ಮಣ್ಣಲ್ಲಿ ಮಣ್ಣಾದ ​​ನಟ ಚಿರಂಜೀವಿ ಸರ್ಜಾ

ಬೆಂಗಳೂರು: ಚಂದನವನದಲ್ಲಿ ಛಾಪು ಮೂಡಿಸಿದ್ದ ನಟ ಚಿರಂಜೀವಿ ಸರ್ಜಾ ಮಣ್ಣಲ್ಲಿ ಮಣ್ಣಾಗಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ನೆಲಗುಳಿ ಗ್ರಾಮದ ಬಳಿ ಸಹೋದರ ಧ್ರುವ ಸರ್ಜಾ ಫಾರ್ಮ್‌ಹೌಸ್​ನಲ್ಲಿ ಚಿರು ಅಂತ್ಯಕ್ರಿಯೆ ನೆರವೇರಿದೆ. ಶೋಕಸಾಗರದಲ್ಲಿ ಚಿರು ಸರ್ಜಾ ಕುಟುಂಬಸ್ಥರು ಮುಳುಗಿದ್ದಾರೆ. ಚಿರಂಜೀವಿ ಸರ್ಜಾ ಅಂತ್ಯಕ್ರಿಯೆಯಲ್ಲಿ ಚಿರು ಕುಟುಂಬಸ್ಥರು, ಚಿತ್ರರಂಗದ ಗಣ್ಯರು ಸೇರಿದಂತೆ ನೂರಾರು ಅಭಿಮಾನಿಗಳು ಭಾಗಿಯಾಗಿದ್ದರು. ಹೃದಯಾಘಾತದಿಂದ ನಿನ್ನೆ ಚಿರಂಜೀವಿ ಸರ್ಜಾ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅಗಲಿದ ನಾಯಕ ನಟನಿಗೆ ಕುಟುಂಬಸ್ಥರು, ಅಭಿಮಾನಿಗಳು, ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಕಂಬನಿ […]

ಮಣ್ಣಲ್ಲಿ ಮಣ್ಣಾದ ​​ನಟ ಚಿರಂಜೀವಿ ಸರ್ಜಾ
Edited By:

Updated on: Jun 08, 2020 | 7:43 PM

ಬೆಂಗಳೂರು: ಚಂದನವನದಲ್ಲಿ ಛಾಪು ಮೂಡಿಸಿದ್ದ ನಟ ಚಿರಂಜೀವಿ ಸರ್ಜಾ ಮಣ್ಣಲ್ಲಿ ಮಣ್ಣಾಗಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ನೆಲಗುಳಿ ಗ್ರಾಮದ ಬಳಿ ಸಹೋದರ ಧ್ರುವ ಸರ್ಜಾ ಫಾರ್ಮ್‌ಹೌಸ್​ನಲ್ಲಿ ಚಿರು ಅಂತ್ಯಕ್ರಿಯೆ ನೆರವೇರಿದೆ.

ಶೋಕಸಾಗರದಲ್ಲಿ ಚಿರು ಸರ್ಜಾ ಕುಟುಂಬಸ್ಥರು ಮುಳುಗಿದ್ದಾರೆ. ಚಿರಂಜೀವಿ ಸರ್ಜಾ ಅಂತ್ಯಕ್ರಿಯೆಯಲ್ಲಿ ಚಿರು ಕುಟುಂಬಸ್ಥರು, ಚಿತ್ರರಂಗದ ಗಣ್ಯರು ಸೇರಿದಂತೆ ನೂರಾರು ಅಭಿಮಾನಿಗಳು ಭಾಗಿಯಾಗಿದ್ದರು. ಹೃದಯಾಘಾತದಿಂದ ನಿನ್ನೆ ಚಿರಂಜೀವಿ ಸರ್ಜಾ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅಗಲಿದ ನಾಯಕ ನಟನಿಗೆ ಕುಟುಂಬಸ್ಥರು, ಅಭಿಮಾನಿಗಳು, ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ.

 

Published On - 4:44 pm, Mon, 8 June 20