ಚಿತ್ರದುರ್ಗಕ್ಕೂ ನಿಜಾಮುದ್ದೀನ್ ನಂಜು! ಮೂವರಿಂದ 33 ಮಂದಿಗೆ ಹಬ್ಬುವ ಭೀತಿ

|

Updated on: May 08, 2020 | 4:23 PM

ಚಿತ್ರದುರ್ಗ: ಗುಜರಾತ್​ನ ಅಹ್ಮದಾಬಾದ್​ನಿಂದ ಜಿಲ್ಲೆಗೆ ಬಂದಿರುವ ಮೂವರು ತಬ್ಲೀಗ್​ಗಳಿಗೆ ಕೊರೊನಾ ಸೋಂಕು ಅಂಟಿಕೊಂಡಿದೆ ಎಂದು ಟಿವಿ9ಗೆ ಚಿತ್ರದುರ್ಗ ಡಿಹೆಚ್ಒ ಡಾ.ಪಾಲಾಕ್ಷ ಮಾಹಿತಿ ನೀಡಿದ್ದಾರೆ. ಗಮನಾರ್ಹವೆಂದ್ರೆ ಇದುವರೆಗೂ ಜಿಲ್ಲೆಯಲ್ಲಿ ಬೇರೆ ಯಾವುದೇ ಕೊರೊನಾ ಸೋಂಕಿತರು ಕಂಡುಬಂದಿರಲಿಲ್ಲ. ಮೇ 5ರಂದು ಗುಜರಾತ್​ನಿಂದ 15 ತಬ್ಲೀಗ್​ಗಳು ವಾಪಸ್ ಬಂದಿದ್ದರು. ಆ ಪೈಕಿ ನಾಲ್ವರಿಗೆ ಗುಜರಾತ್​ನಲ್ಲಿದ್ದಾಗಲೇ ಕೊರೊನಾ ಸೋಂಕು ತಗುಲಿದೆ. ಆದ್ರೆ ಗುಣಮುಖರಾದ ಬಳಿಕ ಚಿತ್ರದುರ್ಗಕ್ಕೆ ವಾಪಸಾಗಿದ್ದರು. ಇದೀಗ ನಾಲ್ವರ ಪೈಕಿ ಮೂವರಲ್ಲಿ ಮತ್ತೆ ಕೊರೊನಾ ಸೋಂಕು ಪತ್ತೆಯಾಗಿದೆ. ಸದ್ಯ ಇನ್ನುಳಿದ 12 […]

ಚಿತ್ರದುರ್ಗಕ್ಕೂ ನಿಜಾಮುದ್ದೀನ್ ನಂಜು! ಮೂವರಿಂದ 33 ಮಂದಿಗೆ ಹಬ್ಬುವ ಭೀತಿ
Follow us on

ಚಿತ್ರದುರ್ಗ: ಗುಜರಾತ್​ನ ಅಹ್ಮದಾಬಾದ್​ನಿಂದ ಜಿಲ್ಲೆಗೆ ಬಂದಿರುವ ಮೂವರು ತಬ್ಲೀಗ್​ಗಳಿಗೆ ಕೊರೊನಾ ಸೋಂಕು ಅಂಟಿಕೊಂಡಿದೆ ಎಂದು ಟಿವಿ9ಗೆ ಚಿತ್ರದುರ್ಗ ಡಿಹೆಚ್ಒ ಡಾ.ಪಾಲಾಕ್ಷ ಮಾಹಿತಿ ನೀಡಿದ್ದಾರೆ. ಗಮನಾರ್ಹವೆಂದ್ರೆ ಇದುವರೆಗೂ ಜಿಲ್ಲೆಯಲ್ಲಿ ಬೇರೆ ಯಾವುದೇ ಕೊರೊನಾ ಸೋಂಕಿತರು ಕಂಡುಬಂದಿರಲಿಲ್ಲ.

ಮೇ 5ರಂದು ಗುಜರಾತ್​ನಿಂದ 15 ತಬ್ಲೀಗ್​ಗಳು ವಾಪಸ್ ಬಂದಿದ್ದರು. ಆ ಪೈಕಿ ನಾಲ್ವರಿಗೆ ಗುಜರಾತ್​ನಲ್ಲಿದ್ದಾಗಲೇ ಕೊರೊನಾ ಸೋಂಕು ತಗುಲಿದೆ. ಆದ್ರೆ ಗುಣಮುಖರಾದ ಬಳಿಕ ಚಿತ್ರದುರ್ಗಕ್ಕೆ ವಾಪಸಾಗಿದ್ದರು. ಇದೀಗ ನಾಲ್ವರ ಪೈಕಿ ಮೂವರಲ್ಲಿ ಮತ್ತೆ ಕೊರೊನಾ ಸೋಂಕು ಪತ್ತೆಯಾಗಿದೆ. ಸದ್ಯ ಇನ್ನುಳಿದ 12 ಜನರ ಕೊರೊನಾ ವರದಿ ನೆಗೆಟಿವ್ ಇದೆ ಎಂದು ಡಾ.ಪಾಲಾಕ್ಷ ತಿಳಿಸಿದ್ದಾರೆ.

ತುಮಕೂರಿನ 18 ಜನರಿಗೂ ಕ್ವಾರಂಟೈನ್!
ಗುಜರಾತ್​ನಿಂದ ಬಂದವರಿಗೆ ತಕ್ಷಣಕ್ಕೆ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತ ಮೂವರನ್ನು ಕೊವಿಡ್ ಆಸ್ಪತ್ರೆಗೆ ಶಿಫ್ಟ್​ ಮಾಡ್ತೇವೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಅಹಮದಾಬಾದ್​ನಿಂದ ಬಸ್​ನಲ್ಲಿ 33 ಜನ ಬಂದಿದ್ದರು. ಚಿತ್ರದುರ್ಗಕ್ಕೆ ಸೇರಿದ 15 ಜನ, ತುಮಕೂರಿನ 18 ಜನ ವಾಪಸ್ ಬಂದಿದ್ದರು. ಬಸ್​ನಲ್ಲಿ ಬಂದಿದ್ದ 33 ಜನರಿಗೂ ಕೊರೊನಾ ಸಾಧ್ಯತೆಯಿದೆ ಎಂದು ಹೇಳಲಾಗಿದೆ.



Published On - 4:03 pm, Fri, 8 May 20