ಸಚಿವ ನಾರಾಯಣ ಸ್ವಾಮಿ ಮಾರ್ಮಿಕವಾಗಿ ಹೇಳಿದರು.
Also Read:
ಸದಾಶಿವ ವರದಿ ಜಾರಿ ವಿಚಾರ: ಡಿ ಕೆ ಶಿವಕುಮಾರ್ ವಿರುದ್ಧ ಧಿಕ್ಕಾರ ಕೂಗಿದ ಮಾದಿಗ ಮಹಾಸಭಾ ಕಾರ್ಯಕರ್ತರು
ಸಾಂಸ್ಕೃತಿಕ ರಾಜಧಾನಿಯಲ್ಲಿ ಇದೆಂತಾ ಅನಿಷ್ಟ ಪದ್ಧತಿ?|Mysore Family Bahiskara|TV9 Kannada
(will implement sadashiva commission report says union minister a narayanaswamy in koppal)
Published On - 10:42 am, Wed, 27 October 21