Bigg Boss Kannada | ದಿವ್ಯಾ ಸುರೇಶ್​ ಬಗ್ಗೆ ಇದ್ದ ಭಾವನೆಗಳನ್ನು ಸುಟ್ಟು ಹಾಕಿದ್ರಂತೆ ಬ್ರೋ ಗೌಡ!

ದಿವ್ಯಾ ಮೇಲೆ ನನಗೆ ಕ್ರಶ್​ ಆಗಿದೆ ಎಂದು ಬ್ರೋ ಗೌಡ ಹೇಳಿಕೊಂಡಿದ್ದರು. ಈ ವಿಚಾರ ವೀಕೆಂಡ್​ನಲ್ಲೂ ಚರ್ಚೆಗೆ ಬಂದಿತ್ತು. ಇದಾದ ಮರುದಿನ ಅಂದರೆ ಸೋಮವಾರ ಬ್ರೋ ಗೌಡ ತಮ್ಮ ನಿರ್ಧಾರ ಬದಲಿಸಿದ್ದಾರೆ.

Bigg Boss Kannada | ದಿವ್ಯಾ ಸುರೇಶ್​ ಬಗ್ಗೆ ಇದ್ದ ಭಾವನೆಗಳನ್ನು ಸುಟ್ಟು ಹಾಕಿದ್ರಂತೆ ಬ್ರೋ ಗೌಡ!
ದಿವ್ಯಾ-ಬ್ರೋ ಗೌಡ

Updated on: Mar 08, 2021 | 6:00 PM

 ಬಿಗ್​ ಬಾಸ್​ ಮನೆಯಲ್ಲಿ ಅಭ್ಯರ್ಥಿಗಳು ಮೊದಲ ವಾರವನ್ನು ಕಳೆದಿದ್ದಾರೆ. ಕಳಪೆ ಪ್ರದರ್ಶನ ನೀಡಿದ್ದ ಧನುಶ್ರೀ ಎಲಿಮಿನೇಷ್​ ಆಗಿ ಮನೆಯಿಂದ ಹೊರ ಹೋಗಿದ್ದಾರೆ. ಮೊದಲ ವಾರದಲ್ಲಿ ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಇದರಲ್ಲಿ ಹೈಲೈಟ್​ ಆಗಿದ್ದು ಲವ್​​ ಸ್ಟೋರಿ ವಿಚಾರ. ದಿವ್ಯಾ ಮೇಲೆ ಬ್ರೋ ಗೌಡ ಹಾಗೂ ಲ್ಯಾಗ್​ ಮಂಜ ಭಾವನೆ ಹೊಂದಿದ್ದರು ಎನ್ನುವ ವಿಚಾರ ಮೊದಲ ವಾರವೇ ಬಹಿರಂಗವಾಗಿತ್ತು. ಈಗ ದಿವ್ಯಾ ಮೇಲಿದ್ದ ಭಾವನೆಗಳನ್ನು ಬ್ರೋ ಗೌಡ ಸುಟ್ಟು ಹಾಕಿದರಂತೆ!

ದಿವ್ಯಾ ಮೇಲೆ ನನಗೆ ಕ್ರಶ್​ ಆಗಿದೆ ಎಂದು ಬ್ರೋ ಗೌಡ ಹೇಳಿಕೊಂಡಿದ್ದರು. ಈ ವಿಚಾರ ವೀಕೆಂಡ್​ನಲ್ಲೂ ಚರ್ಚೆಗೆ ಬಂದಿತ್ತು. ಇದಾದ ಮರುದಿನ ಅಂದರೆ ಸೋಮವಾರ ಬ್ರೋ ಗೌಡ ತಮ್ಮ ನಿರ್ಧಾರ ಬದಲಿಸಿದ್ದಾರೆ. ದಿವ್ಯಾ ಜತೆ ಕೇವಲ ಫ್ರೆಂಡ್​ಶಿಪ್​ ಮುಂದುವರಿಸುವ ನಿರ್ಧಾರಕ್ಕೆ ಬಂದಿದ್ದಾರೆ! ಈ ಬಗ್ಗೆ ಖುದ್ದು ಬ್ರೋ ಗೌಡ ಹೇಳಿಕೊಂಡಿದ್ದಾರೆ.

ಕಲರ್ಸ್​ ಕನ್ನಡ ವಾಹಿನಿಯವರು ಇಂದು ಪ್ರೋಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ದಿವ್ಯಾ ಉರುಡುಗ, ದಿವ್ಯಾ ಸುರೇಶ್​ ಹಾಗೂ ಬ್ರೋ ಗೌಡ ಕೂತಿದ್ದರು. ದಿವ್ಯಾ ಸುರೇಶ್​ ಮೌನವಾಗಿರುವುದನ್ನು ನೋಡಿದ ದಿವ್ಯಾ ಉರುಡುಗ ಒಂದಷ್ಟು ಬುದ್ಧಿವಾದ ಹೇಳಿದರು. ಬ್ರೋ ಗೌಡ ಜತೆ ಮಾತನಾಡಿ. ಅವರಿಗೆ ನಿಮ್ಮ ಮೇಲೆ ಕ್ರಶ್​​ ಬೇರೆ ಇದೆ. ನೀವು ಮಾತನಾಡಿಲ್ಲ ಎಂದರೆ ಅವರು ಬೇಜಾರ್​ ಮಾಡಿಕೊಳ್ತಾರೆ ಎಂದರು.

ಇದಕ್ಕೆ ಉತ್ತರಿಸಿದ ಬ್ರೋ ಗೌಡ, ದಿವ್ಯಾ ಮೇಲೆ ನನಗೆ ಕ್ರಶ್​ ಇತ್ತು. ಆದರೆ, ಈಗ ಇಲ್ಲ. ಈ ವಿಚಾರವಂತೂ ಸ್ಪಷ್ಟ ಎಂದು ಹೇಳಿದರು. ಈ ಮೂಲಕ ದಿವ್ಯಾ ಬಗ್ಗೆ ಯಾವುದೇ ಭಾವನೆ ಹೊಂದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದರು. ಆಗ, ದಿವ್ಯಾ ಸುರೇಶ್​, ಫ್ರೆಂಡ್ಸ್​ ಎಂದು ಬ್ರೋ ಗೌಡಗೆ ಹ್ಯಾಂಡ್​ ಶೇಕ್​ ಮಾಡಿದರು. ಬ್ರೋ ಗೌಡ ಕೂಡ ಹ್ಯಾಂಡ್​ ಶೇಕ್​ ಮಾಡಿದರು.

ಇದನ್ನೂ ಓದಿ: Bigg Boss Kannada: ಬಿಗ್​ ಬಾಸ್​ನಿಂದ ಧನುಶ್ರೀ ಔಟ್​! ಎಲಿಮಿನೇಟ್​ ಆಗಿದ್ದಕ್ಕೆ ಇಲ್ಲಿದೆ ಬಲವಾದ ಕಾರಣ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us