Budget 2021: ಕೃಷಿ ಸೆಸ್‌ನಿಂದ ಗ್ರಾಹಕರಿಗೆ ಯಾವುದೇ ಹೊರೆ ಆಗುವುದಿಲ್ಲ- ನಿರ್ಮಲಾ ಸೀತಾರಾಮನ್​ ಸ್ಪಷ್ಟನೆ

|

Updated on: Feb 01, 2021 | 4:30 PM

ಬಜೆಟ್​ ಮಂಡನೆ ಬಳಿಕ ಇಂದು ಮಧ್ಯಾಹ್ನ ನಿರ್ಮಲಾ ಸೀತಾರಾಮನ್​ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಕೃಷಿ ಸೆಸ್​ನಿಂದ ಪೆಟ್ರೋಲ್​ ಬೆಲೆ ಹೆಚ್ಚಾಗಲಿದೆ ಎನ್ನಲಾಗಿತ್ತು.

Budget 2021: ಕೃಷಿ ಸೆಸ್‌ನಿಂದ ಗ್ರಾಹಕರಿಗೆ ಯಾವುದೇ ಹೊರೆ ಆಗುವುದಿಲ್ಲ- ನಿರ್ಮಲಾ ಸೀತಾರಾಮನ್​ ಸ್ಪಷ್ಟನೆ
ನಿರ್ಮಲಾ ಸೀತಾರಾಮನ್​
Follow us on

ನವದೆಹಲಿ:  ಪೆಟ್ರೋಲ್​ ಹಾಗೂ ಡೀಸೆಲ್​ ಮೇಲೆ ವಿಧಿಸಿರುವ ಕೃಷಿ ಸೆಸ್​ನಿಂದ ಗ್ರಾಹಕರಿಗೆ ಹೊರೆ ಆಗುವುದಿಲ್ಲ ಎಂದು ಕೃಷಿ ಸಚಿವೆ ನಿರ್ಮಲಾ ಸೀತಾರಾಮನ್​ ಸ್ಪಷ್ಟನೆ ನೀಡಿದ್ದಾರೆ.

ಬಜೆಟ್​ ಮಂಡನೆ ಬಳಿಕ ಮಧ್ಯಾಹ್ನ ನಿರ್ಮಲಾ ಸೀತಾರಾಮನ್​ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಕೃಷಿ ಸೆಸ್​ನಿಂದ ಪೆಟ್ರೋಲ್​ ಬೆಲೆ ಹೆಚ್ಚಾಗಲಿದೆ ಎನ್ನಲಾಗಿತ್ತು. ಹೀಗಾಗಿ, ಪೆಟ್ರೋಲ್​ ಬಂಕ್​ಗೆ ಜನರು ಮುಗಿಬಿದ್ದು ಪೆಟ್ರೋಲ್​ ಹಾಕಿಸಿಕೊಳ್ಳಲು ತೆರಳಿದ್ದರು.

ಆರೋಗ್ಯ, ಮೂಲ ಸೌಕರ್ಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಒತ್ತು ನೀಡಿದ್ದೇವೆ. ಕೊವಿಡ್ ಟೆಸ್ಟಿಂಗ್‌ ಲ್ಯಾಬ್‌ ಹೆಚ್ಚಿಸಲು ಆದ್ಯತೆ ನೀಡಿದ್ದೇವೆ. ರಾಜ್ಯ ಮಟ್ಟದಲ್ಲೂ ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿದ್ದೇವೆ ಎಂದರು. ಮೂಲ ಸೌಕರ್ಯಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಿದ್ದೇವೆ. ಕೃಷಿ ಕ್ಷೇತ್ರಕ್ಕೂ ಕೇಂದ್ರ ಬಜೆಟ್‌ನಲ್ಲಿ ಆದ್ಯತೆ ನೀಡಿದ್ದೇವೆ.  ವಿಮಾ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಆದ್ಯತೆ ನೀಡಿದ್ದೇವೆ. ಕೃಷಿ ಮೂಲಸೌಲಭ್ಯಗಳಿಗಾಗಿ 40,000 ಕೋಟಿ ಮೀಸಲು ಇಟ್ಟಿದ್ದೇವೆ ಎಂದು ನಿರ್ಮಲಾ ತಿಳಿಸಿದ್ದಾರೆ.

ಈ ಬಾರಿಯ ಬಜೆಟ್​ ಜನಸಾಮಾನ್ಯರ ಪರವಾಗಿದೆ. ನಾವು ಎಲ್ಲ ಕ್ಷೇತ್ರಗಳ ಮೇಲೂ ಗಮನಹರಿಸಿದ್ದೇವೆ ಎಂದು ನಿರ್ಮಲಾ ಹೇಳಿದ್ದಾರೆ.

Budget 2021 | ಚಿನ್ನ-ಬೆಳ್ಳಿ ಮೇಲೆ ಕಸ್ಟಮ್ಸ್​ ಸುಂಕ ಇಳಿಸಿದ ನಿರ್ಮಲಾ ಸೀತಾರಾಮನ್: ಚಿನ್ನದ ಬೆಲೆ ದಿಢೀರ್ ಇಳಿಕೆ

Published On - 3:44 pm, Mon, 1 February 21