ನೋಡ ನೋಡುತ್ತಿದ್ದಂತೆ ಹೋಟೆಲ್‌ಗೆ ನುಗ್ಗಿದ ಬಸ್‌: ಮೂವರು ಗಂಭೀರ

ಬೆಂಗಳೂರು: ಚಾಲಕನ ನಿಯಂತ್ರಣಕ್ಕೆ ಸಿಗದ ಬಸ್‌ ಒಂದು ಹೋಟೆಲ್‌ಗೆ ನುಗ್ಗಿರುವ ಘಟನೆ ಸದಾಶಿವನಗರದ ವಿನಾಯಕ ಸರ್ಕಲ್ ಬಳಿ ನಡೆದಿದೆ. ಚಾಲಕ ಬಸ್​ನಿಂದ ಇಳಿಯುತ್ತಿದ್ದಂತೆ ವಾಹನ ಚಲಿಸಲು ಆರಂಭಿಸಿತು. ಚಾಲಕ ಓಡಿ ಬಂದು ಹತ್ತಿದ್ರೂ ಬಸ್​ ಆತನ ನಿಯಂತ್ರಣಕ್ಕೆ ಬಾರದೆ ಅಲ್ಲೇ ಇದ್ದ ಹೋಟೆಲ್‌ಗೆ ನುಗ್ಗಿದೆ. ಹೋಟೆಲ್​ಗೆ ಬಸ್​ ಏಕಾಏಕಿ ನುಗ್ಗಿದ ಪರಿಣಾಮ ಮೂವರಿಗೆ ಗಂಭೀರ ಗಾಯಗಳಾಗಿದ್ದು ಚಾಲಕನ ಕಾಲು ಮುರಿದಿದೆ. ಗಾಯಾಳುಗಳಿಗೆ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದಾಶಿವನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೋಡ ನೋಡುತ್ತಿದ್ದಂತೆ ಹೋಟೆಲ್‌ಗೆ ನುಗ್ಗಿದ ಬಸ್‌: ಮೂವರು ಗಂಭೀರ

Updated on: Oct 31, 2020 | 6:56 PM

ಬೆಂಗಳೂರು: ಚಾಲಕನ ನಿಯಂತ್ರಣಕ್ಕೆ ಸಿಗದ ಬಸ್‌ ಒಂದು ಹೋಟೆಲ್‌ಗೆ ನುಗ್ಗಿರುವ ಘಟನೆ ಸದಾಶಿವನಗರದ ವಿನಾಯಕ ಸರ್ಕಲ್ ಬಳಿ ನಡೆದಿದೆ.

ಚಾಲಕ ಬಸ್​ನಿಂದ ಇಳಿಯುತ್ತಿದ್ದಂತೆ ವಾಹನ ಚಲಿಸಲು ಆರಂಭಿಸಿತು. ಚಾಲಕ ಓಡಿ ಬಂದು ಹತ್ತಿದ್ರೂ ಬಸ್​ ಆತನ ನಿಯಂತ್ರಣಕ್ಕೆ ಬಾರದೆ ಅಲ್ಲೇ ಇದ್ದ ಹೋಟೆಲ್‌ಗೆ ನುಗ್ಗಿದೆ. ಹೋಟೆಲ್​ಗೆ ಬಸ್​ ಏಕಾಏಕಿ ನುಗ್ಗಿದ ಪರಿಣಾಮ ಮೂವರಿಗೆ ಗಂಭೀರ ಗಾಯಗಳಾಗಿದ್ದು ಚಾಲಕನ ಕಾಲು ಮುರಿದಿದೆ. ಗಾಯಾಳುಗಳಿಗೆ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದಾಶಿವನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.