ಏಳೆಂಟು ಸಚಿವರು ನಾಳೆ 3.50ಕ್ಕೆ ಪ್ರಮಾಣ ವಚನ ಸ್ವೀಕರಿಸ್ತಾರೆ -ಸಿಎಂ ಬಿ.ಎಸ್​. ಯಡಿಯೂರಪ್ಪ

|

Updated on: Jan 12, 2021 | 5:14 PM

ನಾಳೆ ಬುಧವಾರ (ಜ. 13) ಸಾಯಂಕಾಲ 3.50ಕ್ಕೆ 7-8 ಸಚಿವರು ಪ್ರಮಾಣ ವಚನ ಸ್ವೀಕರಿಸ್ತಾರೆ. ಅವರಿಗೆಲ್ಲ ನಾಳೆ 3.30ಕ್ಕೆ ರಾಜಭವನಕ್ಕೆ ಬರುವಂತೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ತಿಳಿಸಿದ್ದಾರೆ.

ಏಳೆಂಟು ಸಚಿವರು ನಾಳೆ 3.50ಕ್ಕೆ ಪ್ರಮಾಣ ವಚನ ಸ್ವೀಕರಿಸ್ತಾರೆ -ಸಿಎಂ ಬಿ.ಎಸ್​. ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಸಂಪುಟ ವಿಸ್ತರಣೆ
Follow us on

ಬೆಂಗಳೂರು:  ನಾಳೆ ಬುಧವಾರ (ಜ. 13) ಸಾಯಂಕಾಲ 3.50ಕ್ಕೆ 7-8 ಸಚಿವರು ಪ್ರಮಾಣ ವಚನ ಸ್ವೀಕರಿಸ್ತಾರೆ. ಅವರಿಗೆಲ್ಲ ನಾಳೆ 3.30ಕ್ಕೆ ರಾಜಭವನಕ್ಕೆ ಬರುವಂತೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ತಿಳಿಸಿದ್ದಾರೆ.

ಸಂಜೆ ಅಥವಾ ನಾಳೆ ಬೆಳಗ್ಗೆ ನೂತನ ಸಚಿವರ ಪಟ್ಟಿ ಬಿಡುಗಡೆ ಮಾಡುತ್ತೇವೆ. ಅಂತೆಯೇ, ನಾಳೆ ಸಚಿವರಾಗಿ 8 ಶಾಸಕರು ಪದಗ್ರಹಣ ಮಾಡುತ್ತಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ನಾಳೆ ಒಂದು ಸಚಿವ ಸ್ಥಾನ ಖಾಲಿ ಉಳಿಸಿಕೊಳ್ಳುವ ಸಾಧ್ಯತೆ :ಮೂಲಗಳು
ಇತ್ತ, ನಾಳೆ ಒಂದು ಸಚಿವ ಸ್ಥಾನ ಖಾಲಿ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದೆ. ಪ್ರತಿಜ್ಞಾವಿಧಿ ವೇಳೆ 1 ಸ್ಥಾನ ಖಾಲಿ ಉಳಿಸಿಕೊಳ್ಳುವ ಸಾಧ್ಯತೆಯಿದ್ದು ಓರ್ವ ಸಚಿವರ ರಾಜೀನಾಮೆ ಪಡೆದುಕೊಳ್ಳುವ ಸಾಧ್ಯತೆ ಸಹ ಇದೆ ಎಂದು ಹೇಳಲಾಗಿದೆ.

ಜೊತೆಗೆ, ಟಿವಿ9ಗೆ ಸಂಭಾವ್ಯ ಸಚಿವರ ಪಟ್ಟಿ ಲಭ್ಯವಾಗಿದೆ. MTB ನಾಗರಾಜ್, ಆರ್.ಶಂಕರ್, ಮುನಿರತ್ನ ನಾಯ್ಡು, ಉಮೇಶ್ ಕತ್ತಿ, ಮುರುಗೇಶ್‌ ನಿರಾಣಿ, ಎಸ್.ಅಂಗಾರ ಹಾಗೂ MLC ಸಿ.ಪಿ.ಯೋಗೇಶ್ವರ್​ ಹೆಸರು ಬಹುತೇಕ ಅಂತಿಮ​ಗೊಂಡಿದೆ.

ಸಂಪುಟ ವಿಸ್ತರಣೆ ಬಗ್ಗೆ ಯಾರಿಗೂ ಚಿಕ್ಕ ಮಾಹಿತಿಯನ್ನೂ ನೀಡುತ್ತಿಲ್ಲ CM ಯಡಿಯೂರಪ್ಪ; ಸುಮ್ನಿರಿ, ಕಾಯಿರಿ ಎಂದಷ್ಟೇ ಉತ್ತರ!

Published On - 4:56 pm, Tue, 12 January 21