
ಕೋಲಾರ: ರಾತ್ರಿಯೆಲ್ಲಾ ಸುರಿ ಭಾರಿ ಮಳೆಗೆ ಗೋಡೆ ಕುಸಿದು ಬಿದ್ದು ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಪಾತಮುತ್ತಕಪಲ್ಲಿ ಗ್ರಾಮದಲ್ಲಿ ನಡೆದಿದೆ. ಗೋಡೆ ಕುಸಿತದಲ್ಲಿ ಬಾಲಕ ಹರೀಶ್(13) ಸಾವನ್ನಪ್ಪಿದ್ದಾನೆ.
ಇನ್ನು ಅವಘಡದಲ್ಲಿ ಹರೀಶ್ ತಾಯಿ ಆನಂದಮ್ಮಗೆ ಗಾಯಗಳಾಗಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ.