ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮೃತ್ಯುಕೇಕೆ ಹಾಕುತ್ತಿದೆ. ನಿನ್ನೆ ಮೂವರನ್ನ ಬಲಿ ಪಡೆದು ಅಟ್ಟಹಾಸ ಮೆರೆದಿದೆ. ಆದ್ರೆ ಮೃತಪಟ್ಟ ಮೂವರು ಕೂಡಾ ಬೆಂಗಳೂರಿನವರೇ ಅನ್ನೋದೆ ಭಯಾನಕ ವಿಷ್ಯ. ಆದ್ರೀಗ ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಶಂಕಿತ ವ್ಯಕ್ತಿ ಬಲಿಯಾಗಿದ್ದಾರೆ.
ಕಳೆದ 10 ದಿನಗಳಿಂದ ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಚಾಮರಾಜಪೇಟೆಯ ಸುಮಾರು 57 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಕೋನೇನ ಅಗ್ರಹಾರ ಮಾರುಕಟ್ಟೆಯಲ್ಲಿ ಈತ ಕೆಲಸ ಮಾಡುತ್ತಿದ್ದ. ನಿನ್ನೆ ತಡರಾತ್ರಿ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ಮೃತನ ಗಂಟಲು ದ್ರವ ಪಡೆದು ಕೊವಿಡ್ ಟೆಸ್ಟ್‌ಗೆ ವೈದ್ಯರು ರವಾನಿಸಿದ್ದಾರೆ.
ಇನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮತ್ತೊಬ್ಬ ಕೊರೊನಾ ಶಂಕಿತ ಸಾವು ಸಾವಿಗೀಡಾಗಿದ್ದಾರೆ. ಡಯಾಲಿಸಿಸ್ನಿಂದ ಬಳಲುತ್ತಿದ್ದ 65 ವರ್ಷದ ವೃದ್ಧ ರಾಜೀವ್‌ಗಾಂಧಿ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಆಗಿದ್ರು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.