ಸಂಸದ ಖೂಬಾಗೆ ಕೊರೊನಾ, ಬೀದರ್ ತೋಟದ ಮನೆಗೆ ಹೋದ್ರೂ ಖೇಣಿ ಕುಟುಂಬಕ್ಕೆ ಸೋಂಕು

| Updated By: ಸಾಧು ಶ್ರೀನಾಥ್​

Updated on: Jul 15, 2020 | 3:37 PM

ಬೀದರ್: ಕೊರೊನಾ ಮಾಹಾ ಮಾರಿ ಯಾರನ್ನೂ ಬಿಡುತ್ತಿಲ್ಲ. ಸಂಪರ್ಕಕ್ಕೆ ಬಂದವರೆನ್ನೆಲ್ಲ ಅಪ್ಪಿಕೊಂಡು ಬಿಡುತ್ತಿದೆ. ಈಗ ಬೀದರ್ ಸಂಸದ ಭಗವಂತ ಖೂಬಾಗೂ ವಕ್ಕರಿಸಿದೆ. ಹೌದು ಇದುವರೆಗೆ ಬೀದರ್ ಜಿಲ್ಲೆಯಲ್ಲಿ ವೈದ್ಯರು, ನರ್ಸ್ ಗಳು ಪೊಲೀಸ್ ಇಲಾಖೆ ಸಿಬ್ಬಂದಿಯನ್ನ ಬೆಂಬಿಡದೆ ಕಾಡುತ್ತಿದ್ದ ಕೋವಿಡ್-19 ಸೋಂಕು ಈಗ ಬೀದರ್ ಸಂಸದ ಭಗವಂತ ಖೂಬಾಗೂ ತಗಲಾಕ್ಕೊಂಡಿದೆ. ಆದ್ರೆ ಖೂಬಾಗೆ ಯಾವುದೇ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಆದರೂ ಗಂಟಲು ದ್ರವ ಪರೀಕ್ಷೆಯಲ್ಲಿ ಪಾಸಿಟಿವ್ ಇರೋದು ದೃಢಪಟ್ಟಿದೆ. ಸೋಂಕು ಇರೋದು ದೃಢಪಡುತ್ತಿದ್ದಂತೆ ಶಿವನಗರದಲ್ಲಿರುವ ತಮ್ಮ […]

ಸಂಸದ ಖೂಬಾಗೆ ಕೊರೊನಾ, ಬೀದರ್ ತೋಟದ ಮನೆಗೆ ಹೋದ್ರೂ ಖೇಣಿ ಕುಟುಂಬಕ್ಕೆ ಸೋಂಕು
Follow us on

ಬೀದರ್: ಕೊರೊನಾ ಮಾಹಾ ಮಾರಿ ಯಾರನ್ನೂ ಬಿಡುತ್ತಿಲ್ಲ. ಸಂಪರ್ಕಕ್ಕೆ ಬಂದವರೆನ್ನೆಲ್ಲ ಅಪ್ಪಿಕೊಂಡು ಬಿಡುತ್ತಿದೆ. ಈಗ ಬೀದರ್ ಸಂಸದ ಭಗವಂತ ಖೂಬಾಗೂ ವಕ್ಕರಿಸಿದೆ.

ಹೌದು ಇದುವರೆಗೆ ಬೀದರ್ ಜಿಲ್ಲೆಯಲ್ಲಿ ವೈದ್ಯರು, ನರ್ಸ್ ಗಳು ಪೊಲೀಸ್ ಇಲಾಖೆ ಸಿಬ್ಬಂದಿಯನ್ನ ಬೆಂಬಿಡದೆ ಕಾಡುತ್ತಿದ್ದ ಕೋವಿಡ್-19 ಸೋಂಕು ಈಗ ಬೀದರ್ ಸಂಸದ ಭಗವಂತ ಖೂಬಾಗೂ ತಗಲಾಕ್ಕೊಂಡಿದೆ. ಆದ್ರೆ ಖೂಬಾಗೆ ಯಾವುದೇ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಆದರೂ ಗಂಟಲು ದ್ರವ ಪರೀಕ್ಷೆಯಲ್ಲಿ ಪಾಸಿಟಿವ್ ಇರೋದು ದೃಢಪಟ್ಟಿದೆ.

ಸೋಂಕು ಇರೋದು ದೃಢಪಡುತ್ತಿದ್ದಂತೆ ಶಿವನಗರದಲ್ಲಿರುವ ತಮ್ಮ ಮನೆಯಲ್ಲಿ ಖೂಬಾಗೆ ಪ್ರತ್ಯೇಕವಾಗಿ ಕ್ವಾರಂಟೈನ್ ಆಗಿದ್ದಾರೆ. ಖೂಬಾಗೆ ಸೋಂಕು ಇರುವುದು ಖಚಿತವಾಗುತ್ತಿದ್ದಂತೆ ವೈದ್ಯರು ಅವರ ಕುಟುಂಬ ಸದಸ್ಯರಿಗೆ ಕೋವಿಡ್ ಟೆಸ್ಟ್ ಮಾಡುತ್ತಿದ್ದಾರೆ. ಜೊತೆಗೆ ಸಂಸದರೊಂದಿಗೆ ಸಂಪರ್ಕಕ್ಕೆ ಬಂದಿರುವವರ  ಪತ್ತೆ ಕಾರ್ಯ ಆರಂಭ ಆಗಿದೆ.

ಇನ್ನೊಂದೆಡೆ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಸಹೋದರ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ಸಂಜಯ್ ಖೇಣಿ ಅವರ ಮಡದಿ ಹಾಗೂ ಪುತ್ರನಿಗೂ ಕೂಡಾ ಕೋವಿಡ್ ಸೋಂಕು ತಗುಲಿರೋದು ದೃಢಪಟ್ಟಿದೆ. ಹೀಗಾಗಿ ಅವರಿಗೆ ಕಲಬುರಗಿಯ ಇಎಸ್ಐ ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಜಯ್ ಖೇಣಿ ಹಾಗೂ ಅವರ ಕುಟುಂಬ ಅವರ ತೋಟದ ಮನೆಗೆ ಶಿಫ್ಟ್  ಆಗಿತ್ತು. ಆದರೂ ಅವರ ಕುಟುಂಬ ಸದಸ್ಯರಿಗೆ ಕೊರೊನಾ ಸೋಂಕು ತಗುಲಿರೋದು ವೈದ್ಯರಿಗೆ ಅಚ್ಚರಿ ತಂದಿದೆ.