ಸಾಂಧಾರ್ಬಿಕ ಚಿತ್ರ
Image Credit source: Times Now
ಮಾನವನ ದೇಹವು ರೋಗದ ತೋಟವಿದ್ದಂತೆ. ಪ್ರತಿಯೊಬ್ಬ ಮಾನವನು ಒಂದಲ್ಲ ಒಂದು ರೋಗದಿಂದ ಬಳಲುತ್ತಿರುತ್ತಾನೆ. ಇತ್ತೀಚಿನ ದಿನಗಳಲ್ಲಿನ ಜೀವನ ಶೈಲಿ, ಆಹಾರ ಪದ್ದತಿ, ವಾತಾವರಣದಲ್ಲಿನ ಏರು ಪೇರು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಇದೆಲ್ಲ ಇದ್ದರೂ ಅದನ್ನು ಸಂಬಾಳಿಸಿಕೊಂಡು ಜೀವನ ಸಾಗಿಸಬೇಕು.
ಕರುಳಿನ ಉರಿಯೂತ (Irritable bowel syndrome) ದೊಡ್ಡ ಕರುಳಿನ ಒಂದು ರೋಗವಾಗಿದೆ. ಈ ರೋಗವು ದೈನಂದಿನ ಜೀವನಶೈಲಿಗೆ ಅತ್ಯಂತ ಅಡ್ಡಿಪಡಿಸುತ್ತದೆ. ಹೊಟ್ಟೆ ಉಬ್ಬುವುದು, ಹೊಟ್ಟೆ ನೋವು, ಮಲಬದ್ಧತೆ, ಅತಿಸಾರ, ಅನಿಲ ಇತ್ಯಾದಿಗಳಂತಹ ಆರೋಗ್ಯ ಪರಿಸ್ಥಿತಿಗಳಿಗೆ ಕಾರಣವಾಗುತ್ತದೆ.
ಇದನ್ನು ಓದಿ: ಸ್ನೇಹಾ ರೆಡ್ಡಿ ಜತೆ ಲಂಡನ್ನಲ್ಲಿ ಅಲ್ಲು ಅರ್ಜುನ್ ಹಾಲಿಡೇ; ಹೇಗಿದೆ ನೋಡಿ ಸ್ಟೈಲಿಶ್ ಸ್ಟಾರ್ ಮಕ್ಕಳ ಪೋಸ್
ಕರುಳಿನ ಉರಿಯೂತಕ್ಕೆ ಕಾರಣವಾಗುವ ಅನಾರೋಗ್ಯಕರ ಅಭ್ಯಾಸಗಳು:
- ನಿರಂತರವಾಗಿ ಒತ್ತಡಕ್ಕೆ ಒಳಗಾಗುವುದು:
ಒತ್ತಡವು ನಿಮ್ಮ ಕರುಳಿನ ಆರೋಗ್ಯಕ್ಕೆ ಸಂಬಂಧಿಸಿದೆ. ಒತ್ತಡದಲ್ಲಿ ನಿಮ್ಮ ಹೊಟ್ಟೆಯನ್ನು ಅಸಮರ್ಪಕವಾಗಿ ನಿರ್ವಹಣೆ ಮಾಡುವುದರಿಂದ ಇದು ಕರುಳಿನ ಉರಿಯೂತಕ್ಕೆ ಕಾರಣವಾಗುತ್ತದೆ.
- ಸಾಕಷ್ಟು ನೀರು ಕುಡಿಯುವುದಿಲ್ಲ:
ಕರುಳನ್ನು ಆರೋಗ್ಯವಾಗಿ ಇಡಲು ದಿನವಿಡೀ ಸಾಕಷ್ಟು ನೀರು ಕುಡಿಯುವುದು ಮುಖ್ಯವಾಗಿದೆ. ಹೀಗೆ ಮಾಡದಿದ್ದರೆ ಕರುಳಿನ ಉರಿಯೂತ ಸಂಭವಿಸುತ್ತದೆ.
- ಅತಿಯಾಗಿ ಮಸಾಲೆಯುಕ್ತ ಆಹಾರ ಸೇವನೆ :
ನೀವು ಅತಿಯಾಗಿ ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸುವುದರಿಂದಲೂ ಕರುಳಿನ ಉರಿಯೂತ ಸಂಭವಿಸಬಹುದು. ಹೀಗಾಗಿ ಅತಿಯಾಗಿ ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸಬೇಡಿ.
- ಉತ್ತಮದವಾದ ದಿನಚರಿ ಇಲ್ಲದಿರುವುದು:
ಕರುಳಿನ ಉರಿಯುತಕ್ಕೆ ಉತ್ತಮ ದಿನಚರಿ ಇಲ್ಲದಿರುವುದು ಕೂಡ ಕಾರಣವಾಗುತ್ತದೆ. ಹೀಗಾಗಿ ನೀವು ಉತ್ತಮ ದಿನಚರಿ ರೂಪಸಿಕೊಳ್ಳಿ. ಅದು ಪ್ರತಿನಿತ್ಯ ಸ್ಥಿರವಾದ ವ್ಯಾಯಾಮ ಮತ್ತು ಆಹಾರ ಕ್ರಮವನ್ನು ಅನುಸರಿಸುವುದು ಮುಖ್ಯವಾಗಿದೆ. ನೀವು ದೈಹಿಕವಾಗಿ ಸಕ್ರಿಯರಾಗಿರುತ್ತೀರಿ ಮತ್ತು ನಿಮ್ಮ ಆಹಾರದಲ್ಲಿ ಫೈಬರ್ ಸಮೃದ್ಧವಾಗಿರುವ ಮತ್ತು ಪೌಷ್ಟಿಕಾಂಶ-ಪ್ಯಾಕ್ಡ್ ಆಹಾರವನ್ನು ಸೇವಿಸಿ.
- ಅತಿಯಾದ ಸಕ್ಕರೆ ಮತ್ತು ಕಾರ್ಬೊನೇಟೆಡ್ ಪಾನೀಯಗಳು:
ಕರುಳಿನ ಉರಿಯೂತ ನಿಂದ ಬಳಲುತ್ತಿರುವಾಗ, ನಿಮ್ಮ ಪಾನೀಯವನ್ನು ಎಚ್ಚರಿಕೆಯಿಂದ ಆರಿಸುವುದು ಮುಖ್ಯ. ಕಾರ್ಬೊನೇಟೆಡ್ ಮತ್ತು ಸಕ್ಕರೆ ತುಂಬಿದ ಪಾನೀಯಗಳು ಕೂಡ ಕರುಳಿನ ಉರಿಯೂತಕ್ಕೆ ಕಾರಣವಾಗಬಹುದು.ಇದನ್ನು ಓದಿ: RR vs RCB Qualifier 2: ಇಂದಿನ ಪಂದ್ಯದಲ್ಲಿ DK ಆಡ್ತಾರಾ? ಆಡಲ್ವಾ?
ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಪರ ವೈದ್ಯಕೀಯ ಸಲಹೆಯಾಗಿ ಅರ್ಥೈಸಿಕೊಳ್ಳಬಾರದು. ಯಾವುದೇ ಫಿಟ್‌ನೆಸ್ ಕಾರ್ಯಕ್ರಮವನ್ನು ಪ್ರಾರಂಭಿಸುವ ಮೊದಲು ಅಥವಾ ನಿಮ್ಮ ಆಹಾರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಮೊದಲು ಯಾವಾಗಲೂ ನಿಮ್ಮ ವೈದ್ಯರನ್ನು ಅಥವಾ ಆಹಾರ ತಜ್ಞರನ್ನು ಸಂಪರ್ಕಿಸಿ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ