
ಬೆಂಗಳೂರು: ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಯ್ಡು ಪರ ನಟಿ ಖುಷ್ಬೂ ಮತಯಾಚನೆ ಮಾಡಿದರು. ಕೂಲಿನಗರದಲ್ಲಿ ತಮಿಳಿನಲ್ಲಿ ನಟಿ ಖುಷ್ಬೂ ಮತಯಾಚನೆ ಮಾಡಿದರು.
‘ಖುಷ್ಬೂ ನನಗೆ ಒಳ್ಳೆಯದನ್ನು ಬಯಸಿಕೊಂಡು ಬರುತ್ತಿರುವ ಅಮ್ಮ’
ಇತ್ತ, ಖುಷ್ಬೂ ನನ್ನ ಪರ ಮತಯಾಚನೆಗೆ ಬಂದಿದ್ದಾರೆ. ನಿಮ್ಮ ಪರವಾಗಿ ಖುಷ್ಬೂ ಅವರಿಗೆ ಧನ್ಯವಾದ ತಿಳಿಸ್ತೇನೆ. ಖುಷ್ಬೂ ನನಗೆ ಒಳ್ಳೆಯದನ್ನು ಬಯಸಿಕೊಂಡು ಬರುತ್ತಿರುವ ಅಮ್ಮ. 22 ವರ್ಷಗಳಿಂದ ಖುಷ್ಬೂ ಅಮ್ಮನವರ ಜೊತೆ ಬಾಂಧವ್ಯ ಇದೆ. ನನ್ನ ಮೊದಲ ಸಿನಿಮಾ ಆಂಟಿ ಪ್ರೀತ್ಸೆಗೆ ಅವರು ನಾಯಕಿಯಾಗಿದ್ರು. ಆಗಿನಿಂದ ಇಲ್ಲಿಯವರೆಗೂ ಅವರ ಜೊತೆ ಉತ್ತಮ ಒಡನಾಟ ಇದೆ. ನಿಮ್ಮ ಮುನಿರತ್ನರನ್ನು ಮೂರನೇ ಬಾರಿಗೆ ಗೆಲ್ಲಿಸ್ತೀರೆಂಬ ವಿಶ್ವಾಸ ಇದೆ ಎಂದು ಬಿಜೆಪಿ ಅಭ್ಯರ್ಥಿ ಮತಯಾಚನೆ ಮಾಡಿದರು.