ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ಬಿಲ್ಲೇನಹಳ್ಳಿ ಗ್ರಾಮದಲ್ಲಿ ದೇವರಿಗೆ ಮೊದಲ ಪೂಜೆ ಸಲ್ಲಿಸುವ ವಿಚಾರಕ್ಕೆ ಜೆಡಿಎಸ್-ಬಿಜೆಪಿ ಮುಖಂಡರ ಮಧ್ಯೆ ಗಲಾಟೆಯಾಗಿದೆ. ಗವಿರಂಗನಾಥಸ್ವಾಮಿಯ ರಥೋತ್ಸವ ವೇಳೆ ಪೂಜೆ ವಿಚಾರಕ್ಕೆ ದೇವಾಲಯದಲ್ಲೇ ಜಗಳವಾಗಿದೆ.
ಗವಿರಂಗನಾಥಸ್ವಾಮಿಗೆ ಮೊದಲು ನಾನು ಪೂಜೆ ಮಾಡಬೇಕು ಎಂದು ಜೆಡಿಎಸ್ ತಾಲೂಕು ಪಂಚಾಯಿತಿ ಸದಸ್ಯ ರಾಜಹುಲಿ ದಿನೇಶ್ ಹೇಳಿದ್ದಾರೆ. ಈ ಕ್ಷೇತ್ರದ ಶಾಸಕರು ಮೊದಲ ಪೂಜೆ ಮಾಡಬೇಕು ಎಂದು ಬಿಜೆಪಿ ಶಾಸಕ ನಾರಾಯಣಗೌಡ ಹಾಗೂ ಬೆಂಬಲಿಗರು ಗಲಾಟೆ ಮಾಡಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ.
ಜಗಳದ ವೇಳೆ ಮಧ್ಯಪ್ರವೇಶ ಮಾಡಿದ ಪೊಲೀಸರು, ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿಗರನ್ನು ಸಮಾಧಾನ ಪಡಿಸಿ ರಾಜಹುಲಿ ದಿನೇಶ್‌ರನ್ನು ಕರೆದುಕೊಂಡು ಹೋಗಿದ್ದಾರೆ. ಗಲಾಟೆ ನಿಂತ ಬಳಿಕ ಶಾಸಕ ನಾರಾಯಣಗೌಡ ಮೊದಲ ಪೂಜೆ ಸಲ್ಲಿಸಿದ್ದಾರೆ.
Published On - 9:07 am, Fri, 17 January 20