ಮನನೊಂದ ಯುವತಿಯಿಂದ ಆತ್ಮಹತ್ಯೆಗೆ ಯತ್ನ, 17ನೇ ಮಹಡಿಯಿಂದ ಬೀಳ್ತಿದ್ದಾಕೆಯ ರಕ್ಷಣೆ

|

Updated on: Apr 26, 2020 | 7:45 AM

ಆನೇಕಲ್: ಮನನೊಂದು 17ನೇ ಮಹಡಿಯಿಂದ ಸಾಯಲು ಹೊರಟಿದ್ದ ಯುವತಿಯನ್ನು ಅಗ್ನಿಶಾಮಕ ಸಿಬ್ಬಂದಿ ಬಚಾವ್ ಮಾಡಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಬಳಿ ನಡೆದಿದೆ. ಏಪ್ರಿಲ್ 24ರಂದು ಶುಕ್ರವಾರ ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದೆಹಲಿ ಮೂಲದ ಶುಭ ಎಂಬ ಯುವತಿ ತಾಯಿಯ ವರ್ಷದ ಕಾರ್ಯಕ್ಕಾಗಿ ಲಾಕ್​ಡೌನ್​ಗೂ ಮುನ್ನ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಪ್ರೆಸ್ಟೀಜ್‌ ಸನ್‌ರೈಸ್ ಅಪಾರ್ಟೆಂಟ್​ನ ತನ್ನ ಸಂಬಂಧಿಕರ ಮನೆಗೆ ಬಂದಿದ್ದಳು. ಲಾಕ್​ಡೌನ್ ಆದ ಹಿನ್ನೆಲೆಯಲ್ಲಿ ತನ್ನ ಊರಿಗೂ ಹೋಗಲಾರದೆ ಮನನೊಂದಿದ್ದಾಳೆ. ಅಲ್ಲದೆ ಕೆಲ ವರ್ಷಗಳ […]

ಮನನೊಂದ ಯುವತಿಯಿಂದ ಆತ್ಮಹತ್ಯೆಗೆ ಯತ್ನ, 17ನೇ ಮಹಡಿಯಿಂದ ಬೀಳ್ತಿದ್ದಾಕೆಯ ರಕ್ಷಣೆ
Follow us on

ಆನೇಕಲ್: ಮನನೊಂದು 17ನೇ ಮಹಡಿಯಿಂದ ಸಾಯಲು ಹೊರಟಿದ್ದ ಯುವತಿಯನ್ನು ಅಗ್ನಿಶಾಮಕ ಸಿಬ್ಬಂದಿ ಬಚಾವ್ ಮಾಡಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಬಳಿ ನಡೆದಿದೆ. ಏಪ್ರಿಲ್ 24ರಂದು ಶುಕ್ರವಾರ ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ದೆಹಲಿ ಮೂಲದ ಶುಭ ಎಂಬ ಯುವತಿ ತಾಯಿಯ ವರ್ಷದ ಕಾರ್ಯಕ್ಕಾಗಿ ಲಾಕ್​ಡೌನ್​ಗೂ ಮುನ್ನ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಪ್ರೆಸ್ಟೀಜ್‌ ಸನ್‌ರೈಸ್ ಅಪಾರ್ಟೆಂಟ್​ನ ತನ್ನ ಸಂಬಂಧಿಕರ ಮನೆಗೆ ಬಂದಿದ್ದಳು. ಲಾಕ್​ಡೌನ್ ಆದ ಹಿನ್ನೆಲೆಯಲ್ಲಿ ತನ್ನ ಊರಿಗೂ ಹೋಗಲಾರದೆ ಮನನೊಂದಿದ್ದಾಳೆ. ಅಲ್ಲದೆ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದ ತಾಯಿಯ ನೆನಪು ಆಕೆಗೆ ಕಾಡುತ್ತಿತ್ತು. ಹೀಗಾಗಿ ಮೆಂಟಲಿ ಅಪ್​ಸೆಟ್‌ ಆಗಿದ್ದವಳು ಸಾಯಲು ಮುಂದಾಗಿದ್ದಾಳೆ.

ಅಪಾರ್ಟ್ಮೆಂಟ್​ನ 17ನೇ ಮಹಡಿಗೆ ಹೋಗಿದ್ದಾಳೆ. ನಂತರ ಭಯವಾಗಿ ಕಿಟಕಿಯ ಕೆಳಭಾಗದ ಛಾವಣಿ ಮೇಲೆ ಹೆದರಿ ಕುಳಿತುಕೊಂಡಿದ್ದಾರೆ. ಇದನ್ನು ಗಮನಿಸಿದ ಅಪಾರ್ಟ್ಮೆಂಟ್​ನ ಅಸೋಸಿಯೇಷನ್ ವ್ಯಕ್ತಿ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ನಂತರ ಅಗ್ನಿಶಾಮಕ ಸಿಬ್ಬಂದಿ ತಾಳ್ಮೆಯಿಂದ ಯುವತಿಗೆ ಬುದ್ಧಿ ಹೇಳಿ ರಕ್ಷಿಸಿದ್ದಾರೆ. ಯುವತಿಯನ್ನು ರಕ್ಷಿಸುವಲ್ಲಿ‌ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದು, ರಕ್ಷಣಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.